ಚಾರಣ ಹೊರಟವರಿಗೆ ಶಾಕ್‌ ನೀಡಿದ ಸ್ನೇಕ್‌

Published : Mar 29, 2022, 10:55 AM ISTUpdated : Mar 29, 2022, 10:57 AM IST
ಚಾರಣ ಹೊರಟವರಿಗೆ ಶಾಕ್‌ ನೀಡಿದ ಸ್ನೇಕ್‌

ಸಾರಾಂಶ

ಚಾರಣಿಗರಿಗೆ ಶಾಕ್ ನೀಡಿದ ಸ್ನೇಕ್ ಕಕ್ಕಾಬಿಕ್ಕಿಯಾಗಿ ಓಡಿದ ಯುವತಿ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್‌

ಥಾಯ್ಲೆಂಡ್‌(ಮಾ.29): ಚಾರಣ ತೆರಳಿದ ಯುವತಿಯೊಬ್ಬಳಿಗೆ ಹಾವೊಂದು ಶಾಕ್ ನೀಡಿದ್ದು, ಆಕೆ ಭಯದಿಂದ ಓಡಿದ್ದಾಳೆ. ಥಾಯ್ಲೆಂಡ್‌ನ ಗುಡ್ಡಗಾಡು ಪ್ರದೇಶದ ಮೂಲಕ ನಡೆದುಕೊಂಡು ಹೋಗುತ್ತಿದ್ದ ಚಾರಣಿಗರ ಗುಂಪಿಗೆ ಈ ಬಾರಿ ಶಾಕ್‌ ಕಾದಿತ್ತು. 

ಚಾರಣಿಗರು ಕಿರಿದಾದ ಕಾಲುದಾರಿಯ ಮೂಲಕ ಚಲಿಸುತ್ತಿದ್ದಾಗ ದೊಡ್ಡ ಹಾವೊಂದು ಅವರ ಮೇಲೆ ಹಾರಿದೆ. ಅದೃಷ್ಟವಶಾತ್, ಅದು ಕಚ್ಚಲಿಲ್ಲ. ಈ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ಒಬ್ಬ ಮಹಿಳೆ ಮುಂದೆ ಹೋಗುತ್ತಿರುವುದನ್ನು ಮತ್ತು ಇನ್ನೊಬ್ಬ ವ್ಯಕ್ತಿ ಆಕೆಯ ಹೋಗುತ್ತಿರುವುದನ್ನು ಹಿಂದಿನಿಂದ ವಿಡಿಯೋ ಮಾಡುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಪೊದೆಯಲ್ಲಿದ್ದ ಹಾವೊಂದು ಛಂಗನೇ ಇವರ ಮೇಲೆ ಹಾರಿದೆ. ಇದರಿಂದ ಒಮ್ಮೆಗೆ ಆಘಾತಕ್ಕೊಳಗಾದ ಯುವತಿ ಕಿರುಚುತ್ತಾ ಓಡುತ್ತಿರುವುದು ವಿಡಿಯೋದಲ್ಲಿದೆ. 

p> 

 

ಈ ವೇಳೆ ಕ್ಯಾಮರಾ ಔಟ್‌ ಆಫ್ ಪೋಕಸ್ ಆಗಿದೆ. ಚಾರಣಿಗರು ಭಯದಿಂದ ಸುರಕ್ಷಿತ ಪ್ರದೇಶದತ್ತ ಓಡಿದ್ದಾರೆ. ಮಾರ್ಚ್ 20 ರಂದು ಉತ್ತರ ಥೈಲ್ಯಾಂಡ್‌ನ ಪರ್ವತ (northern Thailand) ಪ್ರಾಂತ್ಯವಾದ ಚಿಯಾಂಗ್ ರಾಯ್‌ನಲ್ಲಿ (Chiang Rai)ಈ ಘಟನೆ ನಡೆದಿದೆ. ಮತ್ತು ಮರುದಿನ ಯೂಟ್ಯೂಬ್‌ನಲ್ಲಿ ಈ ವೀಡಿಯೊವನ್ನು ವೈರಲ್‌ಹಾಗ್ ಹಂಚಿಕೊಂಡಿದೆ. ಇಲ್ಲಿ ಚಾರಣಿಗರನ್ನು ಹಾವು ಆಶ್ಚರ್ಯಕ್ಕೊಳಗಾಗಿಸುತ್ತಿದೆ ಎಂದು ಈ ವಿಡಿಯೋಗೆ ಕಾಮೆಂಟ್ ಮಾಡಲಾಗಿದೆ. ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಇದುವರೆಗೆ 12,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಸೋಲೂರಿನ ಭೈರವದುರ್ಗಕ್ಕೆ ರಾಮನಗರ ಜಿಲ್ಲಾಧಿಕಾರಿಯ ಚಾರಣ

ಇಲಿ ಹಾವು ಪಾದಯಾತ್ರೆಯಲ್ಲಿ ಜನರನ್ನು ಆಶ್ಚರ್ಯಗೊಳಿಸುತ್ತದೆ" ಎಂದು ಶೀರ್ಷಿಕೆಯನ್ನು ಓದುತ್ತದೆ. ಇಲಿ ಹಾವುಗಳು ವಿಷಕಾರಿಯಲ್ಲ ಮತ್ತು ಅವು ಸಂಕೋಚನದಿಂದ ಸಾಯುತ್ತವೆ. ಅವು ಮನುಷ್ಯರಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಸ್ನೇಕ್‌ ರಾಟ್ ಎಂದು ಕರೆಯಲ್ಪಡುವ ಈ ಹಾವುಗಳು ಅವರ ಹೆಸರೇ ಸೂಚಿಸುವಂತೆ ಇಲಿಗಳು ಅವುಗಳ ನೆಚ್ಚಿನ ಆಹಾರವಾಗಿದೆ. ಆದಾಗ್ಯೂ, ವಿಷಪೂರಿತ ಹಾವು ಮತ್ತು ರಾಟ್‌ ಹಾವುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಹೆಚ್ಚಿನ ಜನರಿಗೆ ಕಷ್ಟಕರವಾಗಿರುತ್ತದೆ. ಮತ್ತು ಜನರು ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ  ಓಡಿ ಶುರು ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುತ್ತಾರೆ.

ಬೆಂಗ್ಳೂರಲ್ಲಿ ಹಾವುಗಳ ಹಾವಳಿ ದಿಢೀರ್‌ ಹೆಚ್ಚಳ: ಆತಂಕದಲ್ಲಿ ಜನತೆ..!
 

ಬೆಂಗಳೂರಿಗರಿಗೆ ಬಿಸಿಲಿನ ಭಯನ ನಡುವೆ ಮತ್ತೊಂದು ಭಯ ಶುರುವಾಗಿದೆ. ಇಡೀ ದಿನ ಬಿಸಿಲಿನ ಝಳ. ಮನೆಯ ಸುತ್ತ ಹಾವುಗಳ (Snakes) ಉಪಟಳ.‌ ಜನ ಜೀವ ಭಯದಲ್ಲಿ ಇರುವಂತೆ ಮಾಡಿವೆ ಹಾವುಗಳ ಕಾಟ‌. ಮನೆಯ ಅಡುಗೆ ಕೋಣೆ, ದೇವರ ಕೋಣೆ, ಶೂ ರ್‍ಯಾಕ್, ಬಾತ್‌ ರೂಂ ಹೀಗೆ ಎಲ್ಲೆಂದರಲ್ಲಿ ಹಾವುಗಳ ಕಾಟ ಶುರುವಾಗಿದೆ. ಬೆಂಗಳೂರಿನ (Bengaluru) ವೈಟ್ ಫೀಲ್ಡ್, ಮಾರತ್ತಹಳ್ಳಿ, ಎಚ್ ಬಿಆರ್ ಲೇಔಟ್ ಮಹದೇವಪುರ, ಬಾಣಸವಾಡಿ, ಕೆಆರ್ ಪುರ, ಪೀಣ್ಯ, ಸೇರಿದಂತೆ ಹಲವು ಏರಿಯಾಗಳಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ.

ಬೆಂಗಳೂರಲ್ಲಿ ತಾಪಮಾನ ಏರಿಕೆ ಇಂದ ಹಾವುಗಳ ಕಾಟ ಹೆಚ್ಚಳವಾಗಿದೆ. ಬೆಂಗಳೂರಲ್ಲಿ ಗರಿಷ್ಠ 34 ರಿಂದ 36 ಡಿಗ್ರಿ ತನಕ ತಲುಪುತ್ತಿದೆ. ಮನುಷ್ಯ ಬಿಸಿಲಿನ ಝಳಕ್ಕೆ ಎಳನೀರು, ಜ್ಯೂಸ್, ಮಜ್ಜಿಗೆ ಮೊರೆ ಹೋದಂತೆ ಹಾವುಗಳು ಕೂಡ ತಣ್ಣನೆಯ ಪ್ರದೇಶವನ್ನ ಆಶ್ರಯಕ್ಕಾಗಿ ಹುಡುಕುತ್ತವೆ. ಹೀಗಾಗಿ ಮನೆಯ ಆವರಣ, ಶೂ ರ್‍ಯಾಕ್, ದೇವರ ಕೋಣೆ, ಬಾತ್ ರೂಮ್, ಕಿಟಕಿ, ಹಳೇ ಸಾಮಾಗ್ರಿ ತುಂಬಿರುವ ಕೊಠಡಿ, ಸಂಪ್ ಗಳತ್ತ ಬರುತ್ತಿವೆ.‌ ಹೀಗಾಗಿ ಬೆಂಗಳೂರು ಮಂದಿಗೆ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಬೆಳಗ್ಗೆ ಆರಾಮಾಗಿ ಓಡಾಡುವಂತಿಲ್ಲ ಎಂಬ ಪರಿಸ್ಥಿತಿ ಇದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ