ಸಂಗೀತ ನಿರ್ದೇಶಕ ಇಳಯರಾಜಗೆ ತಮಿಳುನಾಡಿನ ದೇಗುಲದಲ್ಲಿ ಪ್ರವೇಶ ನಿರಾಕರಣೆ

By Anusha Kb  |  First Published Dec 17, 2024, 8:48 AM IST

ಸಂಗೀತ ಸಂಯೋಜಕ ಇಳಯರಾಜರಿಗೆ ತಮಿಳುನಾಡಿನ ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನದ ಅರ್ಥ ಮಂಟಪಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.


ತಮಿಳುನಾಡಿನ ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನದ ಅರ್ಥ ಮಂಟಪಕ್ಕೆ ಸಂಗೀತ ಸಂಯೋಜಕ ಇಳಯರಾಜ  ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅರ್ಚಕರು, ಜೀಯರು ಮತ್ತು ಸಿಬ್ಬಂದಿಗೆ ಮಾತ್ರ ಒಳಗೆ ಪ್ರವೇಶವಿದೆ ಎಂದು ದೇವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ ದೇಗುಲದ ಸಿಬ್ಬಂದಿ ಇಳಯರಾಜ ಅವರನ್ನು ಅರ್ಧದಲ್ಲೇ ತಡೆದರು ಎಂದು ವರದಿಯಾಗಿದೆ. ಹೀಗಾಗಿ ಇಳಯರಾಜ ಅವರು ಪ್ರವೇಶದ್ವಾರದಿಂದಲೇ ಪ್ರಾರ್ಥನೆ ಸಲ್ಲಿಸಿದರು ಎಂದು ವರದಿಯಾಗಿದೆ. 

ಆದರೆ  ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಗೀತ ಮಂತ್ರಿಕ ಇಳಯರಾಜ ಅಂತಹ ಘಟನೆ ನಡೆದಿಲ್ಲ, ಸುಮ್ಮನೆ ವರದಿಗಳನ್ನು ಹಬ್ಬಿಸಲಾಗುತ್ತಿದೆ  ಇಂತಹ ಊಹಾಪೋಹಗಳನ್ನು ನಂಬದಿರುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿರುವ ಅಂಡಾಳಮ್ಮ ದೇಗುಲದಲ್ಲಿ ಈ ಘಟನೆ ನಡೆದಿದೆ. ಇತ್ತ ಇಳಯರಾಜ ಅವರಿಗೆ ದೇಗುಲಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ವರದಿ ವೈರಲ್ ಆಗುತ್ತಿದ್ದಂತೆ ತಮಿಳುನಾಡಿನ ಹಿಂದೂ ಧಾರ್ಮಿಕದತ್ತಿ ಇಲಾಖೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು,  ಅರ್ಥ ಮಂಟಪಕ್ಕೆ ಕೇವಲ ಪುರೋಹಿತರು, ದೇಗುಲದ ಸಿಬ್ಬಂದಿ ಹಾಗೂ ಜೀಯರ್‌ಗಳಿಗೆ ಮಾತ್ರ ಅವಕಾಶವಿದೆ ಹೀಗಾಗಿ ಸಂಗೀತಾ ಮಾಂತ್ರಿಕ ಇಳಯರಾಜ ಅವರಿಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅರ್ಥ ಮಂಟಪ ಎಂದರೆ ಗರ್ಭಗುಡಿಯ ಸರಿ ಎದುರಿಗೆ ಇರುವ ಮಂಟಪವಾಗಿದೆ. 

click me!