ಗಿನ್ನೆಸ್ ದಾಖಲೆ ಮುರಿದ ತಮಿಳುನಾಡಿನ ಬಾಲಕ

Suvarna News   | Asianet News
Published : Mar 15, 2022, 01:02 PM IST
ಗಿನ್ನೆಸ್ ದಾಖಲೆ ಮುರಿದ ತಮಿಳುನಾಡಿನ ಬಾಲಕ

ಸಾರಾಂಶ

ಒಂದು ನಿಮಿಷದಲ್ಲಿ 60 ಡಿಸಿ ಕಾಮಿಕ್ಸ್ ಪಾತ್ರಗಳನ್ನು ಗುರುತಿಸಿದ ಬಾಲಕ ತಮಿಳುನಾಡಿನ ಪುಟ್ಟ ಬಾಲಕ ನಿದೀಶ್ ವಿ ಬಿಯಿಂದ ಸಾಧನೆ ನಟನೆಯಲ್ಲೂ ಮುಂದಿರುವ ನಿದೀಶ್ ವಿ ಬಿ

ತಮಿಳುನಾಡಿನ ಪುಟ್ಟ ಬಾಲಕನೋರ್ವ ಒಂದು ನಿಮಿಷದಲ್ಲಿ 60 ಡಿಸಿ ಕಾಮಿಕ್ಸ್ ಪಾತ್ರಗಳನ್ನು ಗುರುತಿಸುವ ಮೂಲಕ ಈ ಹಿಂದೆ ಇದ್ದ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾನೆ. ನಿದೀಶ್ ವಿ ಬಿ (Nidish V B) ಎಂಬಾತನೇ ಈ ಸಾಧನೆ ಮಾಡಿದ ಬಾಲಕ. ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈತ ಒಂದು ನಿಮಿಷದಲ್ಲಿ  ಪರದೆಯ ಮೇಲೆ ಬ್ಯಾಟ್‌ಮ್ಯಾನ್, ಸೂಪರ್‌ಮ್ಯಾನ್, ವಂಡರ್ ವುಮನ್, ಜೋಕರ್ ಸೇರಿದಂತೆ ಒಟ್ಟು 60 ಡಿಸಿ ಕಾಮಿಕ್ಸ್ ಪಾತ್ರಗಳನ್ನು ಗುರುತಿಸಿದ್ದಾನೆ. 

ಒಂದು ನಿಮಿಷದಲ್ಲಿ ಅತೀ ಹೆಚ್ಚು ಗುರುತಿಸಲಾದ ಡಿಸಿ ಕಾಮಿಕ್ಸ್ ಪಾತ್ರಗಳು 60, ಫೆಬ್ರವರಿ  19  2022 ರಂದು ಭಾರತದ ತಮಿಳುನಾಡಿನಲ್ಲಿ ನಿದೀಶ್‌ ವಿಬಿ (ಭಾರತ) ಅವರು ಈ ಸಾಧನೆ ಮಾಡಿದ್ದಾರೆ. ನಿದೀಶ್‌ ಡಿಸಿ ಕಾಮಿಕ್ಸ್ ಪಾತ್ರಗಳ ಸರಣಿಯ ದೊಡ್ಡ ಅಭಿಮಾನಿ ಎಂದು ಗಿನ್ನಿಸ್ ವಿಶ್ವ ದಾಖಲೆ ಉಲ್ಲೇಖಿಸಿದೆ. ತಮಿಳು ನಟ ರಾಜ್ ಕಮಲ್ (Raj Kamal) ಈ ಪುಟ್ಟ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ ಹೋಲ್ಡರ್ ಜೊತೆಗೆ ತಮ್ಮ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪುಟ್ಟ ಹುಡುಗನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ... ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗಳನ್ನು ಗಳಿಸಿದ್ದಕ್ಕಾಗಿ ಧನ್ಯವಾದ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ಬರೆದಿದ್ದಾರೆ. 

Food Recrod: ಗಿನ್ನಿಸ್ ದಾಖಲೆಯಲ್ಲಿ ಉಗಾಂಡದ ಎಗ್ ರೋಲೆಕ್ಸ್..ಏನಿದು ?

ಈ ಹಿಂದೆ ಒಂದು ನಿಮಿಷದಲ್ಲಿ ಡಿಸಿ ಕಾಮಿಕ್ಸ್ ಪಾತ್ರಗಳ 52 ಪಾತ್ರಗಳನ್ನು ಗುರುತಿಸಿದ್ದು ವಿಶ್ವ ದಾಖಲೆ ಪುಟ ಸೇರಿತ್ತು. ಇದನ್ನು ನಿದೀಶ್‌ ಮುರಿದಿದ್ದಾರೆ. ನಿದೀಶ್ ಒಬ್ಬ ನಟನೂ ಆಗಿದ್ದು,  ಅತ್ಯಾಸಕ್ತಿಯ Instagram ಬಳಕೆದಾರನೂ ಆಗಿದ್ದಾನೆ. ಹಲವು ಇನ್ಸ್ಟಾಗ್ರಾಮ್‌ ರೀಲ್‌ಗಳನ್ನು ಅವರು ಮಾಡಿದ್ದಾರೆ. 

ಕೆಲದಿನಗಳ ಹಿಂದೆ ವ್ಯಕ್ತಿಯೊಬ್ಬರು ಒಂದೇ ಗಿಡದಲ್ಲಿ  1200 ಕ್ಕೂ ಹೆಚ್ಚು ಟೊಮೆಟೊಗಳನ್ನು ಬೆಳೆದು ಗಿನ್ನೆಸ್‌ ಬುಕ್ ಆಫ್‌ ರೆಕಾರ್ಡ್ ಪುಟ ಸೇರಿದ್ದಾರೆ. ಡೌಗ್ಲಾಸ್ ಸ್ಮಿತ್ ಎಂಬ ವ್ಯಕ್ತಿ ಒಂದೇ ಗಿಡದಲ್ಲಿ 1,269 ಟೊಮೆಟೊಗಳನ್ನು ಬೆಳೆದು ತಮ್ಮದೇ ಹೆಸರಿನಲ್ಲಿದ್ದ ಹಳೇ ದಾಖಲೆಯನ್ನು ಮುರಿದರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇಡೀ ಜಗತ್ತೇ ಲಾಕ್‌ಡೌನ್‌ ಆಗಿತ್ತು. ಆ ಸಂದರ್ಭವನ್ನು ಅನೇಕರು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗೆಯೇ ಯುಕೆ ನಿವಾಸಿ ಡೌಗ್ಲಾಸ್ ಸ್ಮಿತ್‌ ಅವರು  ತೋಟಗಾರಿಕೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವ ಅವಕಾಶ ಪಡೆದು ಈ ಸಾಧನೆ ಮಾಡಿದ್ದಾರೆ. ಇದರ ಪರಿಣಾಮವಾಗಿ, ಸ್ಮಿತ್ 2021 ರಲ್ಲಿ ಒಂದೇ ಗಿಡದಲ್ಲಿ 839 ಟೊಮೆಟೊಗಳನ್ನು ಉತ್ಪಾದಿಸುವ ಟೊಮೆಟೊ ಸಸ್ಯವನ್ನು ಬೆಳೆಸಿದರು. ಇದಾಗಿ ಕೆಲವೇ ತಿಂಗಳುಗಳಲ್ಲಿ, ಅವರು ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ. 

ಟೊಮೆಟೊ ಬೆಳೆದು ಗಿನ್ನೆಸ್ ದಾಖಲೆ : ಒಂದೇ ಗಿಡದಲ್ಲಿ 1200 ಹೆಚ್ಚು ಟೊಮೆಟೋ
 

ಸ್ಮಿತ್ ಅವರು ಈಗ ಮತ್ತೊಂದು ಹಸಿರುಮನೆಯಲ್ಲಿ ಬೆಳೆದ ಟೊಮೆಟೋ (tomato) ಗಿಡದಲ್ಲಿ ಅದಕ್ಕಿಂತ ಹೆಚ್ಚು ಟೊಮೆಟೋಗಳನ್ನು ಬೆಳೆಸಿ ತಮ್ಮದೇ ಹಿಂದಿನ ದಾಖಲೆಯನ್ನು ಮೀರಿದ್ದಾರೆ. ಈ ವರ್ಷದ ಮಾರ್ಚ್ 9 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಿಬ್ಬಂದಿ ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಾರಿ ಅವರು ಒಂದೇ ಗಿಡದಲ್ಲಿ  1,269 ಟೊಮೆಟೊಗಳನ್ನು ಉತ್ಪಾದಿಸಿದ್ದಾರೆ. ಸೆಪ್ಟೆಂಬರ್ 27, 2021 ರ ವೇಳೆಗೆ ಈ ಟೊಮೆಟೊ ಸಸ್ಯವನ್ನು ಸಂಪೂರ್ಣವಾಗಿ ಬೆಳೆಸಲಾಗಿತ್ತು. ಈ ಔಪಚಾರಿಕ ದಾಖಲೆಯ ಅನುಮೋದನೆಯನ್ನು ನೀಡುವ ಮೊದಲು ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಳ್ಳಲು ವಾರಗಳನ್ನು ತೆಗೆದುಕೊಂಡಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !