ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ: ಕಾಂಗ್ರೆಸ್ ತನ್ನ ಹಳೇ ಬುದ್ಧಿ ಬಿಟ್ಟಿಲ್ಲ, ಡಿಎಂಕೆ ಕಿಡಿ

Kannadaprabha News, Ravi Janekal |   | Kannada Prabha
Published : May 08, 2026, 10:16 AM IST
Tamil nadu government formation DMK party slams congress party

ಸಾರಾಂಶ

ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದ ರಾಜ್ಯಪಾಲರ ನಡೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಮತ್ತೊಂದೆಡೆ, ಮೈತ್ರಿ ಮುರಿದು ವಿಜಯ್‌ಗೆ ಬೆಂಬಲ ನೀಡಿದ ಕಾಂಗ್ರೆಸ್ ವಿರುದ್ಧ ಡಿಎಂಕೆ, 'ಬೆನ್ನಿಗೆ ಚೂರಿ ಹಾಕಿದೆ' ಎಂದು ತೀವ್ರ ಅಸಮಾಧಾನ.

ಚೆನ್ನೈ (ಮೇ.8): ತಮಿಳುನಾಡಿನಲ್ಲಿ ಅತಂತ್ರ ಫಲಿತಾಂಶ ಬಳಿಕ ಮೈತ್ರಿ ಕಡಿದುಕೊಂಡು ವಿಜಯ್‌ರ ಟಿವಿಕೆ ಬೆಂಬಲಿಸಿದ ಕಾಂಗ್ರೆಸ್‌ ವಿರುದ್ಧ ಡಿಎಂಕೆ ಕಿಡಿಕಾರಿದೆ. ‘ ಕಾಂಗ್ರೆಸ್‌ ಹಿಂದಿನಿಂದ ಚೂರಿ ಹಾಕಿ ದ್ರೋಹ ಮಾಡಿದೆ’ ಎಂದು ವಾಗ್ದಾಳಿ ನಡೆಸಿದೆ.

ನಿರ್ಗಮಿತ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಸ್ಟಾಲಿನ್‌ ನೇತೃತ್ವದಲ್ಲಿ ನೂತನ ಶಾಸಕರ ಸಭೆ ನಡೆದಿದೆ. ಈ ವೇಳೆ ಒಂದು ಕಾಲದ ಮಿತ್ರ ಕಾಂಗ್ರೆಸ್ ವಿರುದ್ಧ ಡಿಎಂಕೆ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ‘ ಬಿಜೆಪಿ ಹಲವು ರಾಜ್ಯಗಳಲ್ಲಿ ಮಾಡಿದಂತೆ ಕಾಂಗ್ರೆಸ್‌ ನಮಗೆ ತಮಿಳುನಾಡಿನಲ್ಲಿ ಮಾಡಿದೆ. ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ.  ಇದು ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣ. ತನ್ನ ಹಳೆಯ ಬುದ್ಧಿಯನ್ನು ಇದು ಬಿಟ್ಟಿಲ್ಲ ಎಂದು ತೋರಿಸುತ್ತದೆ. ನಮ್ಮ ಪಕ್ಷದ ನಾಯಕನ ಬೆನ್ನಿಗೆ ಚೂರಿಯಿಂದ ಇರಿದ ಕಾಂಗ್ರೆಸ್ ದೊಡ್ಡ ದ್ರೋಹ ಮಾಡಿದೆ. ಗೆಲುವಿಗೆ ಧನ್ಯವಾದ ಹೇಳಲು ಸಹ ಖುದ್ದಾಗಿ ಬರಲಿಲ್ಲ’ ಎಂದು ಕಿಡಿಕಾರಿದರು.

ವಿಜಯ್ ಸರ್ಕಾರ ರಚನೆ ರಾಜ್ಯಪಾಲರು ಅಡ್ಡಿ ಮಾಡೋದು ಸರಿಯಲ್ಲ: ಡಿಕೆಶಿ

ಬೆಂಗಳೂರು (ಮೇ.8): ತಮಿಳುನಾಡಿನಲ್ಲಿ ವಿಜಯ್‌ ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆದಿರುವ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯಪಾಲರು ವಿಜಯ್‌ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಈ ಹಿಂದೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳಿಗೆ ಸರ್ಕಾರ ರಚಿಸಲು ಹಿಂದೆಯೂ ಹಲವೆಡೆ ಅನುಮತಿಸಲಾಗಿತ್ತು. ರಾಷ್ಟ್ರಪತಿಗಳಾದ ನಾರಾಯಣನ್‌, ಅಬ್ದುಲ್‌ ಕಲಾಂ ಅವರೂ ಈ ರೀತಿ ಮಾಡಿದ್ದರು.

ವಾಜಪೇಯಿ ಅವರಿಗೂ ಇದೇ ರೀತಿ ಸರ್ಕಾರ ರಚಿಸಲು ಅನುಮತಿಸಿ, ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು ಎಂದರು.

ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಬಹುಮತ ಸಾಬೀತಾಗದಿದ್ದರೆ ಮುಂದಿನ ಆಯ್ಕೆ ನೋಡಬಹುದು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

West Bengal fish pond conflict: ಚುನಾವಣಾ ಹಿಂಸಾಚಾರ ಆಯ್ತು, ಈಗ ಪಶ್ಚಿಮ ಬಂಗಾಳದಲ್ಲೀಗ ಮೀನುಗಾರಿಕೆ ಕೆರೆಗಳ ಹಿಡಿತಕ್ಕಾಗಿ ಸಂಘರ್ಷ
ಯಾರಿಗೆ ಒಲಿಯಲಿದೆ ಕೇರಳ ಸಿಎಂ ಪಟ್ಟ? ಖರ್ಗೆ ಹೆಗಲಿಗೆ ಆಯ್ಕೆ ನಿರ್ಧಾರ