ತಬ್ಲೀಘಿಗಳ ಗುಂಡಿಟ್ಟು ಕೊಲ್ಲಿ: ರಾಜ್‌ ಠಾಕ್ರೆ ಕಿಡಿ

Kannadaprabha News   | Asianet News
Published : Apr 05, 2020, 09:30 AM IST
ತಬ್ಲೀಘಿಗಳ ಗುಂಡಿಟ್ಟು  ಕೊಲ್ಲಿ: ರಾಜ್‌ ಠಾಕ್ರೆ ಕಿಡಿ

ಸಾರಾಂಶ

 ಕ್ವಾರಂಟೈನ್‌ ಅವಧಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ ತೋರುತ್ತಿರುವ ತಬ್ಲೀಘಿ ಜಮಾತ್‌ ಸದಸ್ಯರು ದೇಶದಲ್ಲಿ ಕೊರೋನಾ ಸೋಂಕು ಹರಡುವ ಸಂಚಿನಲ್ಲಿ ಭಾಗಿ ಆಗಿದ್ದು, ಅಂಥವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ ಗುಡುಗಿದ್ದಾರೆ.

ಮುಂಬೈ (ಏ. 05):  ಕ್ವಾರಂಟೈನ್‌ ಅವಧಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ ತೋರುತ್ತಿರುವ ತಬ್ಲೀಘಿ ಜಮಾತ್‌ ಸದಸ್ಯರು ದೇಶದಲ್ಲಿ ಕೊರೋನಾ ಸೋಂಕು ಹರಡುವ ಸಂಚಿನಲ್ಲಿ ಭಾಗಿ ಆಗಿದ್ದು, ಅಂಥವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ ಗುಡುಗಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ತಬ್ಲೀಘಿಗಳನ್ನು ಸಮಾಜದಿಂದ ಬೇರ್ಪಡಿಸಿ ಅವರಿಗೆ ನೀಡುತ್ತಿರುವ ಚಿಕಿತ್ಸೆ ನಿಲ್ಲಿಸಬೇಕು. ಒಂದು ವೇಳೆ ಅವರು ದೇಶಕ್ಕಿಂತ ತಮ್ಮ ಧರ್ಮವೇ ದೊಡ್ಡದು ಮತ್ತು ದೇಶದ ವಿರುದ್ಧ ಸಂಚು ರೂಪಿಸಬಹುದು, ನರ್ಸ್‌ಗಳ ಮುಂದೆ ಬೆತ್ತಲೆಯಾಗಿ ಓಡಾಡಬಹುದು ಎಂದು ಭಾವಿಸಿಕೊಂಡಿದ್ದರೆ, ಅಂಥವರಿಗೆ ಏಕೆ ಚಿಕಿತ್ಸೆ ನೀಡಬೇಕು? ಅವರಿಗೆ ತಕ್ಕ ಶಾಸ್ತಿ ಮಾಡಿ ವಿಡಿಯೋವನ್ನು ವೈರಲ್‌ ಮಾಡಬೇಕು. ಇದನ್ನು ನೋಡಿದ ಮೇಲಾದರೂ ಜನರಿಗೆ ನಂಬಿಕೆ ಮೂಡುತ್ತದೆ ಎಂದು ರಾಜ್‌ ಠಾಕ್ರೆ ಹೇಳಿದ್ದಾರೆ. 

ತಬ್ಲಿಘಿನಲ್ಲಿ ಭಾಗಿಯಾದವರನ್ಯಾಕೆ ಪರೀಕ್ಷೆಗೊಳಪಡಿಸುತ್ತಿಲ್ಲ? ಡಿಸಿ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಕೊರೋನಾ ವಿರುದ್ಧ ಹಗಲು ರಾತ್ರಿ ಎನ್ನದೇ ಹೋರಾಡುತ್ತಿರುವ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಗಳಾಗುತ್ತಿವೆ. ಕಿರಿಕಿರಿ ಮಾಡುತ್ತಿದ್ದಾರೆ. ಇಂತಹ ವರ್ತನೆಗಳು ಸರಿಯಲ್ಲ' ಎಂದಿದ್ದಾರೆ. 

ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರುವ ಸಮಯ ಇದಲ್ಲ. ಧರ್ಮದ ವಿಚಾರವನ್ನು ಮಾತನಾಡುವ ಸಮಯವಲ್ಲ. ಆದರೆ ಕೆಲವು ಮುಸಲ್ಮಾನರು ನಡೆದುಕೊಂಡ ರೀತಿಗೆ ಹೀಗೆ ಹೇಳಬೇಕಾಯಿತು. ಮುಸಲ್ಮಾನರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಲಾಕ್‌ಡೌನ್ ಮುಗಿದ ಮೇಲೆಯೂ ನಾವು ಇಲ್ಲಿಯೇ ಒಟ್ಟಾಗಿ ಇರುತ್ತೇವೆ' ಎಂದಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!