ಮಣಿಪುರ ಪರಿಹಾರ ಕಾರ‍್ಯಕ್ಕೆ 3 ನಿವೃತ್ತ ಮಹಿಳಾ ಜಡ್ಜ್‌ಗಳ ಸಮಿತಿ : 11 FIRಗಳ ಸಿಬಿಐ ತನಿಖೆಗೆ ಸುಪ್ರೀಂ ಸೂಚನೆ

Published : Aug 08, 2023, 06:53 AM IST
ಮಣಿಪುರ ಪರಿಹಾರ ಕಾರ‍್ಯಕ್ಕೆ 3 ನಿವೃತ್ತ ಮಹಿಳಾ ಜಡ್ಜ್‌ಗಳ ಸಮಿತಿ : 11 FIRಗಳ ಸಿಬಿಐ ತನಿಖೆಗೆ  ಸುಪ್ರೀಂ ಸೂಚನೆ

ಸಾರಾಂಶ

ಜನಾಂಗೀಯ ಹಿಂಸಾಚಾರದಲ್ಲಿ ಮುಳುಗಿರುವ ಮಣಿಪುರದಲ್ಲಿ ಪರಿಹಾರ ಹಾಗೂ ಪುನಾವಸತಿ ಕುರಿತು ಗಮನಹರಿಸಲು ಹೈಕೋರ್ಟ್‌ನ ಮೂವರು ಮಹಿಳಾ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಘೋಷಣೆ ಮಾಡಿದೆ.

ನವದೆಹಲಿ: ಜನಾಂಗೀಯ ಹಿಂಸಾಚಾರದಲ್ಲಿ ಮುಳುಗಿರುವ ಮಣಿಪುರದಲ್ಲಿ ಪರಿಹಾರ ಹಾಗೂ ಪುನಾವಸತಿ ಕುರಿತು ಗಮನಹರಿಸಲು ಹೈಕೋರ್ಟ್‌ನ ಮೂವರು ಮಹಿಳಾ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಘೋಷಣೆ ಮಾಡಿದೆ. ಮಣಿಪುರದಲ್ಲಿ ಕಾನೂನು ಮೇಲೆ ನಂಬಿಕೆ ಹಾಗೂ ವಿಶ್ವಾಸವನ್ನು ಪುನಾಸ್ಥಾಪಿಸುವುದು ಕೋರ್ಟ್‌ನ ಪ್ರಯತ್ನವಾಗಿದೆ ಎಂದು ತಿಳಿಸಿದೆ.

ಜಮ್ಮು-ಕಾಶ್ಮೀರ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌  (Geeta Mithal) ನೇತೃತ್ವದ ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರಾದ ನ್ಯಾ ಶಾಲಿನಿ ಪಿ.ಜೋಶಿ (Shalini P Joshi) ಹಾಗೂ ನ್ಯಾ. ಆಶಾ ಮೆನನ್‌ (Asha Menon)ಅವರು ಇರಲಿದ್ದಾರೆ. ಈ ಸಮಿತಿ ಪರಿಹಾರ ಹಾಗೂ ಪುನರ್ವವಸತಿ ಕುರಿತು ಮೇಲ್ವಿಚಾರಣೆ ವಹಿಸಲಿದೆ. ರಾಜ್ಯದ ಮರುವಸತಿ ಕೇಂದ್ರಗಳಿಗೆ ಭೇಟಿ ನೀಡಲಿದೆ ಹಾಗೂ ನಂತರ ವರದಿಯನ್ನು ತನಗೇ ಸಲ್ಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ ಹೇಳಿದೆ.

ಮಣಿಪುರ ಸಂಘರ್ಷದಿಂದ 14000 ವಿದ್ಯಾರ್ಥಿಗಳ ಸ್ಥಳಾಂತರ: ಕೇಂದ್ರ ಮಾಹಿತಿ

ಮತ್ತೊಂದೆಡೆ ರಾಜ್ಯ ಪೊಲೀಸರು ನಡೆಸುತ್ತಿದ್ದ 11 ಎಫ್‌ಐಆರ್‌ಗಳ ವಿಚಾರಣೆಯನ್ನು ಸಿಬಿಐಗೆ (CBI) ವಹಿಸುವಂತೆ ಹಾಗೂ ಇತರ ಕೆಲವು ರಾಜ್ಯಗಳ ಪೊಲೀಸ್‌ ಅಧಿಕಾರಿಗಳನ್ನು ಸಿಬಿಐಗೆ ನಿಯೋಜನೆ ಮೇಲೆ ಕಳಿಸಿ ತನಿಖೆಗೆ ಚುರುಕು ನೀಡುವಂತೆ ಕೂಡ ಅದು ಸೂಚಿಸಿದೆ. ಇನ್ನು ಮಹಾರಾಷ್ಟ್ರದ ನಿವೃತ್ತ ಡಿಜಿಪಿ ದತ್ತಾತ್ರೇಯ ಪಡಸಲಗೀಕರ್‌ ಅವರನ್ನು ತನಿಖೆಯ ಮೇಲಿಸ್ತುವಾರಿಗೆ ತಾನು ಗುರುತಿಸಿದ್ದು, ಅವರು ಎಲ್ಲ ಮಾಹಿತಿಗಳನ್ನು ಸುಪ್ರೀಂ ಕೋರ್ಟ್‌ಗೆ ಕಾಲಕಾಲಕ್ಕೆ ನೀಡುತ್ತಿರುತ್ತಾರೆ ಎಂದು ಪೀಠ ಹೇಳಿದೆ.

ಡಿಜಿಪಿ ಹಾಜರು

ಜನಾಂಗೀಯ ಹಿಂಸಾಚಾರದ ಕುರಿತು ಮಣಿಪುರ ಪೊಲೀಸರ ತನಿಖೆಯ ಬಗ್ಗೆ ಹಿಂದಿನ ವಿಚಾರಣೆ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಮಣಿಪುರ ಡಿಜಿಪಿಗೆ ಹಾಜರಾಗಲು ತಾಕೀತು ಮಾಡಿತ್ತು. ಅದರಂತೆ ಸೋಮವಾರದ ವಿಚಾರಣೆಗೆ ಮಣಿಪುರದ ಡಿಜಿಪಿ ರಾಜೀವ್‌ ಸಿಂಗ್‌ (DGP) ಅವರು ಹಾಜರಾದರು. ಮಣಿಪುರ ಜನಾಂಗೀಯ ಹಿಂಸಾಚಾರ (Manipur Comunal clash) ಹತ್ತಿಕ್ಕಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಮಣಿಪುರದಲ್ಲಿ ಕಾನೂನು ವ್ಯವಸ್ಥೆ ಪೂರ್ಣ ಕುಸಿತ: ಸುಪ್ರೀಂ

42 ಎಸ್‌ಐಟಿ ರಚನೆ:

ಇದೇ ವೇಳೆ, ಜಿಲ್ಲಾ ಪೊಲೀಸ್‌ ವರಿಷ್ಠರ ನೇತೃತ್ವದಲ್ಲಿ ಜಿಲ್ಲಾವಾರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ, ಎಲ್ಲ ಪ್ರಕರಣಗಳ ವಿಶೇಷ ತನಿಖೆಗೆ ಗಮನ ನೀಡಲಾಗುವುದು. ಅಲ್ಲದೆ ಈಗಾಗಲೇ ಸಿಬಿಐ ತನಿಖೆಗೆ ಒಳಪಡದ, ವಿವಿಧ ಪ್ರಕರಣಗಳ ತನಿಖೆಗೆ 42 ಎಸ್‌ಐಟಿ ರಚಿಸಲಾಗಿದ್ದು, ಅವು ತನಿಖೆ ನಡೆಸುತ್ತಿವೆ. ಎಂದು ಮಣಿಪುರ ಸರ್ಕಾರ ಸುಪ್ರೀಂಕೋರ್ಟ್‌(Supreme court) ಗಮನಕ್ಕೆ ತಂದಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!