ಮೇ 31 ರವರೆಗೆ ಬೆಳೆ ಸಾಲಕ್ಕೆ ಬಡ್ಡಿ ಸಬ್ಸಿಡಿ ವಿಸ್ತರಣೆ

By Suvarna NewsFirst Published Mar 31, 2020, 9:15 AM IST
Highlights

ಕೊರೋನಾ ವೈರಸ್‌ ಕಾರಣ ಭಾರತ ಲಾಕ್‌ಡೌನ್‌ ಆಗಿದ್ದು, ಇದರ ಪರಿಣಾಮ ರೈತರ ಮೇಲೂ ಉಂಟಾಗಿದೆ. ಹೀಗಾಗಿ 3 ಲಕ್ಷ ರು.ವರೆಗಿನ ಅಲ್ಪಾವಧಿ ಬೆಳೆ ಸಾಲಕ್ಕೆ ನೀಡುವ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು ಕೇಂದ್ರ ಸರ್ಕಾರ ಮೇ 31 ರವರೆಗೆ ವಿಸ್ತರಿಸಿದೆ. 

ನವದೆಹಲಿ (ಮಾ. 31): ಕೊರೋನಾ ವೈರಸ್‌ ಕಾರಣ ಭಾರತ ಲಾಕ್‌ಡೌನ್‌ ಆಗಿದ್ದು, ಇದರ ಪರಿಣಾಮ ರೈತರ ಮೇಲೂ ಉಂಟಾಗಿದೆ. ಹೀಗಾಗಿ 3 ಲಕ್ಷ ರು.ವರೆಗಿನ ಅಲ್ಪಾವಧಿ ಬೆಳೆ ಸಾಲಕ್ಕೆ ನೀಡುವ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು ಕೇಂದ್ರ ಸರ್ಕಾರ ಮೇ 31 ರವರೆಗೆ ವಿಸ್ತರಿಸಿದೆ.

2020ರ ಮಾರ್ಚ್ 1 ರಿಂದ 2020ರ ಮೇ 31 ರ ನಡುವೆ ಮರುಪಾವತಿ ಆಗಬೇಕಾದ 3 ಲಕ್ಷ ರು.ವರೆಗಿನ ಸಾಲಕ್ಕೆ ಬಡ್ಡಿ ಸಬ್ಸಿಡಿ ಸೌಲಭ್ಯ ವಿಸ್ತರಣೆ ಆಗುತ್ತದೆ ಎಂದು ಅದು ಹೇಳಿದೆ.

ಕಚ್ಚಾತೈಲ ಬೆಲೆ 23 ಡಾಲರ್‌ಗೆ ಕುಸಿತ: 17 ವರ್ಷಗಳ ಕನಿಷ್ಠ

ಅಂದರೆ ಬಾಕಿ ಪಾವತಿಗೆ ಇದ್ದ ಅವಧಿಯನ್ನು ವಿಸ್ತರಿಸಲಾಗಿದೆ. ಇದರಿಂದಾಗಿ ರೈತರಿಗೆ ಬಡ್ಡಿ ಸಬ್ಸಿಡಿ ಪಡೆಯಲು ಇನ್ನಷ್ಟುಸಮಯ ಸಿಕ್ಕಂತೆ ಆಗಿದೆ.

ಈ ಪ್ರಕಾರ, 3 ಲಕ್ಷ ರು.ವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆಯುವವರಿಗೆ ಶೇ.7 ರ ಬಡ್ಡಿ ವಿಧಿಸಲಾಗುತ್ತದೆ. ವಿಳಂಬ ಮಾಡದೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದವರಿಗೆ ಶೇ.4 ರ ಬಡ್ಡಿ ವಿಧಿಸಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವಾಲಯ ಸೋಮವಾರ ತಿಳಿಸಿದೆ.

ಶೂನ್ಯ ಕೃಷಿಯಿಂದ ಲಕ್ಷಾಂತರ ಲಾಭ ಪಡೆಯುತ್ತಿರುವ ಐಟಿಐ ಪದವೀಧರ!

ಲಾಕ್‌ಡೌನ್‌ ಕಾರಣ ಹಲವು ರೈತರಿಗೆ ಬ್ಯಾಂಕ್‌ಗೆ ತೆರಳಿ ಸಾಲ ಮರುಪಾವತಿ ಮಾಡಲು ಆಗುತ್ತಿಲ್ಲ. ಅಲ್ಲದೆ, ಬೆಳೆಯನ್ನು ಮಾರುವುದು ಕೆಲವರಿಗೆ ಆಗುತ್ತಿಲ್ಲ ಹಾಗೂ ಮಾರಿದ ಬೆಳೆಗೆ ಸಕಾಲಕ್ಕೆ ಹಣ ಸಿಗುತ್ತಿಲ್ಲ. ಈ ಕಾರಣ ಬಡ್ಡಿ ಸಬ್ಸಿಡಿ ವಿಸ್ತರಣೆ ನಿರ್ಧಾರ ಪ್ರಕಟಿಸಲಾಗಿದೆ.

click me!