
ಲಖನೌ(ಜೂ.05): ಕೊರೋನಾ ವೈರಸ್ ಕಾರಣ ಹಲವರು ಸ್ಟ್ರೀಟ್ ಫುಡ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಸಾಲ್ ಪೂರಿ, ಪಾನಿಪೂರಿ ಸೇರಿದಂತೆ ಬಾಯಲ್ಲಿ ನೀರೂರಿಸುವ ಹತ್ತು ಹಲವು ತಿನಿಸುಗಳು ಸಿಗದೆ ಸೊರಗಿ ಹೋದವರೂ ಇದ್ದಾರೆ. ಇದೀಗ ಗೋಲ್‌ಗಪ್ಪಾ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇಲ್ಲೊಂದು ವಿಡಿಯೋ ಇದೆ. ಇದು ಹಸು ಹಾಗೂ ಕರು ಗೋಲ್‌ಗಪ್ಪ ತಿಂದು ಸಂಭ್ರಮಿಸಿದ ವೈರಲ್ ವಿಡಿಯೋ.
ಮಾಲೀಕನ ಕಾರು ಪಾರ್ಕ್ ಮಾಡಲು ನೆರವಾದ ಮುದ್ದು ನಾಯಿ; ವಿಡಿಯೋ ವೈರಲ್!
ಸ್ನೇಹಿತರೆಲ್ಲಾ ಗೋಲ್‌ಗಪ್ಪಾ ಸ್ಟ್ರೀಟ್ ಶಾಪ್‌ಗೆ ತೆರಳಿದಾಗ ಅದೆಷ್ಟು ವೇಗದಲ್ಲಿ ಗೋಲ್‌ಗಪ್ಪಾ ರೆಡಿ ಮಾಡಿ ಹಂಚುತ್ತಾರೆ ಅನ್ನೋದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಅದೇ ರೀತಿ ಹಸು ಹಾಗೂ ಕರು ಗೋಲ್‌ಗಪ್ಪಾ ಮಾರಾಟಗಾರನತ್ತ ತೆರಳಿದೆ. ಹಸು ಹಾಗೂ ಕರುವಿಗೆ ಒಂದೊಂದೆ ಗೋಲ್‌ಗಪ್ಪಾ ತಿನ್ನಿಸಿದ ಈ ವಿಡಿಯೋ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ.
ತಾಯಿ ಜೊತೆ ನದಿ ದಾಟಿದ ಸಿಂಹದ ಮರಿ; ಮುದ್ದಾದ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ!
ಈ ಗೋಲ್‌ಗಪ್ಪಾ ಸಂಭ್ರಮ ವಿಡಿಯೋ ಲಖನೌದ ರೆಡ್ ಹಿಲ್ ಕಾನ್ವೆಂಟ್ ಸ್ಕೂಲ್ ಬಳಿ ನಡೆದಿದೆ. ಈ ಗೋಲ್‌ಗಪ್ಪಾ ಅಂಗಡಿಯಾತ ಪ್ರತಿ ದಿನ ಬೀದಿ ನಾಯಿಗಳಿಗೆ ಬ್ರೆಡ್, ಬಿಸ್ಕಡ್ ನೀಡುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಇದೀಗ ಗೋಲ್‌ಗಪ್ಪಾ ವಿಡಿಯೋ ಮೂಲಕ ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ