ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್‌, ಪ್ರಿಯಾಂಕಾ ಕಿಡಿ

By Kannadaprabha News  |  First Published Apr 28, 2023, 12:47 PM IST

ಆತ್ಮಹತ್ಯೆ ತಮಾಷೆಯ ಸಂಗತಿಯಲ್ಲ. ಅದರ ಬಗ್ಗೆ ಅಸೂಕ್ಷ್ಮವಾಗಿ ಮಾತನಾಡುವುದರ ಬದಲು ಜನರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.


ಪಿಟಿಐ ನವದೆಹಲಿ (ಏ.28) : ‘ಆತ್ಮಹತ್ಯೆ ತಮಾಷೆಯ ಸಂಗತಿಯಲ್ಲ. ಅದರ ಬಗ್ಗೆ ಅಸೂಕ್ಷ್ಮವಾಗಿ ಮಾತನಾಡುವುದರ ಬದಲು ಜನರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.

ಮಾಧ್ಯಮ ಸಂವಾದವೊಂದರಲ್ಲಿ ಬುಧವಾರ ಮಾತನಾಡಿದ್ದ ಪ್ರಧಾನಿ ಮೋದಿ(PM Narendra Modi), ಹೇಗೆ ಒಬ್ಬ ಪ್ರೊಫೆಸರ್‌ ತಾನು ಇಷ್ಟೆಲ್ಲಾ ವರ್ಷಗಳ ಕಾಲ ಮಗಳಿಗೆ ಸರಿಯಾಗಿ ಬರೆಯಲು ಕಲಿಸಿದ್ದರೂ ಆಕೆ ಸೂಸೈಡ್‌ ನೋಟ್‌ನಲ್ಲಿ ಕಾಗುಣಿತದ ತಪ್ಪು ಬರೆದಿದ್ದಾಳೆಂದು ಆಕ್ಷೇಪ ವ್ಯಕ್ತಪಡಿಸಿದ್ದ ಬಗ್ಗೆ ತಮಾಷೆ ಮಾಡಿದ್ದರು.

Tap to resize

Latest Videos

 

ಶೃಂಗೇರಿ ಆನೆಗೆ ಸೇಬು ತಿನ್ನಿಸಿದ ಪ್ರಿಯಾಂಕ ಗಾಂಧಿ: ಕೆಲವು ವಿಶೇಷ ಫೋಟೋಗಳು ಇಲ್ಲಿವೆ ನೋಡಿ.!

ಅದಕ್ಕೆ ಗುರುವಾರ ಕಿಡಿಕಾರಿರುವ ರಾಹುಲ್‌ ಗಾಂಧಿ(Rahul gandhi), ‘ಆತ್ಮಹತ್ಯೆ(Suicide)ಯೆಂಬ ಪಿಡುಗಿನಿಂದ ಸಾವಿರಾರು ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿವೆ. ಅವರ ಬಗ್ಗೆ ತಮಾಷೆ ಮಾಡಬಾರದು’ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಿಯಾಂಕಾ ಗಾಂಧಿ ಕೂಡ ಟ್ವೀಟ್‌ ಮಾಡಿ, ‘ಖಿನ್ನತೆ ಹಾಗೂ ಆತ್ಮಹತ್ಯೆ ತಮಾಷೆಯ ವಿಷಯವಲ್ಲ. 2021ರಲ್ಲಿ 164033 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಯುವಕರೇ ಹೆಚ್ಚಿದ್ದಾರೆ. ಈ ದುರಂತ ಜೋಕ್‌ ಅಲ್ಲ. ಇಂತಹ ವಿಷಯದ ಬಗ್ಗೆ ಅಸೂಕ್ಷ್ಮವಾಗಿ ಮಾತನಾಡುವುದನ್ನು ಬಿಟ್ಟು ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ ಪ್ರಧಾನಿ ಮಾತಿನ ವಿಡಿಯೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡು ಆಕ್ಷೇಪ ವ್ಯಕ್ತಪಡಿಸಿದೆ.

ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಯಾರಿಸಿ ಸವಿದ ಪ್ರಿಯಾಂಕಾ ಗಾಂಧಿ!

 

click me!