
ಪಾರಾದ್ವೀಪ್: ಒಡಿಶಾದ ಪಾರಾದ್ವೀಪ್ ಬಂದರಿನಲ್ಲಿ ಲಂಗರು ಹಾಕಿರುವ ಹಡಗೊಂದರಲ್ಲಿ ರಷ್ಯಾ ಮೂಲ ಮಿಲ್ಯಾಕೋವ್ ಸೆರ್ಗೇಯ್ (51) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಡಗೊಂದರಲ್ಲಿ ಸಿಬ್ಬಂದಿಯಾಗಿರುವ ಮಿಲ್ಯಾಕೋವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದರೂ, ಒಡಿಶಾದಲ್ಲಿ ಕಳೆದ 15 ದಿನಗಳಲ್ಲಿ ರಷ್ಯಾ ಮೂಲದ ವ್ಯಕ್ತಿಯ ಸಾವಿನ ಮೂರನೇ ಘಟನೆ ಇದಾಗಿರುವ ಕಾರಣ ಈ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಡಿ.22ರಂದು ಒಡಿಶಾದ ರಾಯಗಡದ ಹೋಟೆಲ್‌ನಲ್ಲಿ 61 ವರ್ಷ ಪ್ರಾಯದ ರಷ್ಯಾದ (Russia) ವ್ಲಾಡಿಮಿರ್ ಬಿಡೆನೋವ್ (Vladimir Bidenov) ತಮ್ಮ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಡಿ.24ರಂದು ಅದೇ ಹೋಟೆಲ್‌ನಲ್ಲಿ ಸಂಸದ 65 ವರ್ಷದ ಪವೆಲ್ ಆ್ಯಂಟೋವ್ (Pavel Antov) ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಇಬ್ಬರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರ (Russian President Vladimir Putin) ಕಟು ವಿರೋಧಿಗಳಾಗಿದ್ದರು. ಹೀಗಾಗಿ ಅವರ ಸಾವಿನ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಇದೀಗ ಮಿಲ್ಯಾಕೋವ್ ಸಾವನ್ನಪ್ಪಿರುವುದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ. ಮಿಲ್ಯಾಕೋವ್‌ಗೂ ಮತ್ತು ಇತ್ತೀಚೆಗೆ ಸಾವನ್ನಪ್ಪಿದ ಇಬ್ಬರಿಗೆ ಯಾವುದೇ ನಂಟಿರುವ ಕುರಿತು ಇದುವರೆಗೂ ಮಾಹಿತಿ ಹೊರಬಿದ್ದಿಲ್ಲ.
ರಷ್ಯಾ ಅಧ್ಯಕ್ಷರಿಗೆ ಅಂತೂ ಇಂತೂ ಬುದ್ಧಿ ಬಂತಾ..? ಯುದ್ಧ ಮುಗಿಸಲು ಬಯಸುತ್ತೇನೆ ಎಂದ ಪುಟಿನ್..!
Vladimir Putin: ಮೆಟ್ಟಿಲಿನಿಂದ ಜಾರಿಬಿದ್ದು ಮಲ ವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ