ಬುಲ್ಲಿ ಬಾಯಿ ಪ್ರಕರಣ: ಆ್ಯಪ್ ನಿರ್ಮಿಸಿದವರಿಗೆ ಜಾಮೀನು

Published : Mar 29, 2022, 11:38 AM IST
ಬುಲ್ಲಿ ಬಾಯಿ ಪ್ರಕರಣ: ಆ್ಯಪ್ ನಿರ್ಮಿಸಿದವರಿಗೆ ಜಾಮೀನು

ಸಾರಾಂಶ

ದೆಹಲಿ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ನಿರಾಜ್ ಬಿಷ್ಣೋಯ್, ಔಮ್ಕಾರೇಶ್ವರ್ ಠಾಕೂರ್‌ಗೆ ಜಾಮೀನು ಮಹಿಳೆಯರನ್ನು ಅವಹೇಳನಕಾರಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ಆ್ಯಪ್‌  

ಪ್ರತಿಷ್ಠಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ 'ಬುಲ್ಲಿ ಬಾಯಿ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್‌ ರಚನೆ ಮಾಡಿದ ಆರೋಪಿಗೆ ಜಾಮೀನು ಮಂಜೂರಾಗಿದೆ. 'ಸುಲ್ಲಿ ಡೀಲ್ಸ್' (Sulli Deals) ಮತ್ತು 'ಬುಲ್ಲಿ ಬಾಯಿ' (Bulli Bai)ಅಪ್ಲಿಕೇಶನ್‌ಗಳ ಹಿಂದಿನ ಮಾಸ್ಟರ್‌ಮೈಂಡ್‌ಗಳಿಗೆ ರಾಷ್ಟ್ರ ರಾಜಧಾನಿಯ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಉಪ ಪೊಲೀಸ್ ಆಯುಕ್ತ ಕೆ.ಪಿ.ಎಸ್. ಮಲ್ಹೋತ್ರಾ (K.P.S. Malhotra ) ಸುದ್ದಿ ಸಂಸ್ತೆ ಐಎನ್‌ಎಸ್ ಜೊತೆ ಮಾತನಾಡಿ, ಆರೋಪಿಗಳಾದ ಸುಲ್ಲಿ ಡೀಲ್ ಆ್ಯಪ್ ಸೃಷ್ಟಿಕರ್ತ ಔಮ್ಕಾರೇಶ್ವರ್ ಠಾಕೂರ್ (Aumkareshwar Thakur) ಮತ್ತು ಬುಲ್ಲಿ ಬಾಯಿ ಆ್ಯಪ್‌ ಸೃಷ್ಟಿಕರ್ತ ನಿರಾಜ್ ಬಿಷ್ಣೋಯ್ (Niraj Bishnoi) ಅವರಿಗೆ ಜಾಮೀನು ಮಂಜೂರಾಗಿದೆ ಎಂದು ಹೇಳಿದರು. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಫಲಿತಾಂಶಗಳು ಮತ್ತು ಮಧ್ಯವರ್ತಿಗಳ ಉತ್ತರಗಳು ಇನ್ನೂ ಕೋರ್ಟ್‌ಗೆ ಹಸ್ತಾಂತರ ಆಗದೇ ಇರುವ ಕಾರಣ ಇವರಿಗೆ ಜಾಮೀನು ಮಂಜೂರಾಗಿದೆ ಎಂದು ಮಲ್ಹೋತ್ರಾ ಐಎಎನ್‌ಎಸ್‌ಗೆ ತಿಳಿಸಿದರು.

ಅಪ್ಪ ಕೋವಿಡ್‌ನಿಂದ ಸಾವು, ಅಮ್ಮ ಕ್ಯಾನ್ಸರ್‌ಗೆ ಬಲಿ : ಬುಲ್ಲಿಬೈ ಮಾಸ್ಟರ್ ಮೈಂಡ್ 18 ರ ತರುಣಿಯ ರೋಚಕ ಕತೆ

ವಿಚಾರಣಾ ನ್ಯಾಯಾಲಯವು ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳ ಮೇಲೆ ಅವಲಂಬಿತವಾಗಿದೆ ಮತ್ತು ತನಿಖೆಯಲ್ಲಿ ಯಾವುದೇ ನ್ಯೂನತೆ ಕಂಡುಬಂದಿಲ್ಲ ಎಂದು ಮಲ್ಹೋತ್ರಾ ಹೇಳಿದರು. ನ್ಯಾಯಾಲಯವು ಮಾನವೀಯ ಆಧಾರದ ಮೇಲೆ ಜಾಮೀನು ನೀಡಿದೆ ಮತ್ತು ಆಪಾದಿತ ವ್ಯಕ್ತಿಗಳನ್ನು ಮೊದಲ ಬಾರಿಯ ತಪ್ಪು ಎಸಗಿದ ಅಪರಾಧಿಗಳು ಎಂದು ಪರಿಗಣಿಸಲಾಗಿದೆ ಹಾಗೂ ಅಲ್ಲದೇ ನಿರಂತರ ಸೆರೆವಾಸವು ಒಟ್ಟಾರೆ ಯೋಗಕ್ಷೇಮಕ್ಕೆ ಹಾನಿಕಾರಕವಾಗಿದೆ.

ಮಧ್ಯಪ್ರದೇಶದ (Madhya Pradesh) ಇಂದೋರ್‌ನ (Indore) ನಿವಾಸಿ 25 ವರ್ಷದ ಠಾಕೂರ್‌ನನ್ನು ಜನವರಿ 8 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಜುಲೈ 2021ರಲ್ಲಿ ಈ ಅವಹೇಳನಕಾರಿ ಅಪ್ಲಿಕೇಶನ್ ಕಾಣಿಸಿಕೊಂಡಿತ್ತು. ಅಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ದುರುದ್ದೇಶಪೂರ್ವಕವಾಗಿ ಬಳಸಲಾಗಿತ್ತು.

ದೆಹಲಿ ಪೊಲೀಸರ ಸೈಬರ್ ಕ್ರೈಂ ಘಟಕವು ಜುಲೈ 8 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-A (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಈ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಏತನ್ಮಧ್ಯೆ, ದೆಹಲಿ ಮೂಲದ ಪತ್ರಕರ್ತೆಯೊಬ್ಬರು ಕೆಲವು  ಒಂದು ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಅಪರಿಚಿತ ವ್ಯಕ್ತಿಗಳು ಹಾಗೂ ಗುಂಪು ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ದೂರು ದಾಖಲಿಸಿದ ಬಳಿಕ ಈ ಪ್ರಕರಣ ಮತ್ತೆ 2022ರ ಜನವರಿಯಲ್ಲಿ ಬೆಳಕಿಗೆ ಬಂದಿತು. ಈ ಅಪ್ಲಿಕೇಷನ್‌ ಅನ್ನು ಗಿಟ್‌ಹಬ್‌ ಮೂಲಕ ಹೋಸ್ಟ್‌ ಮಾಡಲಾಗಿದೆ. ಹಾಗೆಯೇ ಬುಲ್ಲಿ ಬೈ ಅಪ್ಲಿಕೇಷನ್‌ ಕೂಡ ಅವಹೇಳನಕಾರಿ ವಿಚಾರಗಳೊಂದಿಗೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಹಲವಾರು ಮಹಿಳೆಯರ ಚಿತ್ರಗಳನ್ನು  ಈ ಅಪ್ಲಿಕೇಷನ್‌ನಲ್ಲಿ ಪೋಸ್ಟ್‌ ಮಾಡಿತ್ತು.

Bulli Bai Deal: ಮುಸ್ಲಿಂ ಮಹಿಳೆಯರ ಹರಾಜು, 18 ವರ್ಷದ ಯುವತಿಯೇ ಮಾಸ್ಟರ್ ಮೈಂಡ್!

ಬುಲ್ಲಿ ಬೈ ಅಪ್ಲಿಕೇಶನ್ ನೂರಾರು ಮುಸ್ಲಿಂ ಮಹಿಳೆಯರನ್ನು 'ಹರಾಜಿಗೆ' ಪಟ್ಟಿ ಮಾಡಿತ್ತು. ಇದರ ಸೃಷ್ಟಿಕರ್ತ, ನೀರಜ್ ಬಿಷ್ಣೋಯ್ ಅವರನ್ನು ಜನವರಿ 6 ರಂದು ದೆಹಲಿ ಪೊಲೀಸರು (Delhi Police)ಬಂಧಿಸಿದ್ದಾರೆ. ಅವರ ವಿಚಾರಣೆಯ ಸಮಯದಲ್ಲಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ವರ್ಚುವಲ್ ವ್ಯಕ್ತಿಗಳೊಂದಿಗೆ ಸಂವಹನ ನಡೆಸುತ್ತಿದ್ದರು ಮತ್ತು ಗುಂಪು ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. 

ಬಿಷ್ಣೋಯ್ ಮಾಡಿದ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಠಾಕೂರ್ ಅವರನ್ನು ಇಂದೋರ್‌ನಲ್ಲಿ ಗುರುತಿಸಿ ಪತ್ತೆ ಹಚ್ಚಲಾಯಿತು. ನಂತರ ಜನವರಿ 8 ರಂದು, ಐಎಫ್‌ಎಸ್‌ಒ, ದೆಹಲಿ ಪೊಲೀಸ್ ವಿಶೇಷ  ತಂಡವು ಇಂದೋರ್‌ಗೆ ತೆರಳಿ ಆರೋಪಿಯನ್ನು ಬಂಧಿಸಿತು. ಠಾಕೂರ್ ಅವರನ್ನು ಪರೀಕ್ಷಿಸಲಾಯಿತು ಮತ್ತು ಅವರ ತಾಂತ್ರಿಕ ಗ್ಯಾಜೆಟ್‌ಗಳನ್ನು ಪ್ರಾಥಮಿಕ ವಿಶ್ಲೇಷಣೆಗೆ ಒಳಪಡಿಸಲಾಯಿತು. ತನಿಖೆಯ ವೇಳೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಗಿಟ್‌ಹಬ್‌ನಲ್ಲಿ ಸುಲ್ಲಿ ಡೀಲ್ ಆ್ಯಪ್ ಅನ್ನು ರಚಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ