ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅವರು ಹಳೆಯ ಕಾಲದ ಐಕಾನ್ ಆಗಿದ್ದಾರೆ. ಈಗಿನ ಮಹಾರಾಷ್ಟ್ರದ ಜನ ತಮ್ಮ ಐಕಾನ್ ಆಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಥವಾ ಅಂಬೇಡ್ಕರ್ ಅವರ ಹೆಸರನ್ನು ಹೇಳಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಹೇಳಿದ್ದಾರೆ. ದೇಶದಲ್ಲಿ ನಿಮ್ಮ ಐಕಾನ್ ಯಾರು ಎಂಬ ಪ್ರಶ್ನೆಗೆ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಅವರ ಹೆಸರನ್ನು ಹೇಳುತ್ತೇವೆ. ಅದೇ ರೀತಿ ಮಹಾರಾಷ್ಟ್ರದವರು ಬದಲಾಗಬೇಕು. ಶಿವಾಜಿಯ ಬದಲಾಗಿ ಅಂಬೇಡ್ಕರ್ ಅಥವಾ ಗಡ್ಕರಿ ಹೆಸರು ಹೇಳಬೇಕು ಎಂದಿದ್ದಾರೆ. ಇದಕ್ಕೆ ಉದ್ಧವ್ ಠಾಕ್ರೆ ಬಣ ವಿರೋಧ ವ್ಯಕ್ತಪಡಿಸಿದೆ.
ಸತತ ಸೋಲು 'ಮರಾಠಿ'ಗೆ ಅಕ್ಷಯ್ ಕುಮಾರ್ ಜಂಪ್: ಛತ್ರಪತಿ ಶಿವಾಜಿಯಾಗಿ ಮಿಂಚಲು ಸಜ್ಜು
ಐಎನ್‌ಎಸ್ ವಿಕ್ರಾಂತ್, ಹೊಸ ನೌಕಾಧ್ವಜ ಛತ್ರಪತಿ ಶಿವಾಜಿ ಮಹಾರಾಜರಿಗೆ ಅರ್ಪಿಸಿದ ಪ್ರಧಾನಿ ಮೋದಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ