ಕಾಶಿ ತಮಿಳುನಾಡು ನಡುವೆ ನಂಟು... ಭಾಷಾ ಸಾಮರಸ್ಯಕ್ಕೆ ಮೋದಿ ಕರೆ

By Kannadaprabha NewsFirst Published Nov 20, 2022, 9:23 AM IST
Highlights

ಕಾಶಿ ಮತ್ತು ತಮಿಳುನಾಡು ನಡುವೆ ಶತಮಾನಗಳಿಂದ ನಂಟು ಇದೆ ಎಂದು ತೋರ್ಪಡಿಸುವ 1 ತಿಂಗಳುಗಳ ಕಾಲದ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು.

ವಾರಾಣಸಿ: ಕಾಶಿ ಮತ್ತು ತಮಿಳುನಾಡು ನಡುವೆ ಶತಮಾನಗಳಿಂದ ನಂಟು ಇದೆ ಎಂದು ತೋರ್ಪಡಿಸುವ 1 ತಿಂಗಳುಗಳ ಕಾಲದ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ತಮಿಳುನಾಡು ಮತ್ತು ಕಾಶಿ 2 ಸಹ ಶಾಶ್ವತವಾದ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಎರಡೂ ಪ್ರದೇಶಗಳ ನಡುವೆ ಶತಮಾನಗಳ ನಂಟಿದೆ. ಭಾರತದ ಪ್ರಾಚೀನ ಭಾಷೆಗಳಲ್ಲಿ ತಮಿಳು ಕೂಡ ಒಂದು. ತಮಿಳಿನ ರಕ್ಷಣೆ ಅಗತ್ಯ. ಭಾಷಾ ತಾರತಮ್ಯ ತೊಡೆದು ಹಾಕಿ ಭಾಷಾ ಸಾಮರಸ್ಯ ಬೆಳೆಸಬೇಕು’ ಎಂದು ನುಡಿದರು. ಕಾಶಿ ನಗರ (Kashi Nagar) ಬಾಬಾ ವಿಶ್ವನಾಥನಿಂದ (Baba Vishwanath) ಹಾಗೂ ತಮಿಳುನಾಡು (Tamil Nadu) ರಾಮೇಶ್ವರಂನಿಂದ (Rameswaram) ಆಶೀರ್ವಾದಕ್ಕೊಳಪಟ್ಟಿವೆ. ಈ ಎರಡೂ ನಗರಗಳೂ ಸಹ ಶಿವ (Shiva) ಹಾಗೂ ಶಕ್ತಿಮಯವಾಗಿವೆ. ಅಲ್ಲದೇ ತಮಿಳುನಾಡನ್ನು ದಕ್ಷಿಣದ ಕಾಶಿ (Kashi of the South) ಎಂದು ಕರೆಯಲಾಗುತ್ತದೆ ಎಂದು ಬಣ್ಣಿಸಿದರು. 

1 ತಿಂಗಳ ಕಾಲ ನಡೆಯುವ ಈ ಕಾರ‍್ಯಕ್ರಮದಲ್ಲಿ ತಮಿಳುನಾಡು ಮತ್ತು ಕಾಶಿ ನಡುವೆ ಇರುವ ನಂಟನ್ನು ಪ್ರದರ್ಶಿಸುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೇ ಈ ವೇಳೆ ವಿವಿಧ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ತಮಿಳುನಾಡಿನಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿ ಸ್ಥಳಿಯ ಜನರೊಂದಿಗೆ ವ್ಯಾಪಾರ, ವೃತ್ತಿ ಮುಂತಾದವುಗಳ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಕೈಮಗ್ಗದ ವಸ್ತುಗಳು, ಕುಶಲ ಕರ್ಮಿಗಳು ತಯಾರಿಸಿದ ವಸ್ತುಗಳು, ಪುಸ್ತಕಗಳು, ಅಡಿಗೆಗಳು, ಇತಿಹಾಸ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿಷಯಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ.

ಕಾಶಿಯಲ್ಲಿರುವ ಕರ್ನಾಟಕ ಛತ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ

ಭಾರತ್‌ ಗೌರವ್‌ನಿಂದ ಕರ್ನಾಟಕಕ್ಕೆ ಕಾಶಿ ಹತ್ತಿರ: ಮೋದಿ

 

click me!