
ಭೋಪಾಲ್: ಸ್ನಾನ ಮಾಡುವುದಕ್ಕೆ ಬಕೆಟ್‌ನಲ್ಲಿ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್ ಆಗಿ 7ನೇ ಕ್ಲಾಸ್ ಓದುತ್ತಿದ್ದ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ನೀರಿನಲ್ಲಿ ಮುಳುಗುವಂತಹ ನೀರು ತುಂಬಿದ ಬಕೆಟ್‌ಗೆ ಇಟ್ಟು ನೀರನ್ನು ಬಿಸಿ ಮಾಡುವಂತಹ ವಾಟರ್ ಹೀಟರ್ ಆದ ಇರ್ಮರ್ಶನ್ ರಾಡ್‌ನ್ನು ಬಕೆಟ್‌ಗೆ ಇಟ್ಟು ಬಾಲಕ ನೀರು ಬಿಸಿ ಮಾಡುತ್ತಿದ್ದು, ಅರಿವಿಲ್ಲದೇ ಕರೆಂಟ್ ಪಾಸಾಗುತ್ತಿದ್ದಾಗಲೇ ನೀರು ಬಿಸಿಯಾಗಿದೆಯೇ ಎಂದು ಮುಟ್ಟಿ ನೋಡುವುದಕ್ಕೆ ನೀರಿಗೆ ಕೈ ಹಾಕಿದ್ದು, ಕರೆಂಟ್ ಶಾಕ್‌ಗೆ ಒಳಗಾಗಿ ಬಾಲಕ ಸಾವನ್ನಪ್ಪಿದ್ದಾನೆ. ಭೋಪಾಲ್‌ನ ಆನಂದ್ ನಗರ ಪ್ರದೇಶದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಇದನ್ನೂ ಓದಿ: ಡಿವೋರ್ಸ್ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ
ಇಲ್ಲಿ 13 ವರ್ಷದ ಬಾಲಕ ಸ್ನಾನಕ್ಕಾಗಿ ಇಮ್ಮರ್ಶನ್ ರಾಡ್ ಸಹಾಯದಿಂದ ಬಕೆಟ್‌ನಲ್ಲಿ ನೀರನ್ನು ಬಿಸಿ ಮಾಡುತ್ತಿದ್ದ. ಆದರೆ, ಬಿಸಿಯಾಗಿದ್ಯಾ ಅಂತ ನೋಡುವುದಕ್ಕೆ ಹೋಗಿ ಬಾಲಕ ಹೆಣವಾಗಿದ್ದಾನೆ. ಮೃತ ಬಾಲಕನನ್ನು ಕೇಶವ್ ಎಂದು ಗುರುತಿಸಲಾಗಿದ್ದು, ಈತ 7 ನೇ ತರಗತಿಯಲ್ಲಿ ಓದುತ್ತಿದ್ದ. ಬಾಲಕ ನೀರಿಗೆ ಕೈ ಹಾಕುವ ವೇಳೆ ನೀರು ಬಿಸಿಯಾಗಿದ್ದು, ವಿದ್ಯುತ್ ಹರಿಯುತ್ತಿತ್ತು. ವಿದ್ಯುತ್ ಆಘಾತಕ್ಕೀಡಾದ ಆತನನ್ನು ಕೂಡಲೇ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದರಾದರು ಆತ ಬದುಕುಳಿಯಲಿಲ್ಲ, ಬಾಲಕನ ಹಠಾತ್ ಸಾವು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಕೆಲ ಕ್ಷಣದಲ್ಲಿ ಮಗನನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿ: ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪತ್ತೆ
ಇಮ್ಮರ್ಶನ್ ರಾಡ್‌ಗಳನ್ನು ಬಳಸುವಾಗ ಮುನ್ನೆಚ್ಚರಿಕೆಗಳು:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ