
ನವದೆಹಲಿ (ಫೆ.13): ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಕೆ.ಆರ್.ಪುರ ಬಿಜೆಪಿ ಶಾಸಕ ಬೈರತಿ ಬಸವರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
‘ನಾವು ನಿಮಗೆ (ಬೈರತಿ) ನಿರೀಕ್ಷಣಾ ಜಾಮೀನು ಮಂಜೂರು ಮಾಡುತ್ತಿದ್ದೆವು. ಆದರೆ ನೀವು ಹಾರಿಕೆಯ ನಿಲುವು ತಾಳಿದ್ದೀರಿ. ಪ್ರಕರಣದ ಪ್ರಮುಖ ಆರೋಪಿ ಗೊತ್ತೇ ಇಲ್ಲ ಎಂದು ಹೇಳಿದ್ದೀರಿ. ಆದರೆ ನಿಮ್ಮ ಕಾಲ್ ರೆಕಾರ್ಡ್‌ಗಳು ಬೇರೆಯದನ್ನೇ ತೋರಿಸುತ್ತಿವೆ’ ಎಂದು ನ್ಯಾಯಪೀಠ ಹೇಳಿತು.
ಇದನ್ನೂ ಓದಿ: ₹7.11 Crore Robbery Case in bengaluru: ಸಿದ್ದಾಪುರ ATM ದರೋಡೆ ಪ್ರಕರಣ; ಪೊಲೀಸ್ ಪೇದೆಯೇ ಕಿಂಗ್‌ಪಿನ್!
ನೀವೊಬ್ಬ ಸಾರ್ವನಿಕ ಸೇವಕರಾಗಿರುವುದರಿಂದ ವಿಚಾರಣೆ ಎದುರಿಸುವ ಧೈರ್ಯ ನಿಮಗೆ ಇರಬೇಕು. ಹೀಗಾಗಿ ನಿರೀಕ್ಷಣಾ ಜಾಮೀನು ಬದಲಿಗೆ, ಮಾಮೂಲಿ ಬೇಲ್ ಅರ್ಜಿಯನ್ನು ಸಲ್ಲಿಸಿ ಎಂದು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತು.
ಈ ವೇಳೆ ಬೈರತಿ ಪರ ವಕೀಲ ಮುಕುಲ್ ರೋಹಟ್ಗಿ ವಾದಿಸಿ, ಆರೋಪಿಯಾಗಿರುವ ಜಗದೀಶ್ ಯಾರೆಂದು ತಮ್ಮ ಕಕ್ಷಿದಾರನಿಗೆ ಗೊತ್ತಿಲ್ಲ ಎಂದು ವಾದಿಸಿದರು. ಜಗದೀಶ್ ಜತೆ ಬೈರತಿ ಅವರು ಸಂಪರ್ಕದಲ್ಲಿರುವುದಕ್ಕೆ ಕಾಲ್ ರೆಕಾರ್ಡ್‌ಗಳು ಇವೆ ಎಂದು ಕೋರ್ಟ್ ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ