1659ರಲ್ಲಿ ಬಿಜಾಪುರದ ಆದಿಲ್ ಶಾಹಿ ದೊರೆಗಳ ಸೇನಾಪತಿ ಅಫ್ಜಲ್ ಖಾನ್ ಹತ್ಯೆಗೆ ಮರಾಠ ದೊರೆ ಛತ್ರಪತಿ ಶಿವಾಜಿ ಬಳಸಿದ್ದ ವಾಘ್ ನಖ್ (ವ್ಯಾಘ್ರ ನಖ) ಅನ್ನು ಬುಧವಾರ ಲಂಡನ್‌ನಿಂದ ಮುಂಬೈಗೆ ತರಲಾಗಿದೆ.
ಮುಂಬೈ (ಜು.18): 1659ರಲ್ಲಿ ಬಿಜಾಪುರದ ಆದಿಲ್ ಶಾಹಿ ದೊರೆಗಳ ಸೇನಾಪತಿ ಅಫ್ಜಲ್ ಖಾನ್ ಹತ್ಯೆಗೆ ಮರಾಠ ದೊರೆ ಛತ್ರಪತಿ ಶಿವಾಜಿ ಬಳಸಿದ್ದ ವಾಘ್ ನಖ್ (ವ್ಯಾಘ್ರ ನಖ) ಅನ್ನು ಬುಧವಾರ ಲಂಡನ್‌ನಿಂದ ಮುಂಬೈಗೆ ತರಲಾಗಿದೆ.
ಶುಕ್ರವಾರದಿಂದ ಅದನ್ನು ರಾಜ್ಯದ ಸತಾರಾದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ.ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರದ ಸಚಿವ ಶಂಭುರಾಜ್ ದೇಸಾಯಿ, ‘ಇದೊಂದು ಹೆಮ್ಮೆಯ ಕ್ಷಣ. ವ್ಯಾಘ್ರ ನಖವನ್ನು ಭರ್ಜರಿ ಕಾರ್ಯಕ್ರಮದ ಮೂಲಕ ಮಹಾರಾಷ್ಟ್ರದ ಸತಾರಾಕ್ಕೆ ತರಲಾಗುವುದು. ಸತಾರಾದ ಛತ್ರಪತಿ ಶಿವಾಜಿ ಸಂಗ್ರಹಾಲಯದಲ್ಲಿ ವ್ಯಾಘ್ರ ನಖವನ್ನು ಬುಲೆಟ್‌ಫ್ರೂಫ್ ಭದ್ರತೆಯಲ್ಲಿ 7 ತಿಂಗಳ ಕಾಲ ಇಡಲಾಗುವುದು. ಬಳಿಕ ಮುಂಬೈನ ಮ್ಯೂಸಿಯಂನಲ್ಲಿ ಇಡಲಾಗುವುದು. ಇದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ’ ಎಂದರು.
350 ವರ್ಷದ ಬಳಿಕ ಅಫ್ಜಲ್ ಖಾನ್ ಹತ್ಯೆಗೆ ಬಳಸಿದ ಛತ್ರಪತಿ ಶಿವಾಜಿ ವ್ಯಾಘ್ರ ನಖ ಮರಳಿ ಭಾರತಕ್ಕೆ!
ಶತಮಾನಗಳ ಹಿಂದೆ ಭಾರತದಿಂದ ಕಳ್ಳಸಾಗಣೆಯಾಗಿ ಲಂಡನ್‌ನ ಮ್ಯೂಸಿಯಂ ಸೇರಿದ್ದ ವ್ಯಾಘ್ರ ನಖವನ್ನು 3 ವರ್ಷಗಳ ಕಾಲ ರಾಜ್ಯದಲ್ಲಿ ಪ್ರದರ್ಶನ ಮಾಡುವ ಸಲುವಾಗಿ ರಾಜ್ಯ ಸರ್ಕಾರ ತರುತ್ತಿದೆ. ಈ ಸಂಬಂಧ ಅದು ಲಂಡನ್ ಮ್ಯೂಸಿಯಂ ಜೊತೆ ಒಪ್ಪಂದವೊಂದಕ್ಕೆ ಸಹಿಹಾಕಿದೆ.