2021-22ನೇ ಸಾಲಿನ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’ಕ್ಕೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಲೆಯೊಂದು ಆಯ್ಕೆಯಾಗಿದೆ. ಯಾದಗಿರಿ ಜಿಲ್ಲೆ ಶಹಾಪುರದಲ್ಲಿರುವ ಆದರ್ಶ ವಿದ್ಯಾಲಯ ಸೇರಿದಂತೆ ದೇಶದ 39 ಶಾಲೆಗಳು ಆಯ್ಕೆಯಾಗಿದ್ದು, ಶನಿವಾರ ಈ ಶಾಲೆಗಳಿಗೆ ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವದೆಹಲಿ (ನ.20): 2021-22ನೇ ಸಾಲಿನ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’ಕ್ಕೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಲೆಯೊಂದು ಆಯ್ಕೆಯಾಗಿದೆ. ಯಾದಗಿರಿ ಜಿಲ್ಲೆ ಶಹಾಪುರದಲ್ಲಿರುವ ಆದರ್ಶ ವಿದ್ಯಾಲಯ ಸೇರಿದಂತೆ ದೇಶದ 39 ಶಾಲೆಗಳು ಆಯ್ಕೆಯಾಗಿದ್ದು, ಶನಿವಾರ ಈ ಶಾಲೆಗಳಿಗೆ ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದರಲ್ಲಿ 2 ಕಸ್ತೂರ ಬ ಗಾಂಧಿ ಬಾಲಿಕಾ ವಿದ್ಯಾಲಯ, 1 ನವೋದಯ ವಿದ್ಯಾಲಯ ಮತ್ತು 3 ಕೇಂದ್ರೀಯ ವಿದ್ಯಾಲಯಗಳು ಸೇರಿವೆ ಎಂದು ಶೈಕ್ಷಣಿಕ ಸಚಿವಾಲಯ ಶನಿವಾರ ಹೇಳಿದೆ. ಈ ಪ್ರಶಸ್ತಿಗಾಗಿ ಒಟ್ಟು 8.23 ಲಕ್ಷ ಶಾಲೆಗಳು ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 28 ಸರ್ಕಾರಿ ಅನುದಾನಿತ ಮತ್ತು 11 ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
undefined
NEP ಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ: ಸಚಿವ ನಾಗೇಶ್
ನೀರು, ನೈರ್ಮಲ್ಯವೇ ಪ್ರಧಾನ: ನೀರು, ನೈರ್ಮಲ್ಯ ಮತ್ತು ಉತ್ತಮ ಆರೋಗ್ಯ ಸೂತ್ರಗಳನ್ನು ಅಳವಡಿಸಿಕೊಂಡಿರುವ ಶಾಲೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಲ್ಲದೇ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉಳಿದ ಶಾಲೆಗಳಿಗೆ ಇದು ಪ್ರೋತ್ಸಾಹ ನೀಡಲಿದೆ ಎಂದು ಸಚಿವಾಲಯ ಹೇಳಿದೆ. ಈ ಬಾರಿ ಗುಜರಾತ್‌ನ 10, ಪುದುಚೇರಿಯ 6, ಜಾರ್ಖಂಡ್ ಮತ್ತು ಮಹಾರಾಷ್ಟ್ರದ 3, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣ ಮತ್ತು ಪಶ್ಚಿಮ ಬಂಗಾಳದ 2 ಹಾಗೂ ಆಂಧ್ರಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಕೇರಳ, ತ್ರಿಪುರಾ ಮತ್ತು ಜಮ್ಮು ಕಾಶ್ಮೀರದ ತಲಾ ಒಂದು ಶಾಲೆಗಳು ಪ್ರಶಸ್ತಿ ಪಡೆದುಕೊಂಡಿವೆ.
ರಾಮನಗರ: ರಾಜೀವ್ ಗಾಂಧಿ ಆರೋಗ್ಯ ವಿವಿ ಕನಸಿಗೆ ಮತ್ತೆ ಜೀವ..!
39 ಶಾಲೆಗಳಲ್ಲಿ 17 ಪ್ರಾಥಮಿಕ ಮತ್ತು 22 ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳಾಗಿವೆ. ಇವುಗಳಲ್ಲಿ 34 ಶಾಲೆಗಳಿಗೆ 60 ಸಾವಿರ ಮತ್ತು ಉಳಿದ ಶಾಲೆಗಳಿಗೆ 20 ಸಾವಿರ ರು. ನಗದು ಬಹುಮಾನ ನೀಡಲಾಗಿದೆ. ಇದು 3ನೇ ಬಾರಿ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ 9.59 ಲಕ್ಷ ಶಾಲೆಗಳು ಭಾಗಿಯಾಗಿದ್ದವು. ಇದು ಮೊದಲ ಆವೃತ್ತಿಗೆ ಹೋಲಿಸಿದರೆ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.