ಸಂಸತ್ ಸದಸ್ಯತ್ವ ಮರಳಿ ಪಡೆದ ರಾಹುಲ್ ಗಾಂಧಿಗೆ ತಂಗಲು ಅದೇ ಮನೆ ಸಿಗುತ್ತಾ? ಇಲ್ಲಿದೆ ನಿಯಮ!

By Chethan Kumar  |  First Published Aug 7, 2023, 10:12 PM IST

ಕ್ರಿಮಿನಲ್ ಡಿಫಮೇಶನ್ ಪ್ರಕರಣದಿಂದ ಸಂಸತ್ ಸ್ಥಾನ ಕಳೆದುಕೊಂಡ ರಾಹುಲ್ ಗಾಂಧಿ, ತುಘಲಕ್ ಲೇನ್‌ನಲ್ಲಿದ್ದ ಬಂಗಲೆ ಖಾಲಿ ಮಾಡಿದ್ದರು. ಇದೀಗ ರಾಹುಲ್ ಗಾಂಧಿಗೆ ಅದೇ ಮನೆ ವಾಪಸ್ ಸಿಗುತ್ತಾ? ನಿಯಮ ಹೇಳುವುದೇನು?
 


ನವದೆಹಲಿ(ಆ.07) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಡಿಫಮೇಶನ್ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕಾರಣ ಸಂಸತ್ ಸದಸ್ಯತ್ವ ಮರಳಿ ಪಡೆದಿದ್ದಾರೆ. ಇದರ ಬೆನ್ನಲ್ಲೇ ರಾಹುಲ್‌ ಅವರು ಸಂಸತ್ತಿಗೆ ಪ್ರವೇಶಿಸಿ, ಲೋಕಸಭೆ ಕಲಾಪದಲ್ಲೂ ಭಾಗಿಯಾಗಿದ್ದಾರೆ. ಸಂಸತ್ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ತುಘಲಕ್ ಲೇನ್‌ನಲ್ಲಿದ್ದ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು. ಇದೀಗ ಸಂಸತ್ ಸದಸ್ಯತ್ವ ಮರಳಿ ಸಿಕ್ಕ ಬೆನ್ನಲ್ಲೇ ತಾವಿದ್ದ ಸರ್ಕಾರಿ ಬಂಗಲೆ ಮರಳಿ ಸಿಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ನಿಯಮದ ಪ್ರಕಾರ, ರಾಹುಲ್ ಗಾಂಧಿ ಸರ್ಕಾರಿ ಬಂಗಲೆಗೆ ಅರ್ಜಿ ಸಲ್ಲಿಸಿದರೆ ಸಂಸದರಿಗೆ ಸರ್ಕಾರ ಮನೆ ನೀಡಲಿದೆ.

ರಾಹುಲ್ ಈ ಹಿಂದೆ ತಂಗಿದ್ದ ತುಘಲಕ್ ಲೇನ್‌ನಲ್ಲಿನ ಸರ್ಕಾರಿ ಬಂಗಲೆಯನ್ನು ಇದುವರೆಗೂ ಯಾವುದೇ ಸಂಸದರಿಗೆ ನೀಡಿಲ್ಲ. ಸದ್ಯ ಈ ಬಂಗಲೆ ಖಾಲಿ ಇದೆ. ಹೀಗಾಗಿ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದರೆ ಅದೇ ಬಂಗಲೆ ಮರಳಿ ಸಿಗಲಿದೆ. ಪಾರ್ಲಿಮೆಂಟರಿ ಕಮಿಟಿಗೆ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯಲ್ಲಿ ರಾಹುಲ್ ಗಾಂಧಿ ತಾವು ತಂಗಲು ಇಚ್ಚಿಸಿರುವ ಸರ್ಕಾರಿ ಬಂಗಲೆಯನ್ನು ಉಲ್ಲೇಖಿಸಿ ಮನವಿ ಮಾಡಿದರೆ, ಅದೇ ಬಂಗಲೆ ಸಿಗಲಿದೆ.ನಿಯಮದ ಪ್ರಕಾರ ಖಾಲಿಯಾಗಿರುವ ಸರ್ಕಾರಿ ಬಂಗಲೆಯನ್ನು ಸಂಸತ್ ಸಮಿತಿ, ಸಂಸದರಿಗೆ ನೀಡುತ್ತದೆ. ಆದರೆ ರಾಹುಲ್ ಗಾಂಧಿ ತೆರವಾದ ಬಳಿಕ ಈ ಬಂಗಲೆ ಖಾಲಿಯಾಗಿ ಉಳಿದಿದೆ. 

Tap to resize

Latest Videos

ರಾಹುಲ್ ಗಾಂಧಿ ಮದ್ವೆಯಾಗಲು ರೆಡಿ, ಆದ್ರೆ ಒಂದು ಕಂಡೀಷನ್;ಸಂಚಲನ ಸೃಷ್ಟಿಸಿದ ಶೆರ್ಲಿನ್ ಚೋಪ್ರಾ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ರದ್ದುಗೊಂಡಿರುವ ಬೆನ್ನಲ್ಲೇ ಈ ಹಿಂದೆ ಅವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆ ಮರಳಿ ಸಿಗುವ ಸಾದ್ಯತೆ ಇದೆ. ಆದರೆ ಬಂಗಲೆ ಮರಳಿ ಪಡೆಯಲು ರಾಹುಲ್‌ ಅವರು ಅರ್ಜಿ ಸಲ್ಲಿಸಬೇಕು ಎಂದು ಮೂಲಗಳು ತಿಳಿಸಿವೆ. ಮೋದಿ ಉಪನಾಮದ ಕುರಿತ ಹೇಳಿಕೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಹುಲ್‌ ಅವರ ಲೋಕಸಭೆ ಸ್ಥಾನ ರದ್ದಾಗಿತ್ತು. ಹೀಗಾಗಿ ತಮಗೆ ನೀಡಲಾಗಿದ್ದ ದೆಹಲಿಯ ತುಘಲಕ್‌ ಲೇನ್‌ನಲ್ಲಿರುವ ಮನೆಯನ್ನು ಖಾಲಿ ಮಾಡಿದ್ದರು. ಇದೀಗ ಸುಪ್ರೀಂಕೋರ್ಚ್‌ ರಾಹುಲ್‌ ಶಿಕ್ಷೆಗೆ ತಡೆ ನೀಡಿದ ಕಾರಣ ಅವರು ಪುನಃ ಸಂಸದ ಹುದ್ದೆ ಅಲಂಕರಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಸೋಮವಾರ ರಾಹುಲ್‌ ಅವರ ನಿವಾಸದ ಕುರಿತು ಲೋಕಸಭೆಯ ವಸತಿ ಸಮಿತಿ ಬಳಿ ಪ್ರಸ್ತಾಪಿಸಿದ್ದರು. ರಾಹುಲ್‌ ಪರವಾಗಿ ತಾವು ಅರ್ಜಿ ಸಲ್ಲಿಸಲು ಬಯಸಿದ್ದರು. ಆದರೆ ಈ ಸ್ವತಃ ರಾಹುಲ್‌ ವರೇ ಅರ್ಜಿ ಸಲ್ಲಿಸಬೇಕು ಎಂದು ಸಮಿತಿ ಸೂಚಿಸಿದೆ.

ಮೋದಿ ತವರಿನಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟಾದ ಕಾಂಗ್ರೆಸ್-ಆಪ್, ಚುನಾವಣಾ ಮೈತ್ರಿ ಘೋಷಣೆ!

ರಾಹುಲ್‌ಗೆ ಸೂರತ್‌ ನ್ಯಾಯಾಲಯ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಚ್‌ ಶುಕ್ರವಾರ ತಡೆ ನೀಡಿತ್ತು. ಅದರ ಬೆನ್ನಲ್ಲೇ ಸದಸ್ಯತ್ವ ಮರಳಿಸುವಂತೆ ಕಾಂಗ್ರೆಸ್‌ ನಾಯಕರು ಸ್ಪೀಕರ್‌ ಅವರಿಗೆ ಮನವಿ ಮಾಡಿದ್ದರು. ಸೋಮವಾರ ಲೋಕಸಭಾ ಸಚಿವಾಲಯ ರಾಹುಲ್‌ ಅವರ ಸದಸ್ಯತ್ವ ಮರಳಿಸಿರುವುದಾಗಿ ತಿಳಿಸಿತು. ಇದರ ಬೆನ್ನಲ್ಲೇ ಸಂಸತ್ತಿಗೆ ಆಗಮಿಸಿದ ರಾಹುಲ್‌ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ನಮನ ಸಲ್ಲಿಸಿ, ಕಲಾಪದಲ್ಲಿ ಭಾಗಿಯಾದರು. ಸಂಸತ್ತಿನ ಆವರಣದಲ್ಲಿ ತಾಯಿ ಸೋನಿಯಾ ಗಾಂಧಿ ಅವರ ಜತೆ ಕಾಲ ಕಳೆದರು. ಈ ವೇಳೆ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ಸಂಸದರು ಸಿಹಿ ಹಂಚಿ ಘೋಷಣೆ ಕೂಗಿ ಸಂಭ್ರಮ ಪಟ್ಟರು.
 

click me!