ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು

Published : Dec 11, 2025, 08:42 AM IST
Dog Cry

ಸಾರಾಂಶ

An Emotional Video of Dog and Owner: ಈ ವಿಡಿಯೋ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಪ್ರಾಣಿಗಳು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತವೆ. ಆದರೆ ಅವುಗಳಿಗೆ ಮಾತನಾಡಲು ಸಾಧ್ಯವಿಲ್ಲ ಎಂಬುವುದು ನಿಮಗೆ ಅರ್ಥವಾಗುತ್ತದೆ. ಆ ಪ್ರೀತಿಯನ್ನು ಕಳೆದುಕೊಂಡ ನಾಯಿ ಕಣ್ಣೀರು ಹಾಕಿದೆ.

Dog Cries at Owner's Death:  ಮನೆಯಲ್ಲಿ ಸಾಕು ಪ್ರಾಣಿಗಳು ಕುಟುಂಬ ಸದಸ್ಯರಾಗಿರುತ್ತವೆ. ಮಹಾನಗರಗಳಲ್ಲಿ ವಾಸಿಸುವ ಜನರು ಸಾಕು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಪ್ರಾಣಿಗಳು ಸಹ ತಮ್ಮ ಮಾಲೀಕರಿಗೆ ಅಗಾಧ ಪ್ರೀತಿಯನ್ನು ನೀಡುತ್ತವೆ. ಕೆಲವು ಶ್ವಾನಗಳಂತು ಕುಟುಂಬ ಸದಸ್ಯರು ಮನೆಗೆ ಬರೋದನ್ನೇ ಬಾಗಿಲ ಬಳಿ ಕುಳಿತು ಕಾಯುತ್ತಿರುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶ್ವಾನವೊಂದು ತನ್ನ ಮಾಲೀಕನ ನಿಧನಕ್ಕೆ ಕಂಬನಿ ಮಿಡಿದಿದೆ. ಮಾಲೀಕನ ಕಾಲು ಬಳಿ ಕುಳಿತ ಶ್ವಾನ, ಕುಟುಂಬ ಸದಸ್ಯರಂತೆಯೇ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೃತರಾಗಿದ್ದು, ಸುತ್ತಲೂ ಕುಳಿತ ಜನರು ಕಣ್ಣೀರು ಹಾಕುತ್ತಿರೋದನ್ನು ನೋಡಬಹುದಾಗಿದೆ. ಶವದ ಕಾಲುಗಳ ಬಳಿಯಲ್ಲಿ ಕುಳಿತ ಶ್ವಾನ ಕಣ್ಣೀರು ಹಾಕಿದ್ದಾರೆ. ಶವದ ಕಾಲುಗಳ ಮೇಲೆ ಮುಖವಿಟ್ಟು ಬಿಕ್ಕಿ ಬಿಕ್ಕಿ ಅತ್ತಿದೆ. ಶ್ವಾನ ಅಳುತ್ತಿರುವ ದೃಶ್ಯಗಳಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್ ಸೆರೆ ಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಶ್ವಾನದ ಪ್ರೀತಿಯನ್ನು ನೋಡಿ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಮನೆಯಲ್ಲಿನ ಪ್ರೀತಿಯ ಶ್ವಾನ ಅಥವಾ ಬೆಕ್ಕು ಸಾವನ್ನಪ್ಪಿದ್ರೆ ಮಾಲೀಕರು ಅವುಗಳ ಅಂತ್ಯಕ್ರಿಯೆಯನ್ನು ಕಾನೂನುಬದ್ಧವಾಗಿ ಕಣ್ಣೀರು ಹಾಕುತ್ತಾರೆ. ಆದ್ರೆ ಇಲ್ಲಿ ಶ್ವಾನ ತನ್ನನ್ನು ಮುದ್ದಿಸಿ ಸಾಕಿದ್ದ ಮಾಲೀಕನ ನಿಧನಕ್ಕೆ ಕಣ್ಣೀರು ಹಾಕಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..

ವಿಡಿಯೋ ನೋಡಿ ಭಾವನೆ ಹಂಚಿಕೊಂಡ ನೆಟ್ಟಿಗರು

ಶ್ವಾನ ಕಣ್ಣೀರು ಹಾಕುತ್ತಿರುವ ವಿಡಿಯೋವನ್ನು @RADHIKA_INF ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ 21 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ಭಾವುಕರಾದ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಪ್ರಾಮಾಣಿಕತೆ ಏನು ಅಂದ್ರೆ ಈ ಶ್ವಾನವನ್ನು ನೋಡಿ ಕಲಿಯಬೇಕು. ಮೃತ ವ್ಯಕ್ತಿ ಈ ಶ್ವಾನಕ್ಕೆ ಅತ್ಯಧಿಕ ಪ್ರೀತಿಯನ್ನು ನೀಡಿದ್ದಾನೆ. ಆ ಪ್ರೀತಿಯನ್ನು ಕಳೆದುಕೊಂಡ ನಾಯಿ ಕಣ್ಣೀರು ಹಾಕಿದೆ. ಈ ವಿಡಿಯೋ ನೋಡಿದ್ರೆ ಶ್ವಾನ ಮತ್ತು ಆ ವ್ಯಕ್ತಿಯ ನಡುವಿನ ಬಾಂಧವ್ಯ ಹೇಗಿತ್ತು ಎಂದು ಕಲ್ಪನೆ ಮಾಡಿಕೊಳ್ಳಬಹುದು ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ