ನಾನು ನನ್ನ ಗಂಡನ ಉದ್ಯಮಿ ಮಾಡಿದೆ, ನನ್ನ ಮಗಳು ಆಕೆ ಗಂಡನ ಪ್ರಧಾನಿ ಮಾಡಿದ್ಲು: ಸುಧಾಮೂರ್ತಿ

By Anusha Kb  |  First Published Apr 28, 2023, 12:45 PM IST

ನನಗೆ ನನ್ನ ಗಂಡನನ್ನು ಬದಲಾಯಿಸಲು ಆಗಲಿಲ್ಲ, ಆದರೆ ಆಕಿ (ಮಗಳು) ತನ್ನ ಗಂಡನಲ್ಲಿ ಬದಲಾವಣೆ ಮಾಡಿದ್ಲು, ನಾ ನನ್ನ ಗಂಡನನ್ನು Businessmen ಮಾಡಿದೆ. ಆಕೆ ಆಕೆಯ ಗಂಡನನ್ನು Prime Minister ಮಾಡಿದಳು ಎಂದು ಸುಧಾಮೂರ್ತಿ ಖುಷಿಯಿಂದ ಹೇಳಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.


ಲಂಡನ್‌: ಸರಳತೆ ಹಾಗೂ ನುಡಿದಂತೆ ನಡೆಯುವ ಗುಣ ಹಾಗೂ ಹಲವು ಮಾನವೀಯ ಕಾರ್ಯಗಳಿಂದಾಗಿ ದೇಶಾದ್ಯಂತ ತಮ್ಮದೇ ಆದಂತಹ ಅಭಿಮಾನಿ ವರ್ಗವನ್ನು ಹೊಂದಿರುವವರು ಇನ್‌ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು. ಅವರ ಹೇಳಿಕೆಗಳು ಕೆಲ ಅಮೂಲ್ಯ ಜೀವನ ಸಲಹೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ದೇಗುಲ ಭೇಟಿ ವೇಳೆ ಅವರು ಮಾತನಾಡಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಸುಧಾಮೂರ್ತಿಯವರು ತಮ್ಮ ಮಗಳು ಅಳಿಯನ ಬಗ್ಗೆ ಮಾತನಾಡಿದ್ದಾರೆ. ಸುಧಾಮೂರ್ತಿಯವರ ಕುಟುಂಬ ಮಂತ್ರಾಲಯ ರಾಘವೇಂದ್ರ ರಾಯರ ದೊಡ್ಡ ಭಕ್ತರು. ಹೀಗಾಗಿ ಅವರ ಮನೆಯಲ್ಲಿ ಏನೇ ಹೊಸದು ಮಾಡುವುದಿದ್ದರೂ ಗುರುವಾರ ಮಾಡುತ್ತಾರಂತೆ. ಬಗ್ಗೆ ಸುಧಾಮೂರ್ತಿಯವರನ್ನು ಮಾತುಗಾರರೊಬ್ಬರು ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು ಹೌದು, ನಾರಾಯಣಮೂರ್ತಿಯವರು ಇನ್‌ಫೋಸಿಸ್ ಶುರು ಮಾಡಿದ್ದು, ಗುರುವಾರ, ಅಷ್ಟೇ ಅಲ್ಲ ನಮ್ಮ ಮಗಳನ್ನು ಲಗ್ನ ಆದ ಮೇಲೆ ನಮ್ಮ ಅಳಿಯ ( ರಿಷಿ ಸುನಕ್ ಪ್ರಸ್ತುತ ಇಂಗ್ಲೆಂಡ್ ಪ್ರಧಾನಿ) ಅವನು ಪಂಜಾಬಿ ನೂರುನೂರೈವತ್ತು ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿದವರು, ಆತನೂ ಬಹಳ ಧಾರ್ಮಿಕ ವ್ಯಕ್ತಿಯಾಗಿದ್ದಾನೆ. ಗುರುವಾರ ಉಪವಾಸ ಮಾಡುತ್ತಾನೆ. ಆತ ಮಗಳನ್ನು ವಿವಾಹವಾದ ನಂತರ ನಿಮ್ಮ ಮನೆಯಲ್ಲಿ ಏನೇ ಮಾಡುವುದಿದ್ದರೂ ಒಟ್ಟ ಗುರುವಾರವೇ ಶುರು ಮಾಡುತ್ತಿರಲ್ಲ. ಯಾಕೆ ಎಂದು ಒಂದು ಬಾರಿ ಕೇಳಿದ್ದ. ಅದಕ್ಕೆ ನಾವು ಗುರು ರಾಘವೇಂದ್ರ ಸ್ವಾಮಿಗಳ ಭಕ್ತರು ಎಂದು ಆತನಿಗೆ ಹೇಳಿದೆ. ಆತನಿಗೆ ಕನ್ನಡ ಬರುವುದಿಲ್ಲ. ಇದಾದ ಬಳಿಕ ಆತನೂ Thursday is the good day (ಗುರುವಾರ ಒಳ್ಳೆಯ ದಿನ) ಎಂದು ಪ್ರತಿ ಗುರುವಾರ ಉಪವಾಸ ಮಾಡುತ್ತಾನೆ. ನನ್ನ ಅಳಿಯನ ತಾಯಿ ಸೋಮವಾರ ಉಪವಾಸ ಮಾಡಿದರೆ ಅಳಿಯ ಗುರುವಾರ ಉಪವಾಸ ಮಾಡುತ್ತಾನೆ ಇದು ಹೆಂಡ್ತಿ ಮಹಿಮೆ  ಎಂದು ಸುಧಾಮೂರ್ತಿಯವರು ತಮಾಷೆಯಾಗಿ ಹೇಳಿದ್ದಾರೆ. 

Tap to resize

Latest Videos

ಶಿಷ್ಟಾಚಾರ, ಭದ್ರತೆ ಬದಿಗೊತ್ತಿ ಕುಟುಂಬದ ಜೊತೆ ಕುಳಿತಿದ್ದ ಅಕ್ಷತಾ ಮೂರ್ತಿ, ಆಮೇಲೆ ಆಗಿದ್ದೇನು?

ಮತ್ತು ಮುಂದುವರಿಸಿದ ಅವರು ಹೆಂಡತಿ ಗಂಡನನ್ನು ಹೇಗೆ ಬದಲಾಯಿಸಬಹುದು ನೋಡ್ರಿ, ಆದರೆ ನನಗೆ ನನ್ನ ಗಂಡನನ್ನು ಬದಲಾಯಿಸಲು ಆಗಲಿಲ್ಲ, ಆದರೆ ಆಕಿ ತನ್ನ ಗಂಡನಲ್ಲಿ ಬದಲಾವಣೆ ಮಾಡಿದ್ಲು, ನಾ ನನ್ನ ಗಂಡನನ್ನು Businessmen ಮಾಡಿದೆ. ಆಕೆ ಆಕೆಯ ಗಂಡನನ್ನು Prime Minister ಮಾಡಿದಳು ಎಂದು ಸುಧಾಮೂರ್ತಿ ಖುಷಿಯಿಂದ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಈಗ ಸಖತ್ ವೈರಲ್ ಆಗಿದೆ. ಮಾತು ಮುಂದುವರಿಸಿದ ಸುಧಾಮೂರ್ತಿ ಅವರನ್ನು ಇಲ್ಲಿಗೆ ಒಮ್ಮೆ ಕರೆದುಕೊಂಡು ಬರುತ್ತೇನೆ. ದೇವರ ಮೇಲಿನ ಭಕ್ತಿ ಅವರವರಿಗೆ ಬಿಟ್ಟಿದ್ದು, ನಾವು ಅದನ್ನು ಪ್ರಶ್ನಿಸುವಂತಿಲ್ಲ. ಆದರೆ ನಾನು ಮಾತ್ರ ನರಸಿಂಹನ ಸ್ಮರಣೆ ಬಿಡುವುದಿಲ್ಲ ಎಂದು ಸುಧಾಮೂರ್ತಿ ಹೇಳುತ್ತಾರೆ.  ಒಂದು ನಿಮಿಷ 35 ಸೆಕೆಂಡ್‌ಗಳ ಈ ವೀಡಿಯೋವನ್ನು ಸಾಕಷ್ಟು ಜನ ವೀಕ್ಷಿಸಿದ್ದು ಮೆಚ್ಚುಗೆ ಸೂಚಿಸಿದ್ದಾರೆ. 

ರಿಷಿ ಸುನಕ್ ಅವವರು ಸುಧಾಮೂರ್ತಿ (Sudha murthy)ಹಾಗೂ ನಾರಾಯಣಮೂರ್ತಿಯವರ (Narayana Murthy) ಪುತ್ರಿ ಅಕ್ಷತಾ ಮೂರ್ತಿ (Akshata murthy) ಅವರನ್ನು 2009ರಲ್ಲಿ ವಿವಾಹವಾಗಿದ್ದರು. ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್‌ಗಳೆನಿಸಿದ  ನಾರಾಯಣ ಮೂರ್ತಿಯವರ ಮಗಳು ಸುಮಾರು 730 ಮಿಲಿಯನ್ ಪೌಂಡ್ ವೈಯಕ್ತಿಕ ಸಂಪತ್ತನ್ನು ಹೊಂದಿದ್ದಾರೆ.  ಶತಕೋಟಿ ಮೌಲ್ಯದ ಟೆಕ್ ಕಂಪನಿಯನ್ನು ಹೊಂದಿದ್ದರು ಅಕ್ಷತಾ ಪೋಷಕರು ಪ್ರಚಾರದಿಂದ ದೂರ ಉಳಿದು ಸರಳತೆಗೆ ಹೆಸರಾಗಿದ್ದಾರೆ. 

ಕತೆ ಹೇಳಿ ನಗಿಸಿ ನಲಿಸಿದ ಅಂತಾರಾಷ್ಟ್ರೀಯ ಅಜ್ಜಿ ಸುಧಾಮೂರ್ತಿ!

ಅಕ್ಷತಾ ಮೂರ್ತಿಯವರ ತಂದೆ ನಾರಾಯಣ ಮೂರ್ತಿ, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇನ್ಫೋಸಿಸ್ ಟೆಕ್ ಕಂಪನಿಯ ಸ್ಥಾಪಕರು ಆಗಿದ್ದಾರೆ.  ಇತ್ತ ಇವರ ಅಳಿಯ 42 ವರ್ಷದ ರಿಷಿ ಸುನಕ್  (Rishi Sunak) ಯುಕೆಯ ಅತ್ಯತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.  ಎಂಪಿಯಾಗಿದ್ದವರು 7 ವರ್ಷಗಳಲ್ಲಿ ಪ್ರಧಾನಿಯಾಗಿ ಬದಲಾಗಿದ್ದಾರೆ. ತಮ್ಮ ಮಗಳು ರಿಷಿ ಸುನಕ್ ಬದುಕಿನಲ್ಲಿ ಭಾರಿ ಬದಲಾವಣೆ ತಂದಿದ್ದಾಳೆ ಎಂದು ಸುಧಾಮೂರ್ತಿ ಹೆಮ್ಮೆಯಿಂದ ಹೇಳಿದ್ದಾರೆ. 

I made my husband a businessman. My daughter made her husband Prime Minister of UK !

- Sudhamurthy pic.twitter.com/031ByqhDWZ

— Vishweshwar Bhat (@VishweshwarBhat)

 

click me!