Karnataka Hijab Row ತೀರ್ಪನ್ನು ಒಪ್ಪದೇ ಇರುವುದು ಕೂಡ ನನ್ನ ಹಕ್ಕು ಎಂದ ಅಸಾದುದ್ದೀನ್ ಓವೈಸಿ!

By Suvarna News  |  First Published Mar 15, 2022, 12:48 PM IST

ಸಮವಸ್ತ್ರ ಕಡ್ಡಾಯ ತೀರ್ಪಿಗೆ ಅಸಾಸುದ್ದೀನ್ ಓವೈಸಿ ಅಸಮಾಧಾನ

15 ಸರಣಿ ಟ್ವೀಟ್ ಮಾಡಿದ ಎಐಎಂಐಎಂ ಸಂಸದ

ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ಟ್ವೀಟ್


ನವದೆಹಲಿ (ಮಾ. 15): ಭಾರೀ ವಿವಾದಕ್ಕೆ ಕಾರಣವಾಗಿ ವಿಶ್ವದಾದ್ಯಂತ ಕರ್ನಾಟಕ (Karnataka) ಗಮನಸೆಳೆಯುವಂತೆ ಮಾಡಿದ್ದ ಹಿಜಾಬ್ ಪ್ರಕರಣಕ್ಕೆ (Hijab Issue) ಸಂಬಂದಪಟ್ಟಂತೆ ಕರ್ನಾಟಕ ಹೈಕೋರ್ಟ್ (Karnataka High Court) ಮಂಗಳವಾರ ಬೆಳಗ್ಗೆ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಹಿಜಾಬ್, ಕೇಸರಿ ಶಾಲು ಯಾವುದೂ ಬೇಡ. ಸರ್ಕಾರ ಹಾಗೂ ಆಡಳಿತ ಮಂಡಳಿ ಸೂಚಿಸಿದ ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು ಎಂದು ಆದೇಶ  ನೀಡಿದೆ.

ಇದರ ಬೆನ್ನಲ್ಲೇ ದೇಶದ ಮುಸ್ಲಿಂ ನಾಯಕರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಪ್ರಶ್ನೆ ಮಾಡುವುದಾಗಿ ಹೇಳಿದ್ದಾರೆ. "ಮುಂದೊಂದು ದಿನ ಹಿಜಾಬ್ ಧರಿಸಿದ ವ್ಯಕ್ತಿ ಭಾರತದ ಪ್ರಧಾನಿಯಾಗಲಿದ್ದಾರೆ" ಎಂದು ಹೇಳಿಕೆ ನೀಡಿದ್ದ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi), ಕೂಡ ತೀರ್ಪು ನಮಗೆ ಒಪ್ಪಿಗೆಯಾಗಿಲ್ಲ ಎಂದಿದ್ದಾರೆ.

ತೀರ್ಪಿನ ಕುರಿತಾಗಿ ಬರೋಬ್ಬರಿ 15 ಸರಣಿ ಟ್ವೀಟ್ ಗಳನ್ನು ಮಾಡಿರುವ ಓವೈಸಿ, "ಹಿಜಾಬ್ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಖಂಡಿತಾ ಒಪ್ಪುವುದಿಲ್ಲ. ತೀರ್ಪನ್ನು ಒಪ್ಪದೇ ಇರುವುದು ಕೂಡ ನನ್ನ ಹಕ್ಕು. ಈ ಕುರಿತಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅಸಾದುದ್ದೀನ್ ಓವೈಸಿ ಬರೆದಿದ್ದಾರೆ.

1. I disagree with Karnataka High Court's judgement on . It’s my right to disagree with the judgement & I hope that petitioners appeal before SC

2. I also hope that not only but also organisations of other religious groups appeal this judgement...

— Asaduddin Owaisi (@asadowaisi)


ಕೇವಲ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರವಲ್ಲ, ಇತರ ಧಾರ್ಮಿಕ ಸಂಘಟನೆಗಳೂ ಕೂಡ ಈ ತೀರ್ಪಿನ ಕುರಿತಾಗಿ ಮೇಲ್ಮನವಿ ಸಲ್ಲಿಸಲಿದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಈ ತೀರ್ಪು ಧರ್ಮ, ಸಂಸ್ಕೃತಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದೆ ಎಂದು ಓವೈಸಿ ಹೇಳಿದ್ದಾರೆ.
 

Tap to resize

Latest Videos

undefined

ನಮ್ಮ ಸಂವಿಧಾನದ ಪೀಠಿಕೆಯು ಒಬ್ಬ ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಹೇಳುತ್ತದೆ. ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ. ಹಾಗೂ ಈ ನಂಬಿಕೆಯನ್ನು ನನಗೆ ಸೂಕ್ತವಾದ ರೀತಿಯಲ್ಲಿ ಅಭಿವ್ಯಕ್ತಿ ಮಾಡುವ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಾಬ್ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ ಎಂದಿದ್ದಾರೆ. ಅಗತ್ಯವಾದ ಧಾರ್ಮಿಕ ಅಭ್ಯಾಸ ಪರೀಕ್ಷೆಯನ್ನು ಪರಿಶೀಲಿಸುವ ಸಮಯ ಕೂಡ ಇದಾಗಿದೆ. ಒಬ್ಬ ಧರ್ಮನಿಷ್ಠ ವ್ಯಕ್ತಿಗೆ, ಎಲ್ಲವೂ ಅತ್ಯಗತ್ಯ ಮತ್ತು ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ, ಜನಿವಾರ ಅತ್ಯಗತ್ಯ ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅಗತ್ಯವನ್ನು ನಿರ್ಧರಿಸಬಹುದು ಎನ್ನುವುದೇ ಅಸಂಬದ್ಧ ಎಂದು ವಿವಾದಿತ ನಾಯಕ ಬರೆದಿದ್ದಾರೆ.

Karnataka Hijab Verdict: ಹಿಜಾಬ್, ಕೇಸರಿ ಯಾವುದೂ ಇಲ್ಲ, ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ!
ಅದೇ ಧರ್ಮದ ಇತರ ಜನರು ಸಹ ಅಗತ್ಯವನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಇದು ವ್ಯಕ್ತಿ ಮತ್ತು ದೇವರ ನಡುವೆ ಇರುವ ಸಂಬಂಧ. ಇಂತಹ ಪೂಜಾ ಕಾರ್ಯಗಳು ಇತರರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ಹಿಜಾಬ್ ಯಾರಿಗೂ ಹಾನಿ ಮಾಡುವುದಿಲ್ಲ. ಹಿಜಾಬ್ ನಿಷೇಧಿಸುವುದರಿಂದ ಧಾರ್ಮಿಕ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿಯಾಗುತ್ತದೆ. ಏಕೆಂದರೆ, ಹಿಬಾಜ್ ಧರಿಸದೇ ಹೊರಗಡೆ ಬರುವುದಕ್ಕೆ ಅವಕಾಶವಿಲ್ಲ. ಅವರ ಶಿಕ್ಷಣವನ್ನು ಕಟ್ಟಿಹಾಕಿದಂತಾಗುತ್ತದೆ. ಸಮವಸ್ತ್ರವು ಏಕರೂಪತೆಯನ್ನು ಖಚಿತಪಡಿಸುತ್ತದೆ ಎಂದು ಹೇಳುತ್ತಿದ್ದಾರೆ. ಅದು ಹೇಗೆ? ಶ್ರೀಮಂತ/ಬಡ ಕುಟುಂಬದಿಂದ ಬಂದವರು ಯಾರೆಂದು ಮಕ್ಕಳಿಗೆ ತಿಳಿಯುವುದಿಲ್ಲವೇ? ಜಾತಿಯ ಹೆಸರುಗಳು ಹಿನ್ನೆಲೆಯನ್ನು ಸೂಚಿಸುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

Karnataka Hijab Verdict: ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಲು ಸಿದ್ಧತೆ!
ಐರ್ಲೆಂಡ್ ಸರ್ಕಾರವು ಹಿಜಾಬ್ ಮತ್ತು ಸಿಖ್ ಪೇಟವನ್ನು ಅನುಮತಿಸಲು ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಾಯಿಸಿದಾಗ, ಮೋದಿ ಸರ್ಕಾರ ಅದನ್ನು ಸ್ವಾಗತಿಸಿತು. ಹಾಗಾದರೆ ಸ್ವದೇಶದಲ್ಲಿ ಮತ್ತು ವಿದೇಶದ ವಿಚಾರದಲ್ಲಿ ಭಿನ್ನ ಧೋರಣೆಗಳೇಕೆ? ಸಮವಸ್ತ್ರದ ಬಣ್ಣಗಳ ಹಿಜಾಬ್ ಮತ್ತು ಪೇಟಗಳನ್ನು ಧರಿಸಲು ಅನುಮತಿಸಬಹುದು. ಒಟ್ಟಾರೆ ಇವುಗಳ ಪರಿಣಾಮವೇನು. ಅಸ್ತಿತ್ವದಲ್ಲಿ ಇಲ್ಲದೇ ಇದ್ದ ಸಮಸ್ಯೆಯನ್ನು ಸರ್ಕಾರವೇ ರಚಿಸಿತು.  ಮಕ್ಕಳು ಹಿಜಾಬ್, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಲಾಯಿತು ಮತ್ತು ಕೇಸರಿ ಪೇಟಗಳೊಂದಿಗೆ ಪ್ರತಿ-ಪ್ರತಿಭಟನೆಗಳನ್ನು ನಡೆಸಲಾಯಿತು ಎಂದು ಬರೆದುಕೊಂಡಿದ್ದಾರೆ.

ಹಿಜಾಬ್ ಧರಿಸಿರುವ ಮಹಿಳೆಯರಿಗೆ ಕಿರುಕುಳವನ್ನು ನೀಡಲು ಈ ಕಾನೂನನ್ನು ಬಳಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಪೂರ್ಣ ತೀರ್ಪು ಲಭ್ಯವಾದಾಗ ಒಬ್ಬರು ಹೆಚ್ಚು ವಿವರವಾದ ಪ್ರತಿಕ್ರಿಯೆಯನ್ನು ನೀಡಬಹುದು. ಸದ್ಯಕ್ಕೆ, ನಾನು ಬರೆದಿರುವ ಅಭಿಪ್ರಾಯಗಳು ನ್ಯಾಯಾಲಯದಲ್ಲಿ ನಿರ್ದೇಶಿಸಿದ ಮೌಖಿಕ ಆದೇಶವನ್ನು ಆಧರಿಸಿದೆ ಎಂದಿದ್ದಾರೆ.
 

 

click me!