ಅಯೋಧ್ಯೆ: ರಾಮಮೂರ್ತಿಯ ಮೇಲೆ ಸೂರ್ಯರಶ್ಮಿ ಪ್ರಯೋಗ ಸಕ್ಸಸ್‌

Published : Apr 15, 2024, 09:42 AM IST
ಅಯೋಧ್ಯೆ: ರಾಮಮೂರ್ತಿಯ ಮೇಲೆ ಸೂರ್ಯರಶ್ಮಿ ಪ್ರಯೋಗ ಸಕ್ಸಸ್‌

ಸಾರಾಂಶ

ರಾಮಮಂದಿರದಲ್ಲಿ ಏ.17ರ ರಾಮನವಮಿ ದಿನ ಬಾಲರಾಮನ ಮೂರ್ತಿಯ ಮೇಲೆ ಸೂರ್ಯರಶ್ಮಿಯ ಕಿರಣ ಬೀಳುವ ಪ್ರಯೋಗವನ್ನು ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಅಯೋಧ್ಯೆ: ರಾಮಮಂದಿರದಲ್ಲಿ ಏ.17ರ ರಾಮನವಮಿ ದಿನ ಬಾಲರಾಮನ ಮೂರ್ತಿಯ ಮೇಲೆ ಸೂರ್ಯರಶ್ಮಿಯ ಕಿರಣ ಬೀಳುವ ಪ್ರಯೋಗವನ್ನು ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಏ.17ರ ರಾಮನವಮಿಯಂದು ಸಹ ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳಲಿದೆ. ಅದನ್ನು ದೂರದರ್ಶನ ನೇರಪ್ರಸಾರ ಮಾಡಲಿದ್ದು, ಜಗತ್ತಿನಾದ್ಯಂತ ಜನರು ಈ ತಂತ್ರಜ್ಞಾನ ಕೌತುಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಟ್ರಸ್ಟ್‌ ಪ್ರಕಟಿಸಿದೆ.

ರಾಮಮಂದಿರ ನಿರ್ಮಾಣ ಬಳಿಕ ದೇಶದಲ್ಲಿ ಧರ್ಮಜಾಗೃತಿ ಪರ್ವ ಆರಂಭವಾಗಿದೆ: ಪೇಜಾವರಶ್ರೀ

ಆಯೋಧ್ಯೆಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಟಿಟಿಡಿ ಉಪಾಯ 

ತಿರುಪತಿ: ಅಯೋಧ್ಯೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು, ಸರತಿ ಸಾಲು, ನೀರಿನ ಘಟಕ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ರಾಮಮಂದಿರ ಟ್ರಸ್ಟ್‌ಗೆ ತಿರುಮಲ ತಿರುಪತಿ ದೇಗಲದ (ಟಿಟಿಡಿ) ಎಂಜಿನಿಯರ್‌ಗಳ ತಂಡ ಸಲಹೆಗಳನ್ನು ನೀಡಿದೆ.

ರಾಮಮಂದಿರ ಟ್ರಸ್ಟ್‌ ಆಹ್ವಾನದ ಮೇಲೆ ಕಳೆದ ಫೆ.16 ಮತ್ತು 17ರಂದು ಟಿಟಿಡಿ ಎಂಜಿನಿಯರ್‌ಗಳ ತಂಡವೊಂದು ಅಯೋಧ್ಯೆಗೆ ಭೇಟಿ ನೀಡಿತ್ತು. ದೇಗುಲದಲ್ಲಿ ಜನಸಂದಣಿ, ಸರತಿ ಸಾಲು, ನೀರಿನ ಘಟಕ, ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಈ ಕುರಿತು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಸೇರಿದಂತೆ ಇನ್ನಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ