ಚೆನ್ನೈ(ಮೇ.21): ದೇವಾಯಲದ ಸಂಪತ್ತು, ಆಡಳಿತ, ಸಿಬ್ಬಂದಿ ಕುರಿತ ಮಾಹಿತಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಅದನ್ನು ಸಾರ್ವಜನಿಕರಿಗೆ ಕಾಣುವಂತೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ಸದ್ಗುರು ಸ್ವಾಗತಿಸಿದ್ದಾರೆ. ಇಶಾ ಫೌಂಡೇಷನ್ ಸ್ಥಾಪಕ ಜಗ್ಗಿ ವಾಸುದೇವ್ ಸರ್ಕಾರದ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸರಿಯಾದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆ ಎಂದು ಕರೆದ ಸದ್ಗುರು, ಸರ್ಕಾರ ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಶುಭಾಶಯ ತಿಳಿಸಿದ್ದಾರೆ. ಪಾರದರ್ಶಕತೆ ಉತ್ತಮ ಆಡಳಿತದ ಕಡೆಗಿನ ಮೊದಲ ಹೆಜ್ಜೆ ಎಂದಿದ್ದಾರೆ.
ಚಿಂತೆ ಮಾಡೋ ಸಮಯ ಅಲ್ಲ, ಪಾಸಿಟಿವಿಟಿ ಬಗ್ಗೆ ಸದ್ಗುರು ಸಲಹೆ...
ಸಚಿವ ಶೇಖರ್ ಬಾಬು ದೇವಾಲಯ ಕುರಿತ ಮಾಹಿತಿ, ಸಂಪತ್ತಿನ ಮಾಹಿತಿ, ಆಡಳಿತದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹಾಕುವಂತೆ ಸೂಚಿಸಿದ ನಂತರ ಸದ್ಗುರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಸದ್ಗುರು ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ಇದು ನನ್ಸೆನ್ಸ್, ದೇವಾಲಯಗಳನ್ನು ಸರ್ಕಾರದ ಸ್ವಾಧೀನದಿಂದ ಕಸಿಯುವ ಸದ್ಗುರು ತಂತ್ರ ಎಂದು ಟೀಕಿಸಿದ್ದರು.
ಸದ್ಗುರು ಈ ವರ್ಷದ ಆರಂಭದಲ್ಲಿ ಫ್ರೀ TN ದೇವಾಲಯ ಎಂಬ ಅಭಿಯಾನ ಆರಂಭಿಸಿದ್ದರು. ದೇವಾಲಯದಲ್ಲಿ ಸರ್ಕಾರದ ಅಧಿಕಾರ ಕೊನೆಗೊಳಿಸುವುದರ ಜೊತೆಗೆ ದೇವಾಲಯದ ನಿರ್ವಹಣೆ ಪರಿಶೀಲಿಸಲು ಮೂರನೇ ತಂಡವೊಂದು ಅಡಿಟ್ ಪರಿಶೀಲಿಸಬೇಕೆಂದು ಆಗ್ರಹಿಸಿತ್ತು. ಈ ವಿಚಾರವಾಗಿ ಮೇ 1ರಂದು ಸದ್ಗುರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರಲ್ಲಿ ಅದ್ಗುರು 44 ಸಾವಿರ ದೇವಾಲಯದ ಎಕ್ಸಟರ್ನಲ್ ಅಡಿಟ್ ಮಾಡುವಂತೆ ಕೇಳಿದ್ದರು.