ಮುಂಬೈ ಲೋಕಲ್ ರೈಲಿನಲ್ಲಿನ ನಾಯಿಯ ಪ್ರಯಾಣ, ಶಿಸ್ತು ನೋಡಿ ಕಲೀರಿ ಎಂದ ನೆಟ್ಟಿಗರು!

By Chethan Kumar  |  First Published Jun 1, 2024, 1:35 PM IST

ಲೋಕಲ್ ಟ್ರೈನ್ ಹತ್ತಿದ ನಾಯಿ ಎಲ್ಲರಂತೆ ಪ್ರಯಾಣ ಮಾಡಿದೆ. ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ರೈಲು ನಿಧಾನವಾಗಿದೆ. ಈ ವೇಳೆ ಹಲವರು ಹಾರಿ ಇಳಿಯುತ್ತಾರೆ. ಇದೀ ರೀತಿ ಕೆಲವರು ನಾಯಿಯನ್ನು ರೈಲಿನಿಂದ ಜಂಪ್ ಮಾಡಲು ಪ್ರಚೋದನೆ ಮಾಡಿದ್ದಾರೆ. ಆದರೆ ನಾಯಿ ರೈಲು ನಿಂತ ಬಳಿಕ ಇಳಿದು ಹೋಗಿದೆ.


ಮುಂಬೈ(ಜೂನ್ 01) ಮುಂಬೈ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣ ಮಾಡುವುದು ಸಾಹಸವೇ ಸರಿ. ಕಿಕ್ಕಿರಿದು ತುಂಬಿದ ರೈಲಿನಲ್ಲಿ ನೂಕು ನುಗ್ಗಲು, ಹತ್ತುವ, ಇಳಿಯುವ ಧಾವಂತ, ಹೀಗೆ ಸವಾಲುಗಳು ಒಂದೆರೆಡಲ್ಲ. ಆದರೆ ಬೀದಿ ನಾಯಿಯೊಂದು ಲೋಕಲ್ ಟ್ರೈನ್‌ನಲ್ಲಿ ಶಿಸ್ತಿನಿಂದ ಪ್ರಯಾಣ ಮಾಡಿದೆ. ಇನ್ನು ರೈಲು ನಿಲ್ಲುವ ಮೊದಲೇ ಜನರು ಇಳಿಯಲು ಆರಂಭಿಸುತ್ತಾರೆ. ನಾಯಿ ಪಕ್ಕದಲ್ಲಿದ್ದ ಪ್ರಯಾಣಿಗರು ನಾಯಿಯನ್ನು ತಳ್ಳುವ, ಇಳಿಯುವಂತೆ ಸೂಚಿಸಿದ್ದಾರೆ. ಆದರೆ ನಾಯಿ ರೈಲು ನಿಂತ ಬಳಿಕ ರೈಲಿನಿಂದ ಇಳಿದಿದೆ. ಈ ಶಿಸ್ತ ಮುಖ್ಯ. ಎಲ್ಲರೂ ನಾಯಿಯ ಶಿಸ್ತು ನೋಡಿ ಕಲಿಯಿರಿ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಮುಂಬೈ ಲೋಕಲ್ ಟ್ರೈನ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜನರು ಧಾವಂತದಲ್ಲಿ ಹತ್ತುತ್ತಾರೆ. ನೂಕು ನುಕ್ಕಲು ಸಾಮಾನ್ಯ. ಇನ್ನು ರೈಲು ನಿಲ್ಲುವ ಮೊದಲೇ ಜನರು ರೈಲಿನಿಂದ ಇಳಿಯುತ್ತಾರೆ. ಇದರಿಂದ ಅಪಾಯ ಕೂಡ ಹೆಚ್ಚು.ಹೀಗೆ ಮುಂಬೈ ರೈಲು ಪ್ರಯಾಣದ ವೇಳೆ ನಾಯಿಯೊಂದು ಪ್ರತ್ಯಕ್ಷವಾಗಿದೆ.

Latest Videos

undefined

ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!

ಎಲ್ಲರಂತೆ ನಾಯಿ ಕೂಡ ರೈಲಿನಲ್ಲಿ ಪ್ರಯಾಣ ಮಾಡಿದೆ. ರೈಲಿನ ಬಾಗಿಲ ಬಳಿ ನಿಂತುಕೊಂಡು ನಾಯಿ ಪ್ರಯಾಣ ಮಾಡಿದೆ. ಇತ್ತ ಹಲವು ಪ್ರಯಾಣಿಕರು ನಾಯಿ ಸುತ್ತ ನಿಂತಿದ್ದಾರೆ. ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರು ನಾಯಿಯನ್ನು ತಳ್ಳುವ ಪ್ರಯತ್ನ ಮಾಡಿದ್ದಾರೆ. ರೈಲು ಇನ್ನು ನಿಂತಿಲ್ಲ. ಅಷ್ಟರಲ್ಲೇ ಜನರು ತಮ್ಮಂತೆ ನಾಯಿಯನ್ನು ರೈಲಿನಿಂದ ಜಂಪ್ ಮಾಡಲು ಪ್ರಚೋದಿಸಿದ್ದಾರೆ.

ರೈಲಿನಿಂದ ನಾಯಿನ್ನು ತಳ್ಳಿದರು, ಹೊರಗೆ ಹೋಗುವಂತೆ ಕೂಗಿದರೂ ನಾಯಿ ಮಾತ್ರ ಕದಲಿಲ್ಲ. ರೈಲು ನಿಲ್ದಾಣದಲ್ಲಿ ನಿಂತ ಬಳಿಕ ನಾಯಿ ರೈಲಿನಿಂದ ಇಳಿದು ಹೋಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ರೈಲು ಹತ್ತುವಾಗ, ಇಳಿಯುವಾಗ ಎಚ್ಚರ ವಹಿಸಬೇಕು. ನಾಯಿ ಶಿಸ್ತಿನಿಂದ ರೈಲು ಪ್ರಯಾಣ ಮಾಡಿದೆ. ಪ್ರಚೋದನೆ ಮಾಡಿದರೂ, ತಳ್ಳಿದರೂ ನಾಯಿ ರೈಲಿನಿಂದ ಹಾರಲಿಲ್ಲ. 

 

Dog traveling in the local train.
byu/HouDini2598 inmumbai

 

ನಾಯಿ ಶಿಸ್ತನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ರೈಲು ನಿಲ್ಲವ ಮುನ್ನವೇ ಇಳಿಯುವುದು ಅಥವಾ ಹತ್ತುವುದು ಮಾಡಬೇಡಿ. ನಾಯಿಯನ್ನು ನೋಡಿ ಕಲಿಯಿರಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.  ಮತ್ತೆ ಕೆಲವರು ಮುಂಬೈಕರ್‌ಗಿಂತ ನಾಯಿ ಹೆಚ್ಚು ಸ್ಮಾರ್ಟ್ ಆಗಿದೆ. ನಾಯಿ ಸ್ಮಾರ್ಟ್‌ನೆಸ್, ಶಿಸ್ತು ಎಲ್ಲರಿಗೂ ಕಲಿಯುವ ಪಾಠ ಎಂದಿದ್ದಾರೆ. 

ಸೇನೆಯಿಂದ ನಿವೃತ್ತಿಯಾದ ಮೇರು ನಾಯಿಗೆ ಭಾವುಕ ಬೀಳ್ಕೊಡುಗೆ, ಎಸಿ ಕೋಚ್‌ನಲ್ಲಿ ತವರಿಗೆ ಪ್ರಯಾಣ!
 

click me!