ವಿಚ್ಛೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ

Published : Dec 11, 2025, 11:48 AM IST
Supreme Court

ಸಾರಾಂಶ

ವಿಚ್ಛೇದನ ಪ್ರಕರಣದಲ್ಲಿ ಕಾನೂನು ಸಲಹೆಗಾಗಿ ಬಂದ ಕಕ್ಷಿದಾರನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಮಹಿಳಾ ವಕೀಲೆಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

ವಿಚ್ಛೇದನದ ಪ್ರಕರಣದಲ್ಲಿ ಕಾನೂನು ಮಾರ್ಗದರ್ಶಕನಕ್ಕಾಗಿ ತನ್ನ ಬಳಿಗೆ ಬಂದ ಪುರುಷ ಕ್ಲೈಂಟ್‌ ಜೊತೆ ಮಹಿಳಾ ವಕೀಲೆಯೊಬ್ಬರು ರೋಮ್ಯಾಂಟಿಕ್ ಸಂಬಂಧವನ್ನು ಹೊಂದಿದ್ದಕ್ಕೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಓರ್ವ ಮಹಿಳಾ ವಕೀಲರಾಗಿ ನೀವು ಈ ರೀತಿ ಮಾಡುವುದು ಸರಿಯೇ ಎಂದು ನ್ಯಾಯಾಲಯವೂ ಮಹಿಳಾ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದು, ಆಕೆಯ ವೃತ್ತಿಯ ನೈತಿಕತೆಯನ್ನು ಪ್ರಶ್ನಿಸಿದೆ.

ಲಂಡನ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದಾಗ ಈ ಅಭಿಪ್ರಾಯ ಬಂದಿದೆ. ಮಹಿಳಾ ವಕೀಲರೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಅರ್ಜಿದಾರರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೂ ವಕೀಲರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ನೀವು ಹೇಗೆ ಈ ಗೊಂದಲದಲ್ಲಿ ಸಿಲುಕಿದಿರಿ ಎಂದು ಪ್ರಶ್ನಿಸಿದ ನ್ಯಾಯಾಲಯವೂ ಅದೇ ಸಮಯದಲ್ಲಿ ಒಬ್ಬ ಮಹಿಳಾ ವಕೀಲೆ ತನ್ನ ಸ್ವಂತ ಕಕ್ಷಿದಾರನ ಜೊತೆ ಇಂತಹ ಸಂಬಂಧವನ್ನು ಹೊಂದಿರುವುದಕ್ಕೆ ಅಚ್ಚರಿಯ ಜೊತೆ ನಿರಾಶೆ ವ್ಯಕ್ತಪಡಿಸಿತು. ಈ ಬಗ್ಗೆ ವಕೀಲರನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಆರ್ ಮಹಾದೇವನ್ ಅವರ ಪೀಠವು, ಓರ್ವ ವಕೀಲೆಯಾಗಿ ಒಬ್ಬರು ಸ್ಪಷ್ಟವಾದ ವೃತ್ತಿಪರ ಗಡಿಗಳನ್ನು ಕಾಯ್ದುಕೊಳ್ಳುವ ನಿರೀಕ್ಷೆ ಇರುತ್ತದೆ. ವಿಶೇಷವಾಗಿ ಆ ವ್ಯಕ್ತಿ ಇನ್ನೂ ವಿಚ್ಛೇದನದ ಅಂತಿಮ ಹಂತವನ್ನು ತಲುಪಿಲ್ಲದ ಕಾರಣ. ಹೀಗಿರುವಾಗ 36 ವರ್ಷದ ವಕೀಲೆ, ಕಾನೂನು ಸಹಾಯಕ್ಕಾಗಿ ತನ್ನ ಬಳಿಗೆ ಬಂದ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂಬಂಧವನ್ನು ಹೇಗೆ ಮಾಡಿಕೊಂಡರು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಇದನ್ನೂ ಓದಿ: ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ

ಅವಳೊಬ್ಬಳು ವಕೀಲೆ, ಆಕೆ ಅರ್ಜಿದಾರರೊಬ್ಬರ ವಿಚ್ಛೇದನ ಪ್ರಕರಣವನ್ನು ನಿಭಾಯಿಸುತ್ತಿದ್ದಾಳೆ. ಹೀಗಿರುವಾಗ ಆಕೆ ಹೀಗೆ ಹೇಗೆ ಮಾಡಲು ಸಾಧ್ಯ, ನಾವು ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ನ್ಯಾಯಾಧೀಶರುಗಳು ಹೇಳಿದ್ದಾರೆ. ಈ ವೇಳೆ ಮಹಿಳಾ ವಕೀಲೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ತಾನು ಆತನಿಗೆ ಕೇವಲ ಕಾನೂನು ಸಲಹೆ ನೀಡಿದ್ದೇನೆ. ಆತನ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಪ್ರಕರಣದಲ್ಲಿ ನೀವು ನಿಮ್ಮ ವಕೀಲಿಕೆಯ ಹೆಸರು ಬಳಸದೇ ಹೋದರು, ವೈಯಕ್ತಿಕವಾಗಿ ಭಾಗಿಯಾಗುವ ಮೂಲಕ ಕಾನೂನು ಸಲಹೆಗಾರರಾಗಿ ಭಾಗವಹಿಸಿದ್ದೀರಿ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಇದೇ ವೇಳೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಪರ ವಕೀಲರಾದ ರಿಷಿ ಮಲ್ಹೋತ್ರಾ, ದೂರುದಾರರ ವಿರುದ್ಧದ ಗಂಭೀರ ಆರೋಪಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದು ಪ್ರತ್ಯೇಕ ಘಟನೆಯಲ್ಲ ಎಂದು ಅವರು ವಾದಿಸಿದರು, ಈ ಮಹಿಳೆ ವಿಭಿನ್ನ ವ್ಯಕ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ನಾಲ್ಕು ಒಂದೇ ರೀತಿಯ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬ ವಿಚಾರವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಿಂದೆ ಬಾಂಬೆ ಹೈಕೋರ್ಟ್ ಅವರ ನಡವಳಿಕೆಯನ್ನು ಗಮನಿಸಿತ್ತು ಮತ್ತು ಈ ವಿಷಯದ ಬಗ್ಗೆ ತನಿಖೆಗೂ ಆದೇಶಿಸಿತ್ತು ಎಂದು ಮಲ್ಹೋತ್ರಾ ಹೇಳಿದರು.

ಇದೊಂದು ಪ್ರೇಮ ಸಂಬಂಧ ಪ್ರೇಮ ಪಕ್ಷಿಗಳ ನಡುವೆ ಏನಾಯಿತು ಎಂದು ನಾನು ಸಾಕ್ಷ್ಯ ಹೇಳಲು ಸಾಧ್ಯವಿಲ್ಲ ಎಂದು ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆದರೆ , ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದವರನ್ನು ಪರಾರಿ ಅಥವಾ ಘೋಷಿತ ಅಪರಾಧಿ ಎಂದು ಹಣೆಪಟ್ಟಿ ಕಟ್ಟುವ ಪ್ರತಿವಾದಿಯ ಪ್ರಯತ್ನವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ವಿವಾದ ಉದ್ಭವಿಸುವ ಮೊದಲೇ ಆ ವ್ಯಕ್ತಿ ಲಂಡನ್‌ನಲ್ಲಿ ವಿದೇಶದಲ್ಲಿ ವಾಸಿಸುತ್ತಿದ್ದರಿಂದ, ಅಂತಹ ಆರೋಪ ಮಾಡಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಇದನ್ನೂ ಓದಿ:  ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು 20 ನಿಮಿಷದಲ್ಲಿ ಮದುವೆ ಮುರಿದ ಯುವತಿ

ಈ ಪ್ರಕರಣದ ಬಗ್ಗೆ ಮಾತನಾಡಿದ ವಕೀಲೆ ನಾಗರತ್ನ, ಮಹಿಳಾ ವಕೀಲರೊಬ್ಬರು ತಮ್ಮ ವಿಚ್ಛೇದನ ಕಕ್ಷಿದಾರರೊಂದಿಗೆ ವೈಯಕ್ತಿಕ ಸಂಬಂಧ ಹೊಂದುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ವಿಚ್ಛೇದನ ತೀರ್ಪು ಬರುವವರೆಗೂ ಅವನು ನಮ್ಮ ಪಾರ್ಟಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂಬುದು ಆಕೆಗೆ ತಿಳಿದಿರಬೇಕಿತ್ತು. ಆಕೆ ಶಿಕ್ಷಣವಿಲ್ಲದ, ಅವಿದ್ಯಾವಂತ ಮುಗ್ಧೆ ಏನೂ ಅಲ್ಲ,ಆಕೆಯೊಬ್ಬಳು ವಕೀಲೆ, ಆಕೆ ಅರ್ಜಿದಾರರೋರ್ವರ ವಿಚ್ಛೇದನ ಪ್ರಕರಣವನ್ನು ನಿಭಾಯಿಸುತ್ತಿರುವವಳು ಎಂದು ನ್ಯಾಯಾಲಯ ಹೇಳಿತು. ಅಲ್ಲದೇ ಈ ಗೊಂದಲಗಳಿಂದ ಹೊರಬಂದು ವೃತ್ತಿಜೀವನದತ್ತ ಗಮನ ನೀಡುವಂತೆ ಆಕೆಗೆ ಗಂಭೀರವಾಗಿ ನ್ಯಾಯಾಲಯ ಸಲಹೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನಾಳೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?