
ಹಳೇ ಕಾಲದ ಮಾತೆನಿಸಿದ್ರೂ ಇದೇ ವಾಸ್ತವ: ಪೀಠ
ನವದೆಹಲಿ (ಫೆ.17): ‘ಮದುವೆಯಾಗುವುದಕ್ಕೂ ಮುನ್ನ ಹುಡುಗ ಮತ್ತು ಹುಡುಗಿ ಪೂರ್ಣ ಅಪರಿಚಿತರಾಗಿರುತ್ತಾರೆ. ಆದ್ದರಿಂದ ದೈಹಿಕ ಸಂಬಂಧ ಬೆಳೆಸುವ ವೇಳೆ ಎಚ್ಚರಿಕೆಯಿಂದಿರಬೇಕು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ತಾನು ವಿವಾಹಿತನೆಂಬುದನ್ನು ಮುಚ್ಚಿಟ್ಟು, ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾ। ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ ನಡೆಸುತ್ತಿತ್ತು. ‘ಮದುವೆಯಾಗದೆ ಇರುವವರು ಒಬ್ಬರ ಪಾಲಿಗೊಬ್ಬರು ಅಪರಿಚಿತರು. ಆದ್ದರಿಂದ ಎಷ್ಟೇ ಆತ್ಮೀಯ ಸಂಬಂಧವಿದ್ದರೂ, ದೈಹಿಕ ಸಂಪರ್ಕ ಬೆಳೆಸುವ ಬಗ್ಗೆ ಎಚ್ಚರಿಕೆಯಿಂದಿರಬೇಕು. ಈ ಮಾತು ಹಳೆಯ ಕಾಲದ್ದೆನಿಸಿದರೂ ವಾಸ್ತವ’ ಎಂದು ಹೇಳಿದೆ.
ಜತೆಗೆ, ‘ಆರೋಪಿಯನ್ನು ನಂಬಿ ದೂರುದಾರೆ ದುಬೈಗೆ ಹೋಗುವ ಅಗತ್ಯವೇನಿತ್ತು? ಹೀಗಿರುವಾಗ ಅದನ್ನು ಒಪ್ಪಿತ ಕ್ರಿಯೆಯೆಂದು ಪರಿಗಣಿಸಲಾಗುವುದು. ಅದಕ್ಕೆ ವಿಚಾರಣೆ ಅಥವಾ ಶಿಕ್ಷೆಯ ಆವಶ್ಯಕತೆಯಿಲ್ಲ. ಆದ್ದರಿಂದ ಸಂತ್ರಸ್ತೆಗೆ ಸೂಕ್ತ ಪರಿಹಾರ ನೀಡಿ ಈ ಪ್ರಕರಣಕ್ಕೆ ಅಂತ್ಯ ಹಾಡಬಹುದು’ ಎಂದು ನಾಗರತ್ನ ಹೇಳಿದರು.
ಈಗಾಗಲೇ 2 ಮದುವೆಯಾಗಿರುವ ವ್ಯಕ್ತಿ ತನ್ನನ್ನೂ ವಿವಾಹವಾಗುವುದಾಗಿ ನಂಬಿಸಿ ದೆಹಲಿ ಮತ್ತು ದುಬೈನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಅದರ ಚಿತ್ರೀಕರಣವನ್ನೂ ಮಾಡಿಟ್ಟುಕೊಂಡು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ ಎಂಬುದು ಮಹಿಳೆಯ ದೂರಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ