ಗೆಳೆಯನ ಹುಡುಕಲು ಸಹಾಯ ಮಾಡಿದ ಬೀದಿ ನಾಯಿ: ಕಾಣೆಯಾದ ಮಗು ಮರಳ ದಿಬ್ಬದಲ್ಲಿ ಶವವಾಗಿ ಪತ್ತೆ

Published : Apr 04, 2025, 07:05 PM ISTUpdated : Apr 07, 2025, 02:57 PM IST
ಗೆಳೆಯನ ಹುಡುಕಲು ಸಹಾಯ ಮಾಡಿದ ಬೀದಿ ನಾಯಿ: ಕಾಣೆಯಾದ ಮಗು ಮರಳ ದಿಬ್ಬದಲ್ಲಿ ಶವವಾಗಿ ಪತ್ತೆ

ಸಾರಾಂಶ

ಬಾಲಕನೋರ್ವ ಹಠಾತ್ ನಾಪತ್ತೆಯಾಗಿದ್ದು, ಆತನನ್ನು ಹುಡುಕಲು ಆತನ ಜೊತೆ ಆಟವಾಡುತ್ತಿದ್ದ ನಾಯಿಯೊಂದು ಸಹಾಯ ಮಾಡಿದ ಮನಕಲುಕುವ ಘಟನೆ ಕೇಂದ್ರಾಡಳಿತ ಪ್ರದೇಶ ದಮನ್‌ನಲ್ಲಿ ನಡೆದಿದೆ. 

ತನ್ನೊಂದಿಗೆ ಆಟವಾಡುತ್ತಿದ್ದ ಆದರೆ ಕಾಣೆಯಾಗಿದ್ದ ಬಾಲಕನನ್ನು ಪತ್ತೆ ಮಾಡಲು ಬೀದಿನಾಯಿಯೊಂದು ಪೊಲೀಸರಿಗೆ ಸಹಾಯ ಮಾಡಿದ ಘಟನೆ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ-ನಗರ ಹವೇಲಿಯಲ್ಲಿ ನಡೆದಿದೆ. ಬಾಲಕ ಮಂಗಳವಾರದಿಂದ ನಾಪತ್ತೆಯಾಗಿದ್ದ. ಸಂಜೆ ಆಟವಾಡಲು ಹೋದ ಒಂಬತ್ತು ವರ್ಷದ ಬಾಲಕ ಹಿಂತಿರುಗದ ಕಾರಣ ಬಾಲಕನ ತಂದೆ ಪೊಲೀಸರಿಗೆ ದೂರು ನಿಡಿದ್ದರು. ನಂತರ ಪೊಲೀಸರು ಬಾಲನಿಗಾಗಿ ಹುಡುಕಾಟ ನಡೆಸಿದಾಗ 60 ಮೀಟರ್ ದೂರದಲ್ಲಿ ಮರಳ ದಿಬ್ಬದಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. 

ಮಂಗಳವಾರ ಮಗು ಕಾಣೆಯಾದ ದೂರು ಬಂದ ತಕ್ಷಣ ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಮಗು ಬೀದಿ ನಾಯಿಯೊಂದಿಗೆ ಆಡುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಇದರ ಬಗ್ಗೆ ವಿಚಾರಿಸಿದಾಗ ನಾಯಿ ಆ ಪ್ರದೇಶದಲ್ಲಿದ್ದು, ಮಗು ಅದರೊಂದಿಗೆ ಆಟವಾಡುತ್ತಿತ್ತು ಮತ್ತು ಮಗು ನಾಯಿಗೆ ಆಹಾರ ನೀಡುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ನಂತರ ಪೊಲೀಸರು ನಾಯಿಗಾಗಿ ಹುಡುಕಾಟ ನಡೆಸಿದರು. ನಾಯಿಯನ್ನು ನೋಡಿದಾಗ ಮಗು ಸತ್ತ ಸ್ಥಿತಿಯಲ್ಲಿ ಪತ್ತೆಯಾದ ಮಣ್ಣಿನ ದಿಬ್ಬದ ಮೇಲೆ ನಾಯಿ ಮಣ್ಣನ್ನು ಅಗೆಯುತ್ತಿತ್ತು. 15 ಅಡಿ ಎತ್ತರದ ಮರಳ ದಿಬ್ಬದಲ್ಲಿ ನಾಯಿಯನ್ನು ಅಸಹಜವಾಗಿ ಕಂಡ ಪೊಲೀಸರು ಮರಳು ತೆಗೆದು ಪರಿಶೀಲಿಸಿದಾಗ ಮರಳಿನ ದಿಬ್ಬದಲ್ಲಿ ಮಗು ಪತ್ತೆಯಾಯಿತು ಎಂದು ತಿಳಿದು ಬಂದಿದೆ.

ಹನುಮಾನ್ ಚಾಲೀಸಾಗೆ ಈ ಶ್ವಾನ ಹೇಗೆ ಪ್ರತಿಕ್ರಿಯಿಸುತ್ತಿದೆ ನೋಡಿ: ವೀಡಿಯೋ ಸಖತ್ ವೈರಲ್

'ನನ್ನ ಮಗ ಮತ್ತು ನಾಯಿ ಸ್ನೇಹಿತರಾಗಿದ್ದರು. ಪೊಲೀಸರು ಮತ್ತು ಗ್ರಾಮಸ್ಥರು ನನ್ನ ಮಗನನ್ನು ಹಲವು ಕಡೆಗಳಲ್ಲಿ ಹುಡುಕುತ್ತಿರುವಾಗ ನಾಯಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಅವರಿಬ್ಬರೂ ಈವರೆಗೆ ಆ ಮಣ್ಣಿನ ದಿಬ್ಬದ ಬಳಿ ಹೋಗಿರಲಿಲ್ಲ. ಅದನ್ನು ಮುಳ್ಳುಬೇಲಿಯಿಂದ ಮುಚ್ಚಲಾಗಿತ್ತು. ನಾಯಿ ಮಣ್ಣನ್ನು ಅಗೆಯುವುದನ್ನು ನೋಡಿ ಅನುಮಾನ ಬಂದು ಅಲ್ಲಿ ಹುಡುಕಿದೆವು ಎಂದು ಮಗುವಿನ ತಂದೆ ಹೇಳಿದ್ದಾರೆ.  ಮರಣೋತ್ತರ ಪರೀಕ್ಷೆಯ ನಂತರ ಆಂತರಿಕ ಅಂಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಕ್ಸ್‌ಗರ್ಲ್‌ಫ್ರೆಂಡ್ ಮನೆಯಿಂದ ಕೋಳಿ ಕದ್ದವನ ಗನ್ ತೋರಿಸಿ ಬಂಧಿಸಿದ ಪೊಲೀಸರು: ವೀಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್