Swamy meets Didi: ಮಮತಾ ಭೇಟಿಯಾಗಿ ಮೋದಿ ಸರಕಾರವನ್ನು ತೆಗಳಿದ ಬಿಜೆಪಿ ನಾಯಕ

By Suvarna NewsFirst Published Nov 25, 2021, 1:26 PM IST
Highlights

ದೆಹಲಿ: ಬಿಜೆಪಿಯಲ್ಲೇ ಇದ್ದು ಸದಾ ಕಾಲ ಬಿಜೆಪಿಯನ್ನು ದೂರುವ ಬಿಜೆಪಿಯ ವಿವಾದಾತ್ಮಕ ನಾಯಕ ಸುಬ್ರಮಣಿಯನ್‌ ಸ್ವಾಮಿ ಬಿಜೆಪಿ ಬಿಡಲಿದ್ದಾರೆಯೇ ಎಂಬ ಚರ್ಚೆಗೆ ಈಗ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ. ಇದಕ್ಕೆ ಕಾರಣವಾಗಿದ್ದು ಪಶ್ಚಿಮ ಬಂಗಾಳ ಸಿಎಂ ಮಮತಾ ಹಾಗೂ ಸುಬ್ರಮಣಿಯನ್‌ ಸ್ವಾಮಿ ಭೇಟಿ. 
 

ನಿನ್ನೆ ದೀದಿಯನ್ನು ಭಾರತೀಯ ಜನತಾ ಪಾರ್ಟಿಯ ರಾಜ್ಯಸಭಾ ಸದಸ್ಯರೂ ಆಗಿರುವ ಸುಬ್ರಮಣಿಯನ್‌ ಸ್ವಾಮಿ(Subramanian Swamy) ಭೇಟಿಯಾಗಿದ್ದು ಹಳೆ ವಿಚಾರ. ಭೇಟಿಯ ನಂತರ ಸುಬ್ರಮಣಿಯನ್‌ ಸ್ವಾಮಿ ಟ್ವಿಟ್ಟರ್‌ನಲ್ಲಿ ಸಾಲಾಗಿ ಮೋದಿ ಸರ್ಕಾರವನ್ನು ಟೀಕಿಸಿ ಟ್ವಿಟ್‌ ಮಾಡುತ್ತಿದ್ದಾರೆ.  ಸುಬ್ರಮಣಿಯನ್‌ ಸ್ವಾಮಿ ಮೋದಿ ಸರಕಾರಕ್ಕೆ ಬಯ್ಯುವುದು ಹೊಸದಲ್ಲ. ಆದರೆ, ಮಮತಾ ಭೇಟಿಯಾಗಿ ಹೀಗೆ ಬಯ್ಯುತ್ತಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಬಿಜೆಪಿ ಬಿಡುವುದು ಖಂಡಿತ ಎನಿಸುತ್ತಿದೆ. ಮಮತಾ( Mamata Banerjee) ಭೇಟಿ ಬಳಿಕ ಇವರು ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಕೆಲಸದ ಬಗ್ಗೆ ತೀವ್ರವಾಗಿ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇವರು ಬಿಜೆಪಿ ಬಿಡುವುದು ಬಹುತೇಕ ಖಚಿತ ಎಂಬ ಚರ್ಚೆಗಳೀಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. 

ABs & GBs are certified morons. On 23rd Nov TMC announced that I was meeting CM Mamata yesterday. PMO Officer assumed I was joining TMC and handed out items to Morons condemning me for joining TMC which was to be uploaded. Morons did and now look ridiculous since I did not join!

— Subramanian Swamy (@Swamy39)

 

ಮೋದಿ ಸರ್ಕಾರ ಆರ್ಥಿಕತೆ ಮತ್ತು ಗಡಿ ಭದ್ರತೆ ಸೇರಿದಂತೆ ಆಡಳಿತದ ಬಹುತೇಕ ಎಲ್ಲ ವಿಚಾರಗಳಲ್ಲೂ ವೈಫಲ್ಯ ಕಂಡಿದೆ.  ಅಪ್ಘಾನಿಸ್ತಾನದ ಸಮಸ್ಯೆಯನ್ನು ನಿರ್ವಹಿಸುವಲ್ಲಿಯೂ ಮೋದಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಇದೊಂದು ಪ್ಲಾಪ್‌ ಸ್ಟೋರಿ(fiasco) ಅಲ್ಲದೇ ಕೇಂದ್ರ ಸರ್ಕಾರ ಪೆಗಾಸಸ್‌ನ ದತ್ತಾಂಶ ಭದ್ರತೆ(Pegasus data security)ಯ ಉಲ್ಲಂಘನೆ ಮಾಡಿದೆ ಎಂದು ಸ್ವಾಮಿ ದೂರಿದ್ದಾರೆ. ಅಂತರಿಕ ಭದ್ರತೆಯ ಬಗ್ಗೆಯೂ ದೂರಿದ ಅವರು ಕೇಂದ್ರ ಸರ್ಕಾರದಡಿಯಲ್ಲಿ ಕಾಶ್ಮೀರವೂ(Kashmir) ಕತ್ತಲೆ ರಾಜ್ಯವಾಗಿದೆ(state of ‘gloom’) ಎಂದು ಆರೋಪಿಸಿದ್ದಾರೆ.

Modi Government's Report Card:
Economy---FAIL
Border Security--FAIL
Foreign Policy --Afghanistan Fiasco
National Security ---Pegasus NSO
Internal Security---Kashmir Gloom
Who is responsible?--Subramanian Swamy

— Subramanian Swamy (@Swamy39)

 

ನಿನ್ನೆ ಪಶ್ಚಿಮ ಬಂಗಾಳ ಸಿಎಂ ಮಮತಾ ಅವರನ್ನು ಭೇಟಿ ಮಾಡಿದ ಬಳಿಕ ಸುಬ್ರಮಣಿಯನ್‌ ಸ್ವಾಮಿ ದೀದಿಯನ್ನು ಭಾರತದ ಹಿರಿಯ ರಾಜಕೀಯ ದಿಗ್ಗಜರೆನಿಸಿರುವ ಜಯಪ್ರಕಾಶ್‌ ನಾರಾಯಣ್‌(Jayaprakash Narayan), ಮೊರಾರ್ಜಿ ದೇಸಾಯಿ, ರಾಜೀವ್‌ ಗಾಂಧಿ(Rajiv Gandhi), ಚಂದ್ರಶೇಖರ್‌ ಹಾಗೂ ಪಿ.ವಿ ನರಸಿಂಹ ರಾವ್‌(PV Narasimha Rao) ಅವರಂತಹ ನಾಯಕರೊಂದಿಗೆ ಹೋಲಿಕೆ ಮಾಡಿದ್ದಾರೆ. ಭಾರತದ ರಾಜಕೀಯದಲ್ಲಿರುವ ಅಪರೂಪದ ಗುಣವನ್ನು ಮಮತಾ ಹೊಂದಿದಾರೆ ಎಂದು ಮಮತಾರನ್ನು, ಸುಬ್ರಮಣಿಯನ್‌ ಸ್ವಾಮಿ ಹಾಡಿ ಹೊಗಳಿದ್ದಾರೆ. 

Swamy meets Didi: ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಖಟ್ಟರ್ ಹಿಂದೂವಾದಿ?

ಸಾಮಾಜಿಕ ಜಾಲತಾಣ(social media)ದಲ್ಲಿ ಸದಾ ತಮ್ಮದೇ ಸರ್ಕಾರವನ್ನು ಟೀಕಿಸುವ ಸುಬ್ರಮಣಿಯನ್‌ ಸ್ವಾಮಿ ಒಂದು ವೇಳೆ ಚೀನಾ(china) ನಮ್ಮ ಅಣ್ವಾಸ್ತ್ರಗಳ ಬಗ್ಗೆ ಭಯಪಡುವುದಿಲ್ಲವೆಂದಾದರೆ ನಾವೇಕೆ ಅವರ ಶಸ್ತ್ರಾಸ್ತ್ರಗಳಿಗೆ ಹೆದರಬೇಕು ಎಂದು ಇತೀಚೆಗೆ ಟ್ವಿಟ್‌ ಮಾಡಿದ್ದರು. ಇನ್ನು ಭಾರತದ ಆರ್ಥಿಕ ಸ್ಥಿತಿ ಬಗ್ಗೆ ನೆಟ್ಟಿಗನೊಬ್ಬ ಇದು ಸಂಪೂರ್ಣ ಮೋದಿನೋಮಿಕ್ಸ್‌ ಎಂದು ಟೀಕಿಸಿದ್ದ, ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಅಲ್ಲ ಇದು ಮೋದಿ ಕಾಮಿಕ್ಸ್‌(Modicomics ) ಯಾಕೆಂದರೆ ಮೋದಿಗೆ ಇಕಾನಮಿಕ್ಸ್‌ ಎಂದರೆ ಏನು ಎಂಬುದೇ ಗೊತ್ತಿಲ್ಲ ಎಂದೆಲ್ಲಾ ಟೀಕಿಸಿದ್ದರು. ಒಟ್ಟಿನಲ್ಲಿ ಸುಬ್ರಮಣಿಯನ್‌ ಸ್ವಾಮಿಯವರ ಇತ್ತೀಚಿನ ಟೀಕೆಗಳಿಂದ ಸ್ವ ಪಕ್ಷೀಯರೇ ಸ್ವಾಮಿ ಪಕ್ಷ ಬಿಡಲಿ ಎಂದು ಬಯಸುಂತಾಗಿದೆ. ಅಲ್ಲದೇ  ಸುಬ್ರಮಣಿಯನ್‌ ಸ್ವಾಮಿ ಪಕ್ಷ ಬಿಟ್ಟರು ಅಚ್ಚರಿ ಏನಿಲ್ಲ.

click me!