ಜೈಲುಗಳಲ್ಲಿ ಕೋವಿಡ್ ಹರಡುವ ಭೀತಿಯಿಂದಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಏಳು ರಾಜ್ಯಗಳು ತಮ್ಮ ಜೈಲುಗಳಲ್ಲಿರುವ 28 ಸಾವಿರ ಕೈದಿಗಳನ್ನು ಮಧ್ಯಂತರ ಜಾಮೀನು ಅಥವಾ ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದೆ.
ನವದೆಹಲಿ (ಮಾ. 31): ಜೈಲುಗಳಲ್ಲಿ ಕೋವಿಡ್ ಹರಡುವ ಭೀತಿಯಿಂದಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಏಳು ರಾಜ್ಯಗಳು ತಮ್ಮ ಜೈಲುಗಳಲ್ಲಿರುವ 28 ಸಾವಿರ ಕೈದಿಗಳನ್ನು ಮಧ್ಯಂತರ ಜಾಮೀನು ಅಥವಾ ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದೆ.
ಸರ್ಕಾರಿ ನೌಕರರು, ಶಾಸಕರ ವೇತನ ಅರ್ಧಕ್ಕರ್ಧ ಕತ್ತರಿ!
ಕೆಲ ದಿನಗಳ ಹಿಂದಷ್ಟೇ ಕೈದಿಗಳ ಬಿಡುಗಡೆಗೆ ಉನ್ನತ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು. ಇದರನ್ವಯ ದೆಹಲಿ 3000, ಮಧ್ಯಪ್ರದೇಶ 8,000, ಉತ್ತರ ಪ್ರದೇಶ 11,000, ಗುಜರಾತ್ 1,200, ಪಶ್ಚಿಮ ಬಂಗಾಳ 3,000 ಹಾಗೂ ತಮಿಳುನಾಡು 1,200 ಕೈದಿಗಳ ಬಿಡುಗಡೆಗೆ ಮುಂದಾಗಿದೆ. ಈಗಾಗಲೇ ಹಲವು ರಾಜ್ಯಗಳು ವಿವಿಧ ಹಂತಗಳಲ್ಲಿ ಕೈದಿಗಳನ್ನು ಬಿಡುಗಡೆ ಮಾಡಿದೆ.