ಬದುಕಿದ ಬಡ ಜೀವ: ಮಗು ಅಳು ಕೇಳಿ ಮಹಿಳೆಯ ಬಿಟ್ಟು ಹೋದ ಆನೆ

Published : Mar 14, 2023, 06:07 PM IST
ಬದುಕಿದ ಬಡ ಜೀವ: ಮಗು ಅಳು ಕೇಳಿ ಮಹಿಳೆಯ ಬಿಟ್ಟು ಹೋದ ಆನೆ

ಸಾರಾಂಶ

ಸ್ತ್ರೀ ಅಡುಗೆ ಮನೆಯಿಂದ ಅಂತರಿಕ್ಷಕ್ಕೆ ಹಾರಿದರೂ ಆಕೆಗೆ ಅಬಲೆ ಪಟ್ಟವಿದೆ. ಏಕೆಂದರೆ ಇಂದಿಗೂ ಎಲ್ಲ ಸ್ತ್ರೀಯರು ಸಬಲರಲ್ಲ. ಆದರೆ ಇದೆಲ್ಲವೂ ಪ್ರಾಣಿಗಳಿಗೆ ತಿಳಿದಿರಲು ಸಾಧ್ಯವಿಲ್ಲ. ಆದರೂ ಅವುಗಳ ಕೆಲ ನಡವಳಿಕೆ ಮನುಷ್ಯರಿಗೆ ಬುದ್ಧಿ ಹೇಳುವಂತಿದೆ ಜೊತೆಗೆ ಅಚ್ಚರಿ ಮೂಡಿಸುತ್ತಿದೆ. 

ಕೊಯಮತ್ತೂರು: ಜೀವಿಗಳಲ್ಲೇ ಮನುಷ್ಯ ಅತ್ಯಂತ ಬುದ್ಧಿವಂತ. ಆದರೆ ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳು ಕೂಡ ನಿಮಗಿಂತ ಹೆಚ್ಚು ಬುದ್ಧಿ ನಮಗೂ ಇವೆ ಎಂದು ಸಾಬೀತುಪಡಿಸುತ್ತವೆ. ಅಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಸಾಮಾನ್ಯವಾಗಿ ಸ್ತ್ರೀ ಹಾಗೂ ಮಕ್ಕಳಿಗೆ ಯಾರು ಹಾನಿ ಮಾಡಲು ಬಯಸುವುದಿಲ್ಲ. ಯುದ್ಧದಲ್ಲೂ ಧರ್ಮವಿದೆ. ಸಮಬಲರ ಮಧ್ಯೆ ನಡೆಯುವ ಸಮರಕ್ಕೆ ಮಾನ್ಯತೆ ಇದೆ. ಆದರೆ ಅಸಹಾಯಕ ಅಬಲರೆನಿಸಿದವರ ಮೇಲೆ ದೌರ್ಜನ್ಯ ಹಲ್ಲೆ ಸರಿ ಅಲ್ಲ ಎಂಬುದು ಧರ್ಮಗ್ರಂಥಗಳ ಉಲ್ಲೇಖ. ಸ್ತ್ರೀ ಅಡುಗೆ ಮನೆಯಿಂದ ಅಂತರಿಕ್ಷಕ್ಕೆ ಹಾರಿದರೂ ಆಕೆಗೆ ಅಬಲೆ ಪಟ್ಟವಿದೆ. ಏಕೆಂದರೆ ಇಂದಿಗೂ ಎಲ್ಲ ಸ್ತ್ರೀಯರು ಸಬಲರಲ್ಲ. ಆದರೆ ಇದೆಲ್ಲವೂ ಪ್ರಾಣಿಗಳಿಗೆ ತಿಳಿದಿರಲು ಸಾಧ್ಯವಿಲ್ಲ. ಆದರೂ ಅವುಗಳ ಕೆಲ ನಡವಳಿಕೆ ಮನುಷ್ಯರಿಗೆ ಬುದ್ಧಿ ಹೇಳುವಂತಿದೆ ಜೊತೆಗೆ ಅಚ್ಚರಿ ಮೂಡಿಸುತ್ತಿದೆ. 

ಹೌದು ತಮಿಳುನಾಡಿನ ಕೊಯಂಬತ್ತೂರಿನಲ್ಲಿ (Coimbatore) ಈ ಅಚ್ಚರಿಯ ಘಟನೆ ನಡೆದಿದೆ. ಮಾರ್ಚ್ 7ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ವೃದ್ಧ ಮಹಿಳೆ ಬಾಮಮಣಿ ಎಂಬುವವರಿಗೆ  ಮುಂಜಾನೆ 4 ಗಂಟೆ ಸುಮಾರಿಗೆ ಒಂಟಿ ಸಲಗವೊಂದರ (tusker) ಸದ್ದು ಕೇಳಿಸಿದ್ದು, ಕೂಡಲೇ ಅವರು ತನ್ನ ಸಹೋದರ ಮಗಳೊಂದಿಗೆ ಅಲ್ಲಿಂದ ಓಡಲು ಶುರು ಮಾಡಿದ್ದಾರೆ. ಆದರೆ ಈ ವೇಳೆ ಆನೆಯ ದೃಷ್ಟಿ ಆಕೆಯ ಮೇಲೆ ಬಿದ್ದಿದ್ದು, ಆಕೆಯನ್ನು ನೆಲಕ್ಕೆ ಕೆಡವಿ ದಾಳಿಗೆ ಮುಂದಾಗಿದೆ. ಅಷ್ಟರಲ್ಲಿ ಸಣ್ಣ ಮಗವೊಂದು ಅಳಲು ಶುರು ಮಾಡಿದ್ದು, ಈ ಕೂಗು ಆನೆಗೆ ಕೇಳಿಸಿದ್ದೆ ತಡ ಆನೆ  ಮಹಿಳೆಯನ್ನು ಬಿಟ್ಟು ಅಲ್ಲಿಂದ ದೂರ ಹೋಗಿದೆ.  ನಂತರ ಸ್ಥಳೀಯರು ಬಾಲಮಣಿ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಪುಟ್ಟ ಮಗುವಿಗೆ ಅಪರೂಪದ ಕಾಯಿಲೆ, 11 ಕೋಟಿ ನೆರವು ನೀಡಿದ ಅಪರಿಚಿತ ವ್ಯಕ್ತಿ!

ನನಗೆ ಆನೆ ಘೀಳಿಡುವ ಜೋರಾದ ಸದ್ದು ಕೇಳಿಸಿತ್ತು. ನಾನು ಹೋಗಿ ನೋಡಿದ್ದು, ನಂತರ ಮಗುವಿನೊಂದಿಗೆ ಓಡಲು ಶುರು ಮಾಡಿದೆ. ಈ ವೇಳೆ ಆನೆ ನನ್ನನ್ನು ನೆಲಕ್ಕೆ ಕೆಡವಿತ್ತು. ನಂತರ ಏನಾಯಿತೆಂಬುದೇ ನನಗೆ ತಿಳಿಯದು. ನನಗೆ ಎಚ್ಚರವಾದಾಗ ಮಗು ಅಳುವುದು ಮಾತ್ರ ನನಗೆ ಕೇಳಿಸಿತು ಎಂದು ಬಾಲಮಣಿ ಹೇಳಿದ್ದಾರೆ. 

ಮಗುವಿನ ತಾಯಿ ರೇವತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಗು ಬಾಲಮಣಿ (Balamani) ಅವರ ಸಮೀಪವೇ ಇತ್ತು. ಮಗುವಿನ ಅಳು ಕೇಳಿ ಆನೆ ಬಾಲಮಣಿಯನ್ನು ಬಿಟ್ಟು ಹೋಗಿದೆ. ಈ ಘಟನೆ ನಡೆದ ಸ್ಥಳದಲ್ಲಿ  ಮಾನವ ಹಾಗೂ ಪ್ರಾಣಿ ಸಂಘರ್ಷ ಸಾಮಾನ್ಯ ಎನಿಸಿದೆ.  ಅನೈಕಟ್ಟಿ ಪ್ರದೇಶದಲ್ಲಿ (Aanaikatti region) ನೀರಾವರಿ ಸೌಲಭ್ಯ ಕಡಿಮೆ ಇರುವ ಕಾರಣ ಅನೇಕ ಆನೆಗಳು ನೀರು ಅರಸಿ ಜನವಸತಿ ಪ್ರದೇಶದತ್ತ ಆಗಮಿಸುತ್ತವೆ.  ಅದೇನೆ ಇರಲಿ ಆನೆಯೊಂದು ಮಗುವಿನ ಅಳುವ ಸದ್ದು ಕೇಳಿ ಮಹಿಳೆಯನ್ನು ಜೀವ ಸಹಿತ ಬಿಟ್ಟು ಹೋಗಿದ್ದು ಅಚ್ಚರಿಯೇ ಸರಿ.  ಪ್ರಾಣಿಗಳಿಗೂ ಮಾನವೀಯತೆ ಇದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ಆನೆ ಆರೈಕೆ ಕಷ್ಟಕ್ಕಿಂತ ಅದರ ಪ್ರೀತಿಯೇ ಮಿಗಿಲು, ಸಾಕ್ಷ್ಯಚಿತ್ರ ಗೆಲುವು ಸಂಭ್ರಮಿಸಿದ ಬೆಳ್ಳಿ!

ಬಹುಶಃ ಶಂಕರಾಚಾರ್ಯರು (Shankaracharya) ಶಾರದಾ ಪೀಠವನ್ನು (Sharada Mutt) ಶೃಂಗೇರಿಯಲ್ಲಿ ಸ್ಥಾಪಿಸಲು ಕಾರಣವಾದ ಕತೆ ನಿಮಗೆ ಗೊತ್ತಿರಬಹುದು. ಈ ಕತೆಯೂ ಪ್ರಾಣಿಗಳಲ್ಲೂ ಒಂದು ನ್ಯಾಯನೀತಿ ಇದೆ ಎಂಬುದನ್ನು ಸಾಬೀತುಪಡಿಸಿದೆ. ಶಾರದಾ ಮೂರ್ತಿಯನ್ನು ಸ್ಥಾಪಿಸುವುದಕ್ಕಾಗಿ ಕಾಶ್ಮೀರದಿಂದ ತೆಗೆದುಕೊಂಡು ಬಂದ ಶಂಕರಾಚಾರ್ಯರಿಗೆ ಶೃಂಗೇರಿಯಲ್ಲಿ ಒಂದು ಅಚ್ಚರಿಯ ದೃಶ್ಯ ಗಮನ ಸೆಳೆದು ಇದೊಂದು ಪ್ರಶಸ್ತವಾದ ಸ್ಥಳ ಎಂದು ಅಲ್ಲೇ ಶಾರದಾ ಪೀಠ ಸ್ಥಾಪನೆಗೆ ಮುಂದಾದರು. ಆಹಾರ ಸರಪಣಿಯಂತೆ ಕಪ್ಪೆ ಹಾವಿನ ಆಹಾರ ಆದರೆ ಅಲ್ಲಿ ಸುರಿವ ಮಳೆಯ ಮಧ್ಯೆ ಕಪ್ಪೆಯೊಂದು ಜನ್ಮ ನೀಡಲು ಕಷ್ಟಪಡುತ್ತಿದ್ದಾರೆ, ಆಹಾರ ಸರಪಣಿಯಂತೆ ಅದನ್ನು ಸೇವಿಸಬೇಕಾದ ಹಾವು ಹಾಗೆ ಮಾಡುವ ಬದಲು ಅದಕ್ಕೆ ರಕ್ಷಣೆಯಾಗಿ ತನ್ನ ಹಡೆಯನ್ನೇ ವಿಸ್ತಾರವಾಗಿ ಚಾಚಿತ್ತು. ಇದರಿಂದ ಪ್ರಭಾವಿತರಾದ ಶಂಕರಾಚಾರ್ಯರು ಅಲ್ಲಿ ಮಠ ಸ್ಥಾಪನೆಗೆ ಮುಂದಾದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು