Fact Chek: ಬ್ರಿಟಿಷರು ರಾಮನ ಅಚ್ಚಿರುವ ನಾಣ್ಯ ಬಿಡುಗಡೆ ಮಾಡಿದ್ದರು!

By Kannadaprabha NewsFirst Published Nov 13, 2019, 10:42 AM IST
Highlights

ಈಸ್ಟ್‌ ಇಂಡಿಯಾ ಕಂಪನಿ ಭಾರತದಲ್ಲಿ ಹಿಂದು ದೇವರ ಚಿತ್ರವಿರುವ 2 ಪೈಸೆ ನಾಣ್ಯವನ್ನು ಬಿಡುಗಡೆ ಮಾಡಿತ್ತು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಈಸ್ಟ್‌ ಇಂಡಿಯಾ ಕಂಪನಿ ಭಾರತದಲ್ಲಿ ಹಿಂದು ದೇವರ ಚಿತ್ರವಿರುವ 2 ಪೈಸೆ ನಾಣ್ಯವನ್ನು ಬಿಡುಗಡೆ ಮಾಡಿತ್ತು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ ನಾಣ್ಯದ ಎರಡೂ ಮುಖ ಹೇಗಿತ್ತು ಎಂಬ ಫೋಟೋವನ್ನು ಅಪ್ಲೋಡ್‌ ಮಾಡಲಾಗಿದ್ದು, ಒಂದು ಭಾಗದಲ್ಲಿ ಹಿಂದು ಧರ್ಮದಲ್ಲಿ ಆರಾಧಿಸುವ ದೇವಾನುದೇವತೆಗಳ ಚಿತ್ರವಿದೆ.

Fact Check : ಓವೈಸಿ ಅಯೋಧ್ಯೆ- ಮೋದಿ ಬಗ್ಗೆ ಮಾತಾಡಿದ್ದಕ್ಕೆ ಜನ ಎದ್ದು ಹೋಗಿದ್ದು ನಿಜನಾ?

ಮಧ್ಯದಲ್ಲಿರುವ ದೇವರ ಚಿತ್ರ ರಾಮನಂತೆ ಭಾಸವಾಗುತ್ತದೆ. ಇನ್ನೊಂದು ಚಿತ್ರದಲ್ಲಿ ಓಂ ಮತ್ತು ಕಮಲದ ಹೂವಿನ ಚಿತ್ರವಿದೆ. 1818ರಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಈ ನಾಣ್ಯಗಳನ್ನು ಬಿಡುಗಡೆ ಮಾಡಿತ್ತು ಎಂದು ಹೇಳಲಾಗಿದೆ. ಹಲವಾರು ಫೇಸ್‌ಬುಕ್‌ ಬಳಕೆದಾರರು ಈ ಫೋಟೋಗಳನ್ನು ಪೋಸ್ಟ್‌ ಮಡಿದ್ದು, ಸದ್ಯ ಇದೀಗ ವೈರಲ್‌ ಆಗುತ್ತಿದೆ.

 

1.Please see for yourself,these coins were issued by the British East India Company.The coins clearly depict Hindu Gods & religious symbols,thus one can easily conclude that despite being the rulers they also knew that Hindu sentiments need to be respected.But after independence pic.twitter.com/D4Vn2NyUGq

— RAJEEV 🇮🇳NAMOCHAI🗯 (@RAJIV1959)

Coins of East India Company, printed with Hindu Gods and Goddesses! It's so communal, wasn't it? pic.twitter.com/ux4HNOmMDh

— sharan (@Sharan00)

ಆದರೆ ನಿಜಕ್ಕೂ ಬ್ರಿಟಿಷ್‌ ಆಳ್ವಿಕೆ ವೇಳೆ ಈ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿತ್ತೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ನಾಣ್ಯಶಾಸ್ತ್ರಜ್ಞರ ಬಳಿ ಸ್ಪಷ್ಟನೆ ಪಡೆದಾಗ ಈ ಫ್ಯಾಂಟಸಿ ನಾಣ್ಯಗಳನ್ನು ಅಧಿಕೃತವಾಗಿ ಬಳಕೆ ಮಾಡುತ್ತಿರಲಿಲ್ಲ. ಇವುಗಳಿಗೆ ಯಾವ ಮುಖಬೆಲೆಯೂ ಇಲ್ಲ.

ಹಿಂದೂ ದೇವಾಲಯಗಳಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು. ಈಗಲೂ ಕೂಡ ನಕಲಿ ಫ್ಯಾಂಟಸಿ ಟೆಂಪಲ್‌ ಟೋಕನ್‌ಗಳು ಆನ್‌ಲೈನ್‌ನಲ್ಲಿ 200ರಿಂದ 2000 ರು. ವರೆಗೆ ಮಾರಾಟವಾಗುತ್ತಿವೆ. ಜೊತೆಗೆ ಆರ್‌ಬಿಐ ವಿತ್ತೀಯ ವಸ್ತು ಸಂಗ್ರಹಾಲಯದಲ್ಲಿ ಬ್ರಿಟಿಷರ ಕಾಲದಲ್ಲಿದ್ದ ನಾಣ್ಯಗಳನ್ನು ಸಂಗ್ರಹಿಸಿಡಲಾಗಿದೆ. ಆದರೆ ಅದರಲ್ಲಿ ವೈರಲ್‌ ಆಗಿರುವ ನಾಣ್ಯಗಳಿಲ್ಲ. ಅಲ್ಲಿಗೆ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

click me!