ಇಂದು ಸಂಜೆ ಲೋಕಸಭಾ ಎಕ್ಸಿಟ್‌ಪೋಲ್‌, ಕಾಂಗ್ರೆಸ್ ಬಹಿಷ್ಕಾರಕ್ಕೆ ಬಿಜೆಪಿ ವ್ಯಂಗ್ಯ

By Kannadaprabha NewsFirst Published Jun 1, 2024, 12:58 PM IST
Highlights

ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಜೂ.1 ಶನಿವಾರ ಮುಕ್ತಾಯವಾಗಲಿದೆ. ಸಂಜೆ 6.30ಕ್ಕೆ ಚುನಾವಣೋತ್ತರ ಟೀವಿ ಸಮೀಕ್ಷೆಗಳು ಪ್ರಕಟವಾಗಲಿವೆ. ಹೀಗಾಗಿ ಜೂ.4ರ ಫಲಿತಾಂಶಕ್ಕೂ ಮುನ್ನ ಈ ‘ಸಂಭಾವ್ಯ ಫಲಿತಾಂಶ’ ಪ್ರಕಟಣೆ ಕುತೂಹಲ ಕೆರಳಿಸಿದೆ.

ನವದೆಹಲಿ (ಜೂ.1): ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಜೂ.1 ಶನಿವಾರ ಮುಕ್ತಾಯವಾಗಲಿದೆ. ಸಂಜೆ 6.30ಕ್ಕೆ ಚುನಾವಣೋತ್ತರ ಟೀವಿ ಸಮೀಕ್ಷೆಗಳು ಪ್ರಕಟವಾಗಲಿವೆ. ಹೀಗಾಗಿ ಜೂ.4ರ ಫಲಿತಾಂಶಕ್ಕೂ ಮುನ್ನ ಈ ‘ಸಂಭಾವ್ಯ ಫಲಿತಾಂಶ’ ಪ್ರಕಟಣೆ ಕುತೂಹಲ ಕೆರಳಿಸಿದೆ.

ಇದೇ ವೇಳೆ, 543 ಲೋಕಸಭಾ ಸ್ಥಾನಗಳ ಜತೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನ ಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳೂ ಹೊರಬೀಳಲಿವೆ. ಮತದಾನದ ಅಂತಿಮ ದಿನವಾದ ಜೂ.1 ರಂದು ಸಂಜೆ 6 ಗಂಟೆಯವರೆಗೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸುವುದನ್ನು ಚುನಾವಣಾ ಆಯೋಗ ಸುದ್ದಿ ವಾಹಿನಿಗಳಿಗೆ ನಿರ್ಬಂಧಿಸಿತ್ತು.

Latest Videos

ಮಣಿಪುರದಲ್ಲಿ ಪ್ರವಾಹ ಬಂದಿದೆ, ಕನ್ಯಾಕುಮಾರಿಯಲ್ಲಿ ಕ್ಯಾಮೆರಾ ಮುಂದೆ ಧ್ಯಾನಕ್ಕೆ ಕುಳಿತಿದ್ದಾರೆ ಮೋದಿ: ಪ್ರಿಯಾಂಕ್ ಖರ್ಗೆ ಕಿಡಿ

ಎಕ್ಸಿಟ್‌ ಪೋಲ್‌ ಚರ್ಚೆಗೆ ಬಹಿಷ್ಕಾರ: ಕಾಂಗ್ರೆಸ್ ನಿರ್ಧಾರ

 ಸುದ್ದಿ ವಾಹಿನಿಗಳಲ್ಲಿ ಶನಿವಾರ ನಡೆಯಲಿರುವ ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಟಿಆರ್‌ಪಿಗಾಗಿ ನಡೆಸುವ ಊಹಾಪೋಹ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದೆ. ಶುಕ್ರವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್ ವಕ್ತಾರ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, ‘ಮತದಾರರು ಮತ ಚಲಾಯಿಸಿದ್ದಾರೆ. ಅವರ ತೀರ್ಪು ಖಚಿತವಾಗಿದೆ. ಚುನಾವಣೆ ಫಲಿತಾಂಶ ಜೂ.4 ರಂದು ಹೊರ ಬೀಳಲಿದೆ. ಟಿಆರ್‌ಪಿಗಾಗಿ ನಡೆಸುವ ಊಹಾಪೋಹಗಳ ಚರ್ಚೆ ಮತ್ತು ಸ್ಲಗ್‌ಫೆಸ್ಟ್‌ನಲ್ಲಿ ಪಾಲ್ಗೊಳ್ಳುವಿಕೆಯ ಅವಶ್ಯಕತೆ ನಮಗಿಲ್ಲ. ಜೂ.4 ರಂದು ಫಲಿತಾಂಶ ಹೊರಬಿದ್ದಾಗ ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ’ ಎಂದಿದ್ದಾರೆ.

ಬಿಜೆಪಿ ವ್ಯಂಗ್ಯ

ಕಾಂಗ್ರೆಸ್‌ ಪಕ್ಷ ಎಕ್ಸಿಟ್‌ ಪೋಲ್‌ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದಿರುವುದು, ಸೋಲು ಒಪ್ಪಿಗೆಯ ಸಂಕೇತ ಎಂದು ಬಿಜೆಪಿ ವ್ಯಂಗ್ಯವಾಡಿದೆ.


ಗಂಗಾ ಶುದ್ಧೀಕರಣದಲ್ಲಿ ಮೋದಿ ಸರ್ಕಾರದ ಭ್ರಷ್ಟಾಚಾರ

ಗಂಗಾ ನದಿಯ ಶುದ್ಧೀಕರಣದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನದಿ ಶುದ್ಧೀಕರಣ ಯೋಜನೆಗೆ ಸಂಬಂಧಿಸಿದ ಉಪಕ್ರಮಗಳಲ್ಲಿ ದೊಡ್ಡ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾರಾಣಸಿ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರು 2009ರಲ್ಲಿ ಜಾರಿಯಾದ ‘ಮಿಷನ್‌ ಗಂಗಾ‘ ಹೆಸರನ್ನು ‘ನಮಾಮಿ ಗಂಗಾ’ ಎಂದು ಬದಲಿಸಿದರು, ಆದರೂ ಗಂಗೆ ಶುದ್ಧಿಯಾಗಿಲ್ಲ.
- ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಲೋಕಸಭೆಗೆ ಇಂದು ಕೊನೆ ಹಂತದ ಮತದಾನ: ಇಂದು ಸಂಜೆ ಎಕ್ಸಿಟ್‌ಪೋಲ್‌

ಬಿಜೆಪಿ ದಾರಿ ತಪ್ಪಿಸಬಹುದು ಎಚ್ಚರ

ಬಿಜೆಪಿಯ ಸುಳ್ಳುಗಳು ಹಾಗೂ ಚುನಾವಣಾ ನಂತರದ ಸಮೀಕ್ಷೆಯ ಬಗ್ಗೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಜಾಗರೂಕರಾಗಿಬೇಖು. ಇಂದು ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಇದಾದ ನಂತದ ಚುನಾವಣೆ ನಂತರದ ಸಮೀಕ್ಷೆ ಹೊರಬರಲಿವೆ. ಬಿಜೆಪಿಯಿಂದ ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತವೆ. ಆದ್ದರಿಂದ ನಮ್ಮ ಕಾರ್ಯಕರ್ತರು ಬಹು ಎಚ್ಚರಿಕೆಯಿಂದ ಇರಬೇಕು.
- ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

click me!