
ತುರ್ತು ಸಹಾಯವಾಣಿ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಆದೇಶ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸಲಿದೆ. ಮೂರು ತಿಂಗಳೊಳಗೆ ಇದನ್ನು ಪಾಲಿಸುವಂತೆ ಕೋರ್ಟ್ ಆದೇಶ ನೀಡಿದೆ.
ಈವರೆಗೆ ನಾವು ಪೊಲೀಸರಿಗೆ 100, ಅಗ್ನಿಶಾಮಕ ದಳಕ್ಕೆ 101 ಹಾಗೂ ಆಂಬ್ಯುಲೆನ್ಸ್ ಗೆ 108 ನಂಬರ್ ಗೆ ಕರೆ ಮಾಡ್ಬೇಕಿತ್ತು. ಇನ್ಮುಂದೆ ಈ ನಾನಾ ನಂಬರ್ ಗಳನ್ನು ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಎಲ್ಲ ನಂಬರ್ ಗಳನ್ನು ಒಂದೇ ನಂಬರ್ ಗೆ ಶಿಫ್ಟ್ ಮಾಡುವ ಆದೇಶ ನೀಡಿದೆ. ಅನೇಕ ನಂಬರ್ ನೆನಪಿಟ್ಟುಕೊಳ್ಳೋದು ಕಷ್ಟ ಎನ್ನುವವರಿಗೆ ಈ ನಿರ್ಧಾರ ಖುಷಿ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಪೀಠವು ಈ ಆದೇಶ ಹೊರಡಿಸಿದೆ. ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ನಾಗರಿಕರಿಗೆ ಬದುಕುವ ಹಕ್ಕಿದೆ. ಆದರೆ ಅವರು ಸಕಾಲಿಕ ಚಿಕಿತ್ಸೆ ಪಡೆಯದಿದ್ದರೆ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಜನರು ತುರ್ತು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಇದನ್ನು ಸಾಧಿಸಲು, ಸಹಾಯ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುವುದು ಅಗತ್ಯವೆಂದು ಭಾವಿಸಲಾಗಿದೆ.
₹34 ಕೋಟಿ ಬ್ಲಡ್ ಮನಿ ಕೊಟ್ಟು ಬಚಾವ್, ಸೌದಿಯಲ್ಲಿ ಮರಣದಂಡನೆಗೆ
ನೀವು 112 ಕ್ಕೆ ಕರೆ ಮಾಡಿದ್ರೆ ಸಾಕು, ಎಲ್ಲ ಸೇವೆಗಳು ನಿಮಗೆ ಇಲ್ಲೇ ಲಭ್ಯವಾಗಲಿದೆ. ಸುಪ್ರೀಂ ಕೋರ್ಟ್, ಆಘಾತ ಆರೈಕೆ ವ್ಯವಸ್ಥೆಯನ್ನು ಏಕೀಕರಿಸುವ, ಸಹಾಯವಾಣಿಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಮತ್ತು ಪ್ರಥಮ ಚಿಕಿತ್ಸಾ ಕೌಶಲ್ಯಗಳನ್ನು ಪ್ರಮಾಣೀಕರಿಸುವ ತುರ್ತು ಅವಶ್ಯಕತೆಯಿದೆ ಎಂದು ಹೇಳಿದೆ. ಆದ್ದರಿಂದ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಾಂತ್ರಿಕವಾಗಿ ಮತ್ತು ಕಾರ್ಯಾಚರಣೆಯ ದೃಷ್ಟಿಯಿಂದ ಮೂರು ತಿಂಗಳೊಳಗೆ ಎಲ್ಲಾ ತುರ್ತು ಸಂಖ್ಯೆಗಳನ್ನು 112 ಗೆ ಸಂಪರ್ಕಿಸಲು ಆದೇಶಿಸಲಾಗಿದೆ. ಈ ಸಂಖ್ಯೆಯು ತುರ್ತು ಸಂಖ್ಯೆಗಳಾದ 100, 101, 108, 102, 1033 ಮತ್ತು 1091 ಅನ್ನು ಸಂಯೋಜಿಸುತ್ತದೆ.
ರಾಜ್ಯ ಸರ್ಕಾರಗಳು 112 ಸಹಾಯವಾಣಿಯನ್ನು ಉತ್ತೇಜಿಸಬೇಕು ಮತ್ತು ಮೂರು ತಿಂಗಳೊಳಗೆ ತಮ್ಮ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ರಾಜ್ಯ ಸರ್ಕಾರಗಳು ಗುಡ್ ಸಮರಿಟನ್ ಕಾಯ್ದೆ (ರಸ್ತೆ ಅಪಘಾತಗಳಲ್ಲಿ ಸಹಾಯ ಮಾಡುವವರನ್ನು ರಕ್ಷಿಸುವ ಕಾನೂನುಗಳು) ಅಡಿಯಲ್ಲಿ ಕುಂದುಕೊರತೆ ಪರಿಹಾರ ತಂಡಗಳನ್ನು ಸ್ಥಾಪಿಸಬೇಕು ಎಂದು ಕೋರ್ಟ್ ಹೇಳಿದೆ.
MP Kakoli Ghosh Dastidar: TMC ಸೋಲಿನ ಬೆನ್ನಲ್ಲೇ ಭಾರೀ ಸ್ಫೋಟ; ತಮ್ಮದೇ ಪಕ್ಷದ ಸಂಸದನಿಂ
ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮೂರು ತಿಂಗಳೊಳಗೆ ಆಘಾತಕ್ಕೆ ವೈದ್ಯಕೀಯ ರಕ್ಷಣಾ ಪ್ರೋಟೋಕಾಲ್ ಹೊರಡಿಸಲು ಪ್ರಮುಖ ಸೂಚನೆಗಳನ್ನು ಕೂಡ ನೀಡಿದೆ. ಕೇಂದ್ರ ಸರ್ಕಾರ ಫ್ರೋಟೋಕಾಲ್ ಜಾರಿಗೆ ತರಲಿದೆ. ಇದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೂರು ತಿಂಗಳೊಳಗೆ ಜಾರಿಗೆ ತರಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ