ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ; ಚೆನ್ನೈ ಸೇರಿ 27 ಜಿಲ್ಲೆಯಲ್ಲಿ ಷರತ್ತುಬದ್ಧ ವಿನಾಯಿತಿ!

By Suvarna NewsFirst Published Jun 5, 2021, 9:34 PM IST
Highlights
  • ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ಮತ್ತೊಂದು ವಾರ ವಿಸ್ತರಣೆ
  • ಷರತ್ತುಗಳೊಂದಿಗೆ 27 ಜಿಲ್ಲೆಗಳಲ್ಲಿ ಕೆಲ ಕ್ಷೇತ್ರಕ್ಕೆ ವಿನಾಯಿತಿ
  • ಜೂನ್ 14ರ ವರೆಗೆ ಲಾಕ್‌ಡೌನ್ ಎಂದ ತಮಿಳುನಾಡು ಸರ್ಕಾರ

ಚೆನ್ನೈ(ಜೂ.05): ಕೊರೋನಾ ವೈರಸ್ ನಿಯಂತ್ರಣಕ್ಕೆ ಬಹುತೇಕ ರಾಜ್ಯಗಳು ಲಾಕ್‌ಡೌನ್ ವಿಸ್ತರಿಸಿದೆ. ಇದೀಗ ತಮಿಳುನಾಡು ಸರ್ಕಾರ ಕೂಡ ಲಾಕ್‌ಡೌನ್ ವಿಸ್ತರಿಸಿದೆ. ಜೂನ್ 14ರ ವರೆಗೆ ತಮಿಳುನಾಡಿನಲ್ಲಿ ಲಾಕ್‌ಡೌನ್ ವಿಸ್ತರಿಸಿದೆ. ಇದರ ಜೊತೆ ಕೆಲ ವಿನಾಯಿತಿ ನೀಡಿದೆ.

ಅನ್‌ಲಾಕ್‌ ಸುಳಿವು ನೀಡಿದ ಸಿಎಂ ಯಡಿಯೂರಪ್ಪ, ಷರತ್ತುಗಳು ಅನ್ವಯ!

ಕೊರೋನಾ ನಿಯಂತ್ರಣಕ್ಕೆ ಬಂದಿರುವ ಚೆನ್ನೈ ಸೇರಿದಂತೆ 27 ಜಿಲ್ಲೆಗಳಲ್ಲಿ ಕೆಲ ವಿನಾಯತಿ ನೀಡಲಾಗಿದೆ. ಆದರೆ ಕೊಯಂಬತ್ತೂರು, ಇರೋಡು, ಸೇಲಂ, ಕರೂರು ಸೇರಿದಂತೆ 11 ಜಿಲ್ಲೆಗಳನ್ನು ಕೊರೋನಾ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಆದರೆ ನಿಯಂತ್ರಣಕ್ಕೆ ಬರದ ಜಿಲ್ಲೆಗಳಲ್ಲಿ  ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ. 

ಹೊಸ ಮಾರ್ಗಸೂಚಿ ಪ್ರಕಟಿಸಿರುವ ತಮಿಳುನಾಡು ಸರ್ಕಾರ ಕೆಲ ವಿನಾಯಿತಿಯನ್ನು ಘೋಷಿಸಿದೆ. ಅಗತ್ಯ ವಸ್ತು ಸೇವೆ ಹಾಗೂ ತುರ್ತು ಸೇವೆಗಳು ಬೆಳಗ್ಗೆ 6 ರಿಂದ ಸಂಜೆ 5 ಗಂಟೆ ವರೆಗೆ ಇರಲಿದೆ. ಫುಟ್‌ಪಾತ್ ಬದಿಯಲ್ಲಿ ತರಕಾರಿ ಹಾಗೂ ಹಣ್ಣು ಮಾರಾಟಗಾರರಿಗೆ ಅವಕಾಶ ನೀಡಲಾಗಿದೆ. 

5 ಹಂತಗಳಲ್ಲಿ ಮಹಾ​ ಅನ್‌​ಲಾಕ್‌?: ರಾಜ್ಯದ 36 ಜಿಲ್ಲೆಗಳು ವಿಂಗಡನೆ!

ಸರ್ಕಾರಿ ಕಚೇರಿಗಳಲ್ಲಿ ಶೇಕಡಾ 30 ರಷ್ಟು ಉದ್ಯೋಗಿಗಳ ಹಾಜರಾತಿಗೆ ಅವಕಾಶ ನೀಡಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಿಸಲಿದೆ. ಆದರೆ ಪ್ರತಿ ದಿನ 50 ಟೋಕನ್ ಮಾತ್ರ ನೀಡಲಾಗುತ್ತದೆ. ಕಾರ್ಖಾನೆ, ಕೈಗಾರಿಕೆಗಳಲ್ಲಿ ಶೇಕಡಾ 50 ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ.

ಇ ರಿಜಿಸ್ಟ್ರೇಶನ್ ಮೂಲಕ ಪ್ಲಂಬಿಂಕ್, ಎಲೆಕ್ಟ್ರಲ್ ಕೆಲಸಗಾರರು ಕೆಲಸಕ್ಕೆ ತೆರಳಬಹುದು. ಟ್ಯಾಕ್ಸಿ, ಆಟೋ ಸೇವೆಗೆ ಅವಕಾಶ ನೀಡಲಾಗಿದೆ. ಆದರೆ ಕೊರೋನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು.

click me!