ಈ ವಿಷಯದಲ್ಲಿ ನಾನು ರಾಷ್ಟ್ರೀಯವಾದಿ ಮುಸ್ಲಿಮರ ಜೊತೆಗೂ ಮಾತನಾಡಿದ್ದೇನೆ. ಮೊದಲು ನಾವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಿದ್ದೆವು. ಆದರೆ ಅದನ್ನು ಇನ್ನು ನಾನು ಹೇಳಲು ಬಯಸುವುದಿಲ್ಲ.
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ನೀತಿಯ ಬಗ್ಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ, ಪಕ್ಷದಲ್ಲಿನ ಅಲ್ಪಸಂಖ್ಯಾತ ಮೋರ್ಚಾ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅಧಿಕಾರಿ, ‘ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿದ ಪಕ್ಷ ಕಳಪೆ ಸಾಧನೆಗೆ ಅಲ್ಪಸಂಖ್ಯಾತ ಸಮುದಾಯ ಬಿಜೆಪಿಯನ್ನು ಬೆಂಬಲಿಸದೇ ಇದ್ದಿದ್ದೇ ಕಾರಣ. ಈ ವಿಷಯದಲ್ಲಿ ನಾನು ರಾಷ್ಟ್ರೀಯವಾದಿ ಮುಸ್ಲಿಮರ ಜೊತೆಗೂ ಮಾತನಾಡಿದ್ದೇನೆ. ಮೊದಲು ನಾವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಿದ್ದೆವು. ಆದರೆ ಅದನ್ನು ಇನ್ನು ನಾನು ಹೇಳಲು ಬಯಸುವುದಿಲ್ಲ. ಅದರ ಅಗತ್ಯ ಕಾಣುತ್ತಿಲ್ಲ. ಅದನ್ನು ಬಿಟ್ಟು ‘ನಮ್ಮ ಜೊತೆಗಿದ್ದವರ ಜೊತೆಗೆ ನಾವು’ ಎಂಬ ನೀತಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಹಲವು ಪ್ರದೇಶಗಳಲ್ಲಿ ಟಿಎಂಸಿ ಗೂಂಡಾಗಳು ಹಿಂದೂಗಳಿಗೆ ಮತ ಚಲಾವಣೆಯ ಅವಕಾಶವನ್ನೇ ನೀಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಸಾಧ್ಯವಿಲ್ಲ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಸ್ಥಾನಗಳ ಪೈಕಿ 18 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 12 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿತ್ತು.
ಲೋಕಸಭಾ ಚುನಾವಣೆ ಸೋಲು ಬೆನ್ನಲ್ಲೇ ಉತ್ತರ ಪ್ರದೇಶ ಬಿಜೆಪಿಯಲ್ಲಿ ಬಂಡಾಯ? ಸಿಎಂ ಯೋಗಿ ವಿರುದ್ಧ ಅಸಮಾಧಾನ ಸ್ಫೋಟ!
ಅಸ್ಸಾಂ ಜನಸಂಖ್ಯೆಯಲ್ಲಿ ಮುಸ್ಲಿಂ ಪಾಲು ಶೇ.40: ಸಿಎಂ ಕಳವಳ
ರಾಂಚಿ: ಅಸ್ಸಾಂನಲ್ಲಿನ ಮುಸ್ಲಿಂ ಜನಸಂಖ್ಯೆ ಶೇ.40ಕ್ಕೆ ಏರಿಕೆಯಾಗಿದ್ದು, ಜನಸಂಖ್ಯಾ ಬದಲಾವಣೆ ದೊಡ್ಡ ಸಮಸ್ಯೆಯಾಗಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಬುಧವಾರ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಸ್ಸಾಂನಲ್ಲಿ 1951ರಲ್ಲಿ ಶೇ.12ರಷ್ಟಿದ್ದ ಮುಸ್ಲಿಂ ಜನಸಂಖ್ಯೆ ಪ್ರಸ್ತುತ ಶೇ.40ರಷ್ಟಿದೆ. ಇದು ರಾಜಕೀಯ ಸಮಸ್ಯೆಯಲ್ಲ, ಬದಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ’ ಎಂದರು.
ಜಾರ್ಖಂಡನಲ್ಲಿ ಒಳನುಸುಳುಕೋರರಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಮಾತನಾಡಿದ ಶರ್ಮಾ, ‘ಇವರು ಬುಡಕಟ್ಟು ಹುಡುಗಿಯರನ್ನು ಮದುವೆಯಾಗಿ ಅವರ ಭೂಮಿಯನ್ನು ಲಪಟಾಯಿಸುತ್ತಾರೆ. ಇದಕ್ಕೆ ಅನುವು ಮಾಡಿಕೊಡುವ ಮೂಲಕ ಹೇಮಂತ್ ಸೊರೇನ್ ರಾಜ್ಯವನ್ನು ಪುಟ್ಟ ಬಾಂಗ್ಲಾದೇಶ ಮಾಡಲು ಹೊರಟಿದ್ದಾರೆ’ ಎನ್ನುತ್ತ, ಇದನ್ನು ತಡೆಗಟ್ಟಲು ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ; ಡಿಸಿಎಂ ಅಜಿತ್ ಪವಾರ್ ಬಣದ ನಾಯಕರು ಘರ್ ವಾಪ್ಸಿ!