ನಿರಂತರ ಜೀವ ಬೆದರಿಕೆ, ಗನ್‌ ಲೈಸೆನ್ಸ್ ಪಡೆದುಕೊಂಡ ನೂಪುರ್‌ ಶರ್ಮ!

By Santosh NaikFirst Published Jan 12, 2023, 10:52 AM IST
Highlights

ಟಿವಿ ಚರ್ಚೆಯ ವೇಳೆ ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ವಿವಾದಿತ ಮಾತುಗಳನ್ನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಗೆ ನಿರಂತರವಾಗಿ ಜೀವಬೆದರಿಕೆಗಳು ಬರುತ್ತಿದ್ದವು. ಈ ಹಿನ್ನಲೆಯಲ್ಲಿ ಅವರು ಗನ್‌ ಲೈಸೆನ್ಸ್‌ಗೆ ಮನವಿ ಮಾಡಿದ್ದು, ಅದಕ್ಕೀಗ ಒಪ್ಪಿಗೆ ಸಿಕ್ಕಿದೆ.

ನವದೆಹಲಿ (ಜ.12): ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದಾರೆ. ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್‌ ಶರ್ಮ, ಖಾಸಗಿ ಟಿವಿ ವಾಹಿನಿಯ ಚರ್ಚೆಯ ವೇಳೆ ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ನೀಡಿದ ಹೇಳಿಕೆ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಇದಾದ ಬಳಿಕ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಬಿಜೆಪಿ ಕೂಡ ಇವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಮಾಡಿತ್ತು. ನೂಪುರ್‌ ಶರ್ಮ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಸುಪ್ರೀಂ ಕೋರ್ಟ್‌ ಈ ಎಲ್ಲಾ ಪ್ರಕರಣಗಳನ್ನು ದೆಹಲಿ ಹೈಕೋರ್ಟ್‌ನಲ್ಲಿಯೇ ವಿಚಾರಣೆ ನಡೆಸುವುದಾಗಿ ಹೇಳಿದೆ. ಅದರೊಂದಿಗೆ ನಿರಂತರ ಕೊಲೆ ಬೆದರಿಕೆಗಳು ಕೂಡ ನೂಪುರ್‌ ಶರ್ಮಗೆ ಬರುತ್ತಿದ್ದವು. ನೂಪುರ್ ಶರ್ಮಾ ಅವರು ಮೇ 2022 ರಲ್ಲಿ ಪ್ರವಾದಿ ಮೊಹಮದ್‌ ಪೈಗಂಬರ್‌ ಮತ್ತು ಅವರ ಮೂರನೇ ಪತ್ನಿ ಆಯೆಷಾ ಬಗ್ಗೆ ಟಿವಿ ಚರ್ಚೆಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ಬಗ್ಗೆ ಸಾಕಷ್ಟು ವಿವಾದಗಳೂ ನಡೆದಿದ್ದವು. ನೂಪುರ್ ಹೇಳಿಕೆಗೆ ಸಂಬಂಧಿಸಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರವೂ ನಡೆದಿದೆ. 

ಹಲವು ಮುಸ್ಲಿಂ ರಾಷ್ಟ್ರಗಳು ನೂಪುರ್‌ ಶರ್ಮ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದವು. ಇದಾದ ಬಳಿಕ ಬಿಜೆಪಿ ಅವರನ್ನು ಅಮಾನತು ಮಾಡಿತ್ತು. ಆದರೆ, ವಿವಾದ ಉಲ್ಬಣಗೊಂಡ ನಂತರ ನೂಪುರ್ ಕ್ಷಮೆಯಾಚಿಸಿದ್ದಾರೆ.

ನೋಡ್ತಾ ಇರಿ, 2024ರ ಲೋಕಸಭೆ ಚುನಾವಣೆಯಲ್ಲಿ ನೂಪುರ್‌ ಶರ್ಮ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರೆ: ಓವೈಸಿ!

ನೂಪುರ್‌ ಬೆಂಬಲಿಸಿದ್ದಕ್ಕೆ ಕೊಲೆಗಳು ಕೂಡ ನಡೆದಿದ್ದವು: ಮತ್ತೊಂದೆಡೆ, ನೂಪುರ್ ಶರ್ಮಾ ವಿರುದ್ಧ ಹಲವು ರಾಜ್ಯಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಕರಣಗಳು ಸಹ ದಾಖಲಾಗಿವೆ. ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲ್ ಮತ್ತು ಪುಣೆಯಲ್ಲಿ ರಸಾಯನಶಾಸ್ತ್ರಜ್ಞ ಉಮೇಶ್ ಕೋಲ್ಹೆ ಕೂಡ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಕೊಲೆಯಾದರು. ನೂಪುರ್ ಶರ್ಮಾಗೆ ದೊಡ್ಡ ರಿಲೀಫ್ ನೀಡಿದ್ದ ಸುಪ್ರೀಂ ಕೋರ್ಟ್‌ ಆಕೆಯ ಬಂಧನಕ್ಕೆ ತಡೆ ನೀಡಿತ್ತು. ಇದರೊಂದಿಗೆ ದೇಶಾದ್ಯಂತ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನೂ ಒಂದೆಡೆ ವರ್ಗಾಯಿಸಲಾಗಿದೆ.

ಹಿಂದೂಗಳನ್ನು ಓಡಿಸಿ ಎಂದು ಅರಬ್‌ ದೇಶಗಳಿಗೆ ಅಲ್‌ಖೈದಾ ಕರೆ: ಪ್ರಧಾನಿ ಮೋದಿ, ನೂಪುರ್‌ ಗುರಿಯಾಗಿಸಿ ಲೇಖನ ಪ್ರಕಟ

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನೂಪುರ್ ಶರ್ಮಾ ಅವರಿಗೆ ಛೀಮಾರಿ ಹಾಕಿತ್ತು. ದೇಶದ ವಾತಾವರಣ ಹದಗೆಡಲು ನೂಪುರ್ ಶರ್ಮಾ ಅವರ ಹೇಳಿಕೆಯೇ ಕಾರಣ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲಾ ಕಟುವಾಗಿ ಟೀಕೆ ಮಾಡಿದ್ದರು. ನೂಪುರ್ ಒಮ್ಮೆಯೂ ಮುಂದೆ ಬಂದು ಕ್ಷಮೆ ಕೇಳಲಿಲ್ಲ ಎಂಬುದನ್ನೂ ಒತ್ತಿ ಹೇಳಲಾಯಿತು. ಈ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ದೆಹಲಿ ಪೊಲೀಸರನ್ನು ತೀವ್ರವಾಗಿ ಪ್ರಶ್ನೆ ಮಾಡಿತ್ತು. ಎಫ್‌ಐಆರ್‌ ದಾಖಲಾದ ನಂತರವೂ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಹೇಳಿಕೆಗಳು ಬರಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು.

click me!