ಮುಂಬೈನಲ್ಲಿ ದೇಶದ ಮೊದಲ ಮ್ಯೂಸಿಕಲ್‌ ರಸ್ತೆ! ವೇಗ ಹೆಚ್ಚಿದ್ದರೆ ಸಂಗೀತ ವಿರೂಪ

Kannadaprabha News   | Kannada Prabha
Published : Feb 13, 2026, 05:35 AM IST
Mumbai Musical Road

ಸಾರಾಂಶ

ವಾಣಿಜ್ಯ ರಾಜಧಾನಿ ಮುಂಬೈ ರಸ್ತೆಗಳು ವಾಹನಗಳ ವೇಗ ಮಾತ್ರವಲ್ಲದೆ, ಸಂಗೀತದ ಮಧುರ ಧ್ವನಿಯನ್ನು ಸಹ ಆಲಿಸಲಿವೆ. ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆಯಲ್ಲಿ ದೇಶದ ಮೊದಲ ‘ಮ್ಯೂಸಿಕಲ್‌ ರೋಡ್‌’ ಅನ್ನು ಬುಧವಾರ ಸಿಎಂ ದೇವೇಂದ್ರ ಫಡ್ನವೀಸ್ ಉದ್ಘಾಟಿಸಿದರು.

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ರಸ್ತೆಗಳು ವಾಹನಗಳ ವೇಗ ಮಾತ್ರವಲ್ಲದೆ, ಸಂಗೀತದ ಮಧುರ ಧ್ವನಿಯನ್ನು ಸಹ ಆಲಿಸಲಿವೆ. ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆಯಲ್ಲಿ ದೇಶದ ಮೊದಲ ‘ಮ್ಯೂಸಿಕಲ್‌ ರೋಡ್‌’ ಅನ್ನು ಬುಧವಾರ ಸಿಎಂ ದೇವೇಂದ್ರ ಫಡ್ನವೀಸ್ ಉದ್ಘಾಟಿಸಿದರು. ಈ ರಸ್ತೆಯ ಮೇಲೆ ವಾಹನ ಚಲಾಯಿಸಿದ ತಕ್ಷಣ, ‘ಸ್ಲಂ ಡಾಗ್‌ ಮಿಲಿಯನೇರ್’ನ ‘ಜೈ ಹೋ’ ಹಾಡು ಕೇಳುತ್ತದೆ.

500 ಮೀಟರ್ ಉದ್ದದ ರಸ್ತೆ ಸಂಗೀತ ರಸ್ತೆ

ಅಮರ್ಸನ್ಸ್ ಗಾರ್ಡನ್ ಮತ್ತು ಬ್ರೀಚ್ ಕ್ಯಾಂಡಿ ನಡುವಿನ ಸುಮಾರು 500 ಮೀಟರ್ ಉದ್ದದ ರಸ್ತೆಯನ್ನು ಸಂಗೀತ ರಸ್ತೆಯಾಗಿ ಪರಿವರ್ತಿಸಲಾಗಿದೆ. ಅತ್ಯಾಧುನಿಕ ಹಂಗೇರಿ ತಂತ್ರಜ್ಞಾನ ಬಳಸಿಕೊಂಡು, ರಸ್ತೆ ಮೇಲ್ಮೈಯಲ್ಲಿ ವಿಶೇಷ ‘ಮ್ಯೂಸಿಕಲ್ ರಿಬ್ಸ್’ (ಗ್ರೂವ್ಸ್) ಅಳವಡಿಸಲಾಗಿದೆ. ವಾಹನವು ಗಂಟೆಗೆ 60 ರಿಂದ 80 ಕಿ.ಮೀ. ವೇಗದಲ್ಲಿ ಇದರ ಮೇಲೆ ಸಾಗಿದಾಗ, ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆ ಕಂಪನಗಳನ್ನು ಉಂಟುಮಾಡುತ್ತದೆ. ಆಗ ‘ಜೈ ಹೋ’ ಹಾಡು ಕೇಳಿ ಬರುತ್ತದೆ.

ಸುರಕ್ಷತಾ ಉದ್ದೇಶ :

ಈ ಯೋಜನೆಯ ಉದ್ದೇಶ ಮನರಂಜನೆ ಮಾತ್ರವಲ್ಲದೆ ರಸ್ತೆ ಸುರಕ್ಷತೆ ಉತ್ತೇಜಿಸುವುದು ಕೂಡ. ಸಂಗೀತವನ್ನು ಸ್ಪಷ್ಟವಾಗಿ ಕೇಳಲು, ಚಾಲಕನು ಗಂಟೆಗೆ 60-80 ಕಿ.ಮೀ ವೇಗ ಕಾಯ್ದುಕೊಳ್ಳಬೇಕು. ವೇಗ ಕಡಿಮೆ ಅಥವಾ ಹೆಚ್ಚಿದ್ದರೆ, ಸಂಗೀತ ವಿರೂಪಗೊಳ್ಳುತ್ತದೆ. ಇದು ಚಾಲಕರು ನಿಗದಿತ ವೇಗ ಮಿತಿಯನ್ನು ಅನುಸರಿಸಲು ಪ್ರೋತ್ಸಾಹಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದ ಅತಿದೊಡ್ಡ ರಕ್ಷಣಾ ಖರೀದಿಗೆ ಸಂಪುಟದ ಸಮ್ಮತಿ
ಸೇನಾಧಿಕಾರಿಗಳ ಕೃತಿ ಪ್ರಕಟಣೆಗೆ ಕಠಿಣ ನಿಯಮ : ಚಿಂತನೆ