ರಾಜ್ಯಪಾಲ ಹುದ್ದೆ ರಾಜೀನಾಮೆ ಬಳಿಕ ತಮಿಳ್‌ಸಾಯ್‌ ಬಿಜೆಪಿಗೆ ಸೇರ್ಪಡೆ: ಲೋಕಸಭೆಗೆ ಸ್ಪರ್ಧೆ

By Kannadaprabha NewsFirst Published Mar 21, 2024, 10:07 AM IST
Highlights

ಎರಡು ದಿನಗಳ ಹಿಂದಷ್ಟೇ ತೆಲಂಗಾಣದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್‌ ಸೌಂದರ್ ರಾಜನ್ ಬುಧವಾರ ಸೇರ್ಪಡೆಯಾಗಿದ್ದಾರೆ. 

ಚೆನ್ನೈ (ಮಾ.21): ಎರಡು ದಿನಗಳ ಹಿಂದಷ್ಟೇ ತೆಲಂಗಾಣದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್‌ ಸೌಂದರ್ ರಾಜನ್ ಬುಧವಾರ ಸೇರ್ಪಡೆಯಾಗಿದ್ದಾರೆ. ಈ ನಡುವೆ ರಾಜ್ಯಪಾಲರಾಗಿದ್ದವರು ಮರಳಿ ರಾಜಕೀಯ ಪ್ರವೇಶ ಮಾಡಿದ್ದನ್ನು ಟೀಕಿಸಿದ ಡಿಎಂಕೆ ಮತ್ತು ಎಡಪಕ್ಷಗಳ ನಾಯಕರಿಗೆ ತಿರುಗೇಟು ನೀಡಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, 

ಸಾಂವಿಧಾನಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮರಳಿ ಸಾಮಾನ್ಯ ವ್ಯಕ್ತಿಯಂತೆ ಚುನಾವಣೆಗೆ ನಿಲ್ಲುವ ಅವಕಾಶ ಇರುವುದು ಕೇವಲ ಬಿಜೆಪಿಯಲ್ಲಿ ಮಾತ್ರ ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ತಮಿಳ್‌ಸಾಯ್‌ ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಪುದುಚೇರಿ ಮೂಲದವರಾದ ತಮಿಳುಸಾಯಿ ಅವರು ಈ ಹಿಂದೆ ಬಿಜೆಪಿಯಲ್ಲಿಯೇ ಸಕ್ರಿಯರಾಗಿದ್ದರು. ಅವರನ್ನು ಬಿಜೆಪಿ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಇನ್ನೂ ಒಂದು ವರ್ಷದ ಅವಧಿ ಇರುವಾಗಲೇ ಅವರು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪುದುಚೇರಿಯಲಿ ಎನ್‌. ರಂಗಸ್ವಾಮಿ ನೇತೃತ್ವದ ಎನ್‌ಆರ್‌ ಕಾಂಗ್ರೆಸ್‌ ಜತೆಗೆ ಬಿಜೆಪಿ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದೆ. ಈ ಕಾರಣದಿಂದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

Lok Sabha Election 2024: ಪಕ್ಷಗಳ ಉಚಿತ ಸ್ಕೀಂ: ಇಂದು ಸುಪ್ರೀಂಕೋರ್ಟ್ ವಿಚಾರಣೆ

ತಮಿಳುಸಾಯಿ ಅವರ ಹೆಸರು ಪರಿಗಣಿಸಿದೆ. ಒಂದೆರಡು ದಿನದಲ್ಲಿ ಅಧಿಕೃತವಾಗಿ ಅವರ ಹೆಸರು ಪ್ರಕಟವಾಗಬಹುದು ಎನ್ನಲಾಗುತ್ತಿದೆ. ಅಂದಹಾಗೆ ಪುದುಚೇರಿಯಲ್ಲಿ ಎನ್​ಆರ್​ ಕಾಂಗ್ರೆಸ್​- ಬಿಜೆಪಿ ಮೈತ್ರಿಕೂಟದ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 39 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

click me!