ನಾಳೆ ಶಬರಿಮಲೆ ಸುಪ್ರೀಂ ಆದೇಶ: ಕೇರಳದಲ್ಲಿ ಮತ್ತೆ ಅದೇ ಆವೇಶ!

By Web Desk  |  First Published Nov 13, 2019, 2:57 PM IST

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಾದ ಮರುಪರಿಶೀಲನಾ ಅರ್ಜಿ/ ನಾಳೆ ಶಬರಿಮಲೆ ಮರುಪರಿಶೀಲನಾ ಅರ್ಜಿಯ ತೀರ್ಪು ಪ್ರಕಟಿಸಲಿರುವ ಸುಪ್ರೀಂಕೋರ್ಟ್/ ಕೇರಳದಾದ್ಯಂತ ಕಟ್ಟೆಚ್ಚರಕ್ಕೆ ಆದೇಶ ನೀಡಿದ ರಾಜ್ಯ ಸರ್ಕಾರ/ ಶಬರಿಮಲೆ ವಾರ್ಷಿಕ ಯಾತ್ರೆ ವೇಳೆಯೇ ಸುಪ್ರೀಂಕೋರ್ಟ್ ತೀರ್ಪು/  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚಪೀಠದಿಂದ ಮಹತ್ವದ ತೀರ್ಪು/ 


ತಿರುವನಂತಪುರಂ(ನ.13): ಅಯೋಧ್ಯೆ ತೀರ್ಪಿನ ಬಳಿಕ ಇಡೀ ದೇಶ ನಿರಾಳವಾಗಿದೆ. ಆದರೆ ದೇಶದ ದಕ್ಷಿಣ ಭಾಗದಲ್ಲಿ ಮಾತ್ರ ಅಯ್ಯಪ್ಪ ಕುದಿ ಹೆಚ್ಚಾಗತೊಡಗಿದೆ.

ಸುಪ್ರೀಂಕೋರ್ಟ್ ನಾಳೆ(ನ.14) ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಾದ ಮರುಪರಿಶೀಲನಾ ಅರ್ಜಿಯ ತೀರ್ಪು ಪ್ರಕಟಿಸಲಿದ್ದು, ತೀವ್ರ ಪ್ರತಿಭಟನೆ ಕಂಡಿದ್ದ ಕೇರಳದಲ್ಲಿ ಮತ್ತೆ ಕಟ್ಟೆಚ್ಚರದ ವಾತಾವರಣ ನಿರ್ಮಾಣವಾಗಿದೆ.

Tap to resize

Latest Videos

undefined

ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ಬಲಪಂಥೀಯ ಸಂಘಟನೆಗಳು ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದವು.

Supreme Court to pronounce its judgement tomorrow on review petitions against the verdict allowing entry of women of all age groups into the temple. pic.twitter.com/sjUNmm51GE

— ANI (@ANI)

ಅದರಂತೆ ಸುಪ್ರೀಂಕೋರ್ಟ್ ನಾಳೆ ಮರುಪರಿಶೀಲನಾ ಅರ್ಜಿಯ ಕುರಿತು ಅಂತಿಮ ತೀರ್ಪನ್ನು ಪ್ರಕಟಿಸಲಿದ್ದು, ಕೇರಳದಾದ್ಯಂತ ತೀವ್ರ ಕಟ್ಟೆಚ್ರ ವಹಿಸಲಾಗಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ: ಮರುಪರಿಶೀಲನೆ ಓಕೆ ಎಂದ ಸುಪ್ರೀಂ
 

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ಶಬರಿಮಲೆಗೆ ಮಹಿಳೆಯರ ಪ್ರವೇಶದ ತೀರ್ಪಿನ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಪ್ರಕಟಿಸಲಿದೆ

ತೀರ್ಪು ಏನೇ ಬಂದರೂ ಅದನ್ನು ಸ್ವಾಗತಿಸುವ ಹಾಗೂ ಶಾಂತಿ ಕಾಪಾಡುವ ಹೊಣೆ ಮರೆಯದಿರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಸರ್ಕಾರ ಜನರಲ್ಲಿ ಮನವಿ ಮಾಡಿದೆ.
 
ಇದೇ ವೇಳೆ ಶಬರಿಮಲೆ ವಾರ್ಷಿಕ ಯಾತ್ರೆ ಸಮೀಪದಲ್ಲಿರುವುದರಿಂದ ಸುಪ್ರಿಂಕೋರ್ಟ್ ತೀರ್ಪು ಬೀರಬಹುದಾದ ಪರಿಣಾಮಗಳ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!