ಚುನಾವಣಾ ಬಾಂಡ್‌ಗಳ 2ನೇ ಅತೀ ದೊಡ್ಡ ಖರೀದಿದಾರ ಸಂಸ್ಥೆಯಾಗಿ ಹೊರ ಹೊಮ್ಮಿರುವ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಯಾರು ಅವರ ಹಿನ್ನೆಲೆ ಏನು ಇಲ್ಲಿದೆ ಯಾರು?
ಹೈದರಾಬಾದ್: ಲೋಕಸಭಾ ಚುನಾವಣೆಯ ಸಮಯದಲ್ಲಿಯೇ ಚುನಾವಣಾ ಬಾಂಡ್ ಅಕ್ರಮ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಚುನಾವಣಾ ಬಾಂಡ್‌ಗಳನ್ನು ನಿಷೇಧಗೊಳಿಸಿತ್ತು. ಇದೇ ವೇಳೆ ಕಳೆದ ಆರು ವರ್ಷಗಳಲ್ಲಿ ಯಾವ ಯಾವ ಕಂಪನಿಗಳು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ದೇಣಿಗೆ ನೀಡಿದ್ದವು ಎಂಬ ವಿಚಾರವೂ ಬಹಿರಂಗವಾಗಿತ್ತು. ಹೀಗಾಗಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆ ಚುನಾವಣಾ ಬಾಂಡ್‌ಗಳ 2ನೇ ಅತೀ ದೊಡ್ಡ ಖರೀದಿದಾರ ಸಂಸ್ಥೆ ಎಂಬುದು ಗೊತ್ತಾಗಿತ್ತು. ಹಾಗಿದ್ದರೆ ಈ ಮೇಘಾ ಇಂಜಿನಿಯರಿಂಗ್ ಸಂಸ್ಥೆ ಯಾರದ್ದು? ಇದರ ಸ್ಥಾಪಕರು ಯಾರು ಇಲ್ಲಿದೆ ಅವರ ಡಿಟೇಲ್ಡ್ ಸ್ಟೋರಿ...
ಚುನಾವಣಾ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರರಾಗಿ ಹೊರಹೊಮ್ಮಿರುವ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದ್ದು, ಸಾಮಾನ್ಯ ರೈತರೊಬ್ಬರ ಮಗ, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ರೈತರೊಬ್ಬರ ಐದನೇ ಮಗನಾಗಿ ಜನಿಸಿದ ಪಿಪಿ ರೆಡ್ಡಿ, 5 ಲಕ್ಷ ಬಂಡವಾಳ ಹೂಡಿಕೆಯೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇಂದು ಈ ಸಂಸ್ಥೆ 67,500 ಕೋಟಿ ಮೌಲ್ಯವನ್ನು ಹೊಂದಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ವಜ್ರದಾಕಾರ ಮನೆಯಲ್ಲಿ ವಾಸ ಮಾಡುವ ಪಿಪಿ ರೆಡ್ಡಿ ಆಲಿಯಾಸ್ ಪಾಮಿರೆಡ್ಡಿ ಪಿಚ್ಚಿ ರೆಡ್ಡಿ, ರೈತನ ಮಗನಾದರೂ ಬೆಳೆದಿದ್ದು ಮಾತ್ರ ಬೇರೆಯದ್ದೇ ಬೆಳೆ. ಪ್ರಸ್ತುತ ಫೋರ್ಬ್ಸ್ ಪ್ರಕಾರ ಪಿಪಿ ರೆಡ್ಡಿ ಅವರ ವೈಯಕ್ತಿಕ ನಿವ್ವಳ ಮೌಲ್ಯ 2.3 ಬಿಲಿಯನ್ ಡಾಲರ್ (ಅಂದಾಜು ₹ 19,230 ಕೋಟಿ).
ಚುನಾವಣಾ ಬಾಂಡ್ ಅಕ್ರಮ: ಕಾಂಗ್ರೆಸ್‌ಗೆ ಮೇಘಾ 25 ಕೋಟಿ ನಗದು, ಐಟಿ
ಆರಂಭದಲ್ಲಿ ಕೇವಲ 5 ಲಕ್ಷದ ಬಂಡವಾಳದೊಂದಿಗೆ ಹೈದರಾಬಾದ್‌ನ ಬಾಲನಗರದ ಶೆಡ್‌ವೊಂದರಲ್ಲಿ ಮೇಘಾ ಇಂಜಿನಿಯರಿಂಗ್ ಎಂಟರ್ ಪ್ರೈಸಸ್ ನ್ನು ಪಿಪಿ ರೆಡ್ಡಿ ಸ್ಥಾಪಿಸಿದ್ದರು. ನಂತರ ಇವರ ಅಳಿಯ ಪಿವಿ ಕೃಷ್ಣ ರೆಡ್ಡಿ ಅವರು ಕೂಡ ಮಾವನ ಸಂಸ್ಥೆಯನ್ನು ಸೇರಿಕೊಂಡರು. ನಂತರ ನಿಧಾನವಾಗಿ ಇಬ್ಬರೂ ಸಂಸ್ಥೆಯ ಬೇರುಗಳನ್ನು ವಿಸ್ಯರಿಸುವ ಯೋಜನೆಯನ್ನು ಕೈಗೊಂಡರು. ಆರಂಭದಲ್ಲಿ ಸಣ್ಣ ಸಣ್ಣ ರಸ್ತೆ ಮೂಲ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡರು ಅಂತಿಮವಾಗಿ 2006ರಲ್ಲಿ ತಮ್ಮ ಸಂಸ್ಥೆಯ ಹೆಸರನ್ನು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL)ಎಂದು ಬದಲಾಯಿಸಿದರು.
ಮಾವ ಸಂಸ್ಥೆಯ ಚೇರ್‌ಮ್ಯಾನ್ ಆದ್ರೆ, ಆಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ್ರು. ತುಂಬು ಜೋಬಿನ ಜೊತೆ ಕಿಕ್ಕಿರಿದ ಸ್ಪರ್ಧಿಗಳಿಂದ ತುಂಬಿರುವ ಈ ಉದ್ಯಮದಲ್ಲಿ ನಿಧಾನವಾಗಿ ಬೆಳೆಯುತ್ತಾ ಭಾರತದ ಅಗ್ರ ಕಾರ್ಯನಿರ್ವಹಣೆಯ ಆದರೆ ಪಟ್ಟಿಯಲ್ಲಿರದ ಸಂಸ್ಥೆಯಲ್ಲಿ ಇವರ ಎಂಇಐಎಲ್ ಒಂದಾಯ್ತು. ನಿಧಾನವಾಗಿ ಹೆದ್ದಾರಿಗಳು ಮತ್ತು ವಿದ್ಯುತ್ ಸ್ಥಾವರಗಳಂತಹ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರಾರಂಭಿಸಿತು ಮತ್ತು 20 ರಾಜ್ಯಗಳು ಮಾತ್ರವಲ್ಲದೇ ಬಾಂಗ್ಲಾದೇಶ ಕುವೈತ್ ಸೇರಿದಂತೆ ಬಹು ದೇಶಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.
Electoral Bonds: ಎಸ್‌ಬಿಐ ನೀಡಿದ ಬಾಂಡ್ ವಿವರ..ಚುನಾವಣಾ ಆಯೋಗ ಪ್ರಕಟ: ಹೆಚ್ಚು ದೇಣಿಗೆ ಪಡೆದ ಪಕ್ಷಗಳು ಯಾವು?
ಕಾಶ್ಮೀರದ ಗಂದರ್‌ಬಾಲ್ ಮತ್ತು ಕಾರ್ಗಿಲ್‌ನ ದ್ರಾಸ್ ನಡುವೆ ಎಲ್ಲಾ ಹವಾಮಾನ ಸ್ಥಿತಿಗಳಲ್ಲೂ ಸಂಪರ್ಕ ಒದಗಿಸುವ ಜೊಜಿಲಾ ಸುರಂಗ ನಿರ್ಮಾಣವೂ ಇವರದೇ ಕೊಡುಗೆ 25 ಸಾವಿರ ಕೋಟಿಯ ಈ ಯೋಜನೆಯೂ ಹೆಚ್ಚು ಚರ್ಚಿಸಲ್ಪಟ್ಟ ವಿಚಾರವಾಗಿದೆ. ತೆಲಂಗಾಣದ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆ ಮತ್ತು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣದ ನಿರ್ಮಾಣ ಕೂಡ ಈ ಇವರ ಮೇಘಾ ಇನ್ಪ್ರಾಸ್ಟಕ್ಚರ್ ಸಂಸ್ಥೆಯ ಕೊಡುಗೆಯಾಗಿದೆ ಇದರಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣದ ನಿರ್ಮಾಣವನ್ನು ಮತ್ತೊಂದು ಕಂಪನಿಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.
ಪ್ರಸ್ತುತ ಪಿಪಿ ರೆಡ್ಡಿಯವರು ಹೈದರಾಬಾದ್ ನಗರದ ಹೆಗ್ಗುರುತುಗಳಲ್ಲಿ ಒಂದಾಗಿರುವ ವಜ್ರದಂತೆ ಕಾಣುವ ಮನೆಯಲ್ಲಿ ನೆಲೆಸಿದ್ದಾರೆ. ಇವರ ಅಧಿಪತ್ಯದ ತೋಟದ ಮನೆಯಲ್ಲಿ ಗಾಲ್ಫ್ ಕೋರ್ಸ್ ಕೂಡ ಇದೆ. ಇವರ ಮಾಲೀಕತ್ವದ ಎಂಇಐಎಲ್ ಸಂಸ್ಥೆ ಈಗ 966 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 2ನೇ ಅತೀ ದೊಡ್ಡ ಚುನಾವಣಾ ಬಾಂಡ್ ಖರೀದಿಸಿದ ಸಂಸ್ಥೆಯಾಗಿ ಹೊರ ಹೊಮ್ಮಿದೆ. 'ಲಾಟರಿ ಕಿಂಗ್' ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಫ್ಯೂಚರ್ ಗೇಮಿಂಗ್ ಮೊದಲ ಸ್ಥಾನದಲ್ಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಕಂಪನಿ ಮತ್ತು ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ಲಂಚ ಪ್ರಕರಣ ದಾಖಲಿಸಿದೆ. ಛತ್ತೀಸ್‌ಗಢದ ಜಗದಲ್‌ಪುರ ಸಂಯೋಜಿತ ಸ್ಟೀಲ್ ಪ್ಲಾಂಟ್‌ಗೆ ಸಂಬಂಧಿಸಿದಂತೆ ಎಂಇಐಎಲ್‌ನ 174 ಕೋಟಿ ಬಿಲ್‌ಗಳನ್ನು ಕ್ಲಿಯರ್ ಮಾಡಲು ಎಂಟು ಅಧಿಕಾರಿಗಳು 78 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪವಿದೆ.