ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆ ತನ್ನ ವರದಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ ಎಂಬ ಖುಷಿಯ ವಿಚಾರ ತಿಳಿದು ಬಂದಿದೆ.
ಪ್ರತಿ ದೇಶದಲ್ಲಿ ಯಾವಾಗಲೂ ಗಂಡು ಹೆಣ್ಣಿನ ಲಿಂಗಾನುಪಾತ(Male female sex ratio) ಸಮಾನವಾಗಿ ಇರಬೇಕು. ಇದು ಯಾವುದೇ ಕಾರಣಕ್ಕೂ ಹೆಚ್ಚು ಕಡಿಮೆ ಆಗಬಾರದು. ಆದರೆ ನಮ್ಮ ದೇಶದಲ್ಲಿ ಜನರ ಅನಕ್ಷರತೆ, ಬಡತನ ಮೂಢನಂಬಿಕೆಯಿಂದಾಗಿ ಹಾಗೂ ಗಂಡು ಮಕ್ಕಳ ಮೇಲಿನ ವ್ಯಾಮೋಹ, ವಂಶೋದ್ಧಾರಕನೇ ಬೇಕು ಎಂಬ ಕಾರಣಕ್ಕೆ ಬಹುತೇಕ ಅಕ್ರಮವಾಗಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ನಡೆಸಿದ ಪರಿಣಾಮ ಇತ್ತೀಚಿನವರೆಗೆ ಭಾರತದಲ್ಲಿ ಯಾವಾಗಲೂ ಗಂಡು ಹೆಣ್ಣಿನ ಲಿಂಗಾನುಪಾತ ಸಮತೋಲವಾಗಿ ಬಂದಿದಿಲ್ಲ. ಯಾವಾಗಲೂ ಇಲ್ಲಿ ಪುರುಷರ ಜನಸಂಖ್ಯೆ(population) ಸ್ತ್ರೀ ಜನಸಂಖ್ಯೆಗಿಂತ ಹೆಚ್ಚಳ ಆದರೆ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ (NFHS) ಐದನೇ ಸುತ್ತಿನ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ(Central Ministry of Health)ವು ನವೆಂಬರ್ 24 ರಂದು ಬಿಡುಗಡೆ ಮಾಡಿದೆ. ಇದರ ಪ್ರಕಾರ ಭಾರತದಲ್ಲಿ ಈಗ ಪ್ರತಿ 1000 ಪುರುಷರಿಗೆ ಸಮಾನಾಗಿ 1,020 ಮಹಿಳೆಯರಿದ್ದಾರೆ. ಅಲ್ಲದೇ ಜನಸಂಖ್ಯಾ ಸ್ಫೋಟದ ಭೀತಿ ಮುಂದೆ ಎದುರಾಗದು ಎಂದು ಈ ಸಮೀಕ್ಷೆ ತಿಳಿಸಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯು ಒಂದು ಮಾದರಿ ಸಮೀಕ್ಷೆಯಾಗಿದೆ. ಮುಂದೆ ರಾಷ್ಟ್ರೀಯ ಜನಗಣತಿ ನಡೆಸಿದಾಗ ಮಾತ್ರ ಹೆಚ್ಚಿನ ಜನಸಂಖ್ಯೆಗೆ ಈ ಸಮೀಕ್ಷೆಯನ್ನು ಅನ್ವಯಿಸಿದಾಗ ಇದನ್ನು ಖಚಿತವಾಗಿ ಹೇಳಬಹುದಾಗಿದೆ. ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂದರ್ಭದಲ್ಲಿ ಇದೇ ರೀತಿಯ ಸಮೀಕ್ಷೆ ಬರುವ ಸಾಧ್ಯತೆ ಇದೆ.
Women's Big Bash League: ಹರ್ಮನ್‌ಪ್ರೀತ್ ಕೌರ್‌ಗೆ ಸರಣಿ ಶ್ರೇಷ್ಠ ಗೌರವ
NFHS-5 ಸಮೀಕ್ಷೆಯನ್ನು 2019 ಮತ್ತು 2021 ರ ನಡುವೆ ಎರಡು ಹಂತಗಳಲ್ಲಿ ನಡೆಸಲಾಗಿದೆ. ದೇಶದ 707 ಜಿಲ್ಲೆಗಳ 650,000 ಕುಟುಂಬಗಳನ್ನು ಈ ಸಮೀಕ್ಷೆ ಒಳಗೊಂಡಿದೆ. 2 ಹಂತದಲ್ಲಿ ರಾಜ್ಯಗಳಾದ ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿಯ NCT, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶ(Union Territory)ಗಳಾದ ಚಂಡೀಗಢ ಪುದುಚೇರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ.
ಭಾರತದಲ್ಲಿ ಈ ಹಿಂದೆ ಪುರುಷ ಹಾಗೂ ಮಹಿಳೆಯರ ಲಿಂಗಾನುಪಾತ ತೀವ್ರ ಏರುಪೇರಿನಲ್ಲಿತ್ತು. ಈ ವೇಳೆ ಅಂದರೆ 1990ರಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್(Amartya Sen) ಅವರು ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್‌ಗೆ ಬರೆದ ಲೇಖನದಲ್ಲಿ ಭಾರತವನ್ನು country of missing women ಎಂದು ಕರೆದಿದ್ದರು. ಅಂದರೆ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆಗ ಭಾರತದಲ್ಲಿ 1,000 ಪುರುಷರಿಗೆ 927 ಮಹಿಳೆಯರಿದ್ದರು. ಆದರೆ ಇನ್ಮುಂದೆ ಅಂತಹ ಸಂದರ್ಭ ಬರದು ಎನ್ನಲಾಗುತ್ತಿದೆ. 2005-06 ರಲ್ಲಿ ನಡೆಸಲಾದ NFHS-3 ಸಮೀಕ್ಷೆ ಪ್ರಕಾರ, ಲಿಂಗಾನುಪಾತವು ಸಮಾನವಾಗಿತ್ತು, 1000 ಪುರುಷರಿಗೆ 1000 ಮಹಿಳೆಯರಿದ್ದರು. ಆದರೆ 2015-16 ರ NFHS-4 ಸಮೀಕ್ಷೆಯಲ್ಲಿ 1000 ಪುರುಷರಿಗೆ 991 ಮಹಿಳೆಯರಿದ್ದರು. ಆದರೆ ಇದೇ ಮೊದಲ ಬಾರಿಗೆ NFHS ಸಮೀಕ್ಷೆಯಲ್ಲಿ ಲಿಂಗ ಅನುಪಾತವು ಮಹಿಳೆಯರ ಪರವಾಗಿ ಬಂದಿದೆ.
Stop Violence against Women: ಹೆಣ್ಣಿಗೆ ದೌರ್ಜನ್ಯರಹಿತ ಭವಿಷ್ಯದ ಅಗತ್ಯವೇನಿದೆ?
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ವಿಕಾಸ್ ಶೀಲ್(Vikas Sheel), ಸುಧಾರಿತ ಲಿಂಗ ಅನುಪಾತ ಮತ್ತು ಜನನದ ಸಮಯದಲ್ಲಿ ಲಿಂಗ ಅನುಪಾತವು ಸಮಾನವಾಗಿರುವುದು ಗಮನಾರ್ಹ ಸಾಧನೆಯಾಗಿದೆ. ಜನಗಣತಿಯಿಂದ ನೈಜ ಚಿತ್ರಣ ಹೊರಬೀಳಲಿದೆಯಾದರೂ, ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಕ್ರಮಗಳು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿವೆ ಎಂಬುದನ್ನು ಈ ಫಲಿತಾಂಶಗಳನ್ನು ನೋಡಿದಾಗ ಹೇಳಬಹುದಾಗಿದೆ ಎಂದಿದ್ದಾರೆ.
ಸಮೀಕ್ಷೆಯಿಂದ ತಿಳಿದು ಬಂದ ಕುತೂಹಕಾರಿ ಅಂಶಗಳು
2010-14ರ ಸಮೀಕ್ಷೆಯಂತೆ ಪುರುಷರ ಜೀವಿತಾವಧಿ 66.4 ವರ್ಷಗಳು ಮತ್ತು ಮಹಿಳೆಯರ ಸರಾಸರಿ ಜೀವಿತಾವಧಿ 69.6 ವರ್ಷಗಳು.
2005-06 ರಲ್ಲಿ 34.9% ರಷ್ಟಿದ್ದ 15 ವರ್ಷದೊಳಗಿನ ಜನಸಂಖ್ಯೆಯ ಪಾಲು 2019-21 ರಲ್ಲಿ 26.5% ಕ್ಕೆ ಇಳಿದಿದೆ.
ಭಾರತದಲ್ಲಿ ಒಟ್ಟು ಫಲವತ್ತತೆ ದರ(Total Fertility rate) ಅಥವಾ ಭಾರತದಲ್ಲಿ ಪ್ರತಿ ಮಹಿಳೆಗೆ ಮಕ್ಕಳ ಸರಾಸರಿ ಸಂಖ್ಯೆ ಈಗ ಕೇವಲ 2 ಆಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಫಲವತ್ತತೆ ದರಕ್ಕಿಂತ ಕಡಿಮೆಯಾಗಿದೆ
ಜನಸಂಖ್ಯೆಯ ದರ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತ(south India)ದ ರಾಜ್ಯಗಳಲ್ಲಿ ಇಳಿಕೆಯೆಡೆಗೆ ಸಾಗುತ್ತಿದೆ.