ರಜನೀ ರಾಜಕೀಯ ಪ್ರವೇಶ| ಮಹತ್ವದ ಘೋಷಣೆ ಮಾಡಿದ ರಜನೀಕಾಂತ್| ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ರಚನೆ ಖಚಿತ
ಚೆನ್ನೈ(ಡಿ.03): ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನೀಕಾಂತ್ ತಮಿಳುನಾಡು ರಾಜಕೀಯ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಬಗ್ಗೆ ಖುದ್ದು ರಜನೀಕಾಂತ್ ಟ್ವೀಟ್ ಮಾಡಿದ್ದು, ತಮುಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷ ಆರಂಭಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಡಿ.31ರಂದು ಘೋಷಣೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.
ರಜನಿ ರಾಜಕೀಯ ಪ್ರವೇಶ ಇಂದು ನಿರ್ಧಾರ ಸಂಭವ!
undefined
ರಜನೀಕಾಂತ್ ಗುರುವಾರ ಬೆಳಗ್ಗೆ ತಮ್ಮ ರಾಜಕೀಯ ಸಲಹೆಗಾರರೊಂದಿಗೆ ಸಭೆ ನಡೆಸಿದ್ದಾರೆ. ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ರಾಜಕೀಯ ಸಲಹೆಗಾರ ಥಮಿಜಾರುವಿ ಮನಿಯಾನ್ ನಮ್ಮ ಸಭೆಯಲ್ಲೇನಾಯ್ತು ಎಂಬ ಬಗ್ಗೆ ನಾನು ತಿಳಿಸಲು ಸಾಧ್ಯವಿಲ್ಲ. ಇದನ್ನು ಕೇವಲ ರಜನೀಕಾಂತ್‌ರವರೇ ರಾಜಕೀಯಕ್ಕೆ ಪ್ರವೇಶಿಸುತ್ತಾರೋ ಇಲ್ಲವೋ ಎಂದು ತಿಳಿಸುತ್ತಾರೆ. ನಾನು ಅವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸಿದ್ದೇನೆ ಎಂದಿದ್ದಾರೆ.
ಇನ್ನು ಈ ಸಭೆ ಬಳಿಕ ರಜನೀಕಾಂತ್ ಟ್ವೀಟ್ ಮಾಡಿದ್ದು, ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದೇನೆ. ಈ ಕುರಿತಂತೆ ಡಿ.31ರಂದು ಘೋಷಣೆ ಮಾಡಲಾಗುವುದು ಎಂದಿದ್ದಾರೆ.
ஜனவரியில் கட்சித் துவக்கம்,
டிசம்பர் 31ல் தேதி அறிவிப்பு. 🤘🏻 pic.twitter.com/9tqdnIJEml
ಅಲ್ಲದೇ 'ಜನರ ಬೆಂಬಲದಿಂದ ಮುಂಬರುವ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸುತ್ತೇನೆ. ತಮಿಳುನಾಡಿನಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕವಾದ ಒಂದು ಹೊಸಬಗೆಯ ರಾಜಕೀಯ ಮುನ್ನೆಲೆಗೆ ಬರಲಿದೆ. ಭ್ರಷ್ಟಾಚಾರವಿಲ್ಲದ, ಜಾತಿ-ಧರ್ಮಗಳ ಭೇದ ಇಲ್ಲ ರಾಜಕೀಯ ಇದಾಗಿರಲಿದೆ. ಅದ್ಭುತಗಳು ನಡೆಯಬಹುದು' ಎಂದು ರಜನಿಕಾಂತ್ ಭರವಸೆ ನೀಡಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ರಜನಿ, ಅಳಗಿರಿ ಬೆಂಬಲ ಬಿಜೆಪಿಗೆ?
ರಜನಿಕಾಂತ್ ಅವರಿಗೆ ಈಗ 69 ವರ್ಷ ವಯಸ್ಸು. ಕೊರೊನಾ ಕಾಲದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ವೈದ್ಯರು ಸಲಹೆ ಅವರಿಗೆ ನೀಡಿದ್ದಾರೆ. ಹೀಗಾಗಿ ಅವರ ರಾಜಕೀಯ ಪ್ರವೇಶ ಇನ್ನಷ್ಟು ತಡವಾಗಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೀಗ ಈ ಎಲ್ಲಾ ಅನುಮಾನಗಳಿಗೆ ಖುದ್ದು ರಜನೀಕಾಂತ್ ತೆರೆ ಎಳೆದಿದ್ದಾರೆ. ಡಿ.31ರಂದು ಅವರು ಮಾಡಲಿರುವ ಆ ಪ್ರಮುಖ ಘೋಷಣೆ ಏನು ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.
2021ರಲ್ಲಿ ನಡೆಯಲಿದೆ ತಮಿಳುನಾಡು ಅಸೆಂಬ್ಲೆ ಎಲೆಕ್ಷನ್:
ತಮಿಳುನಾಡಿನ ವಿಧಾನಸಭಾ ಚುನಾವಣೆ 2021ರಲ್ಲಿ ನಡೆಯಲಿದೆ. ಈ ಹಿಂದೆಯೇ ರಜನೀಕಾಂತ್ ತನ್ನ ಪಕ್ಷದ ಶೇ. 60-65ರಷ್ಟು ಅಭ್ಯರ್ಥಿಗಳು 45-50 ವರ್ಷದವರಾಗಿರುತ್ತಾರೆಂದಿದ್ದರು.