
ಬೆಂಗಳೂರು (ನ.7): ವಯನಾಡ್ ಭೂಕುಸಿತದ ವೇಳೆ ರಾಷ್ಟ್ರವ್ಯಾಪಿಯಿಂದ ಕೇರಳಕ್ಕೆ ನೆರವು ಹರಿದುಬಂದಿದ್ದವು. ಈ ವೇಳೆ ಕರ್ನಾಟಕ ಕಾಂಗ್ರೆಸ್ ಕೂಡ ಸಾಕಷ್ಟು ರೇಷನ್ ಕಿಟ್‌ಗಳನ್ನು ವಯನಾಡ್‌ಗೆ ಕಳಿಸಿಕೊಟ್ಟಿತ್ತು. ಅದರಲ್ಲಿ ಉಳಿದಿದ್ದ ಕೆಲವು ರೇಷನ್ ಕಿಟ್‌ಗಳನ್ನು ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಸ್ಥಳೀಯ ಕಾಂಗ್ರೆಸ್ ಹಂಚಿಕೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದಲ್ಲದೆ, ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಕರ್ನಾಟಕದ ಆಹಾರ ಕಿಟ್ ಹಂಚಿಕೆಯಾಗುತ್ತಿರುವ ಆರೋಪವನ್ನೂ ಮಾಡಲಾಗಿದೆ. ರಾಹುಲ್, ಪ್ರಿಯಾಂಕಾ, ಸಿದ್ದರಾಮಯ್ಯ, ಡಿಕೆಶಿ ಚಿತ್ರವಿರುವ ಆಹಾರ ಕಿಟ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಹುಲ್, ಪ್ರಿಯಾಂಕಾ ಗಾಂಧಿ ಚಿತ್ರವಿರುವ ಆಹಾರ ಕಿಟ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಆಹಾರ ಕಿಟ್ ಸಂಗ್ರಹಿಸಿದ್ದ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಕಿಟ್ಅನ್ನು ತೆಗೆದುಕೊಂಡಿದ್ದಾರೆ. ವಯನಾಡ್‌ನ ತೊಲ್ಪೆಟ್ಟಿಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ರೇಷನ್ ಕಿಟ್ ಪಡೆದುಕೊಂಡಿದೆ.
ವಯನಾಡ್‌ನ ಭೂಕುಸಿತ ಸಂತ್ರಸ್ಥರಿಗೆ ನೀಡಬೇಕಾಗಿದ್ದ ಕಿಟ್‌ಗಳನ್ನು ಮತದಾರರಿಗೆ ನೀಡಲು ಇದನ್ನು ಸಿದ್ದಮಾಡಿಕೊಳ್ಳಲಾಗಿತ್ತು. ಕಾಂಗ್ರೆಸ್ ಮುಖಂಡ ಶಶಿಕುಮಾರ್ ತೋಳ್ಪೆಟ್ಟಿ ಅವರ ಮನೆಯ ಪಕ್ಕದ ಕೊಠಡಿಯಲ್ಲಿ ಈ ಕಿಟ್‌ಗಳನ್ನು ಇರಿಸಲಾಗಿತ್ತು. ಸುಮಾರು 30 ಆಹಾರ ಕಿಟ್‌ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ರೇಷನ್ ಕಿಟ್‌ಗಳ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಫೋಟೋ ಇದೆ. ಅಲ್ಲದೇ ಭೂಕುಸಿತ ಸಂತ್ರಸ್ಥರಿಗೆ ಎಂದೂ ಇದರಲ್ಲಿ ಬರೆಯಲಾಗಿದೆ.
ಮೋದಿ ಬಗ್ಗೆ ವಯನಾಡ್ ಚುನಾವಣಾ ಪ್ರಚಾರ ವೇಳೆ ರಾಹುಲ್ ಗಾಂಧಿ ಅಚ್ಚರಿ ಹೇಳಿಕೆ
ಮೆಪ್ಪಾಡಿ, ಮುಂಡಕೈ ಮತ್ತು ಚೂರ್ಲಮಾಲ ಸಂತ್ರಸ್ತರಿಗೆ ವಿತರಿಸಲು ಕರ್ನಾಟಕ ಕಾಂಗ್ರೆಸ್ ಈ ಕಿಟ್‌ಅನ್ನು ಕಳಿಸಿಕೊಟ್ಟಿತ್ತು. ಕಿಟ್ ಮೇಲೆ ಭೂಕುಸಿತ ಸಂತ್ರಸ್ತರಿಗೆ ಎಂದು ಕೂಡ ಬರೆಯಲಾಗಿದೆ. ಸಂತ್ರಸ್ತರಿಗೆ ಹಂಚಿಕೆಯಾಗಬೇಕಿದ್ದ ಕಿಟ್ ಚುನಾವಣೆಗೆ ಬಳಕೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಇವು ಕರ್ನಾಟಕದಿಂದ ಕಳಿಸಲಾಗಿರುವ ಆಹಾರ ಕಿಟ್ ಗಳು ಎಂಬ ಅನುಮಾನ ಕೂಡ ಬಂದಿದೆ.
1.15 ಕೋಟಿ ಮೌಲ್ಯದ ಚಿನ್ನ, 12 ಕೋಟಿ ಆಸ್ತಿ, ಶಿಮ್ಲಾದಲ್ಲಿ ಬಂಗಲೆ: ಇದು ಪ್ರಿಯಾಂಕಾ ವಾದ್ರಾ ಆಸ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ