18 ಗಂಟೆ ತರಗತಿಯೊಳಗೆ 1ನೇ ತರಗತಿ ಬಾಲಕಿ ಲಾಕ್, ಕಂಗಾಲದ ಪೋಷಕರಿಗೆ ಮರುದಿನ ಸರ್ಪ್ರೈಸ್!

By Suvarna News  |  First Published Sep 23, 2022, 6:26 PM IST

ಒಂದನೇ ತರಗತಿ ಬಾಲಕಿ, ಅಂದರೆ  ಸರಿಸುಮಾರು 6 ವರ್ಷ. ಬರೋಬ್ಬರಿ 18 ಗಂಟೆ ಅಂದರೆ ಸಂಜೆಯಿಂದ ಒಂದು ಇಡೀ ರಾತ್ರಿಯನ್ನು ಏಕಾಂಗಿಯಾಗಿ ಶಾಲೆಯ ಕೊಠಡಿಯೊಳಗೆ ಕಳೆಯಬೇಕಾದ ದುಸ್ಥಿತಿ ಬಂದಿದೆ. ಇದಕ್ಕೆ ಕಾರಣ ಸಿಬ್ಬಂಧಿಗಳ ನಿರ್ಲಕ್ಷ್ಯ. 
 


ಉತ್ತರ ಪ್ರದೇಶ(ಸೆ.24): ಶಾಲೆ ತೆರಳಿದ 1ನೇ ತರಗತಿ ಬಾಲಕಿ ಕತ್ತಲಾದರೂ ಮರಳಿ ಬಂದಿಲ್ಲ. ಪೋಷಕರು ಕಂಗಾಲಾಗಿದ್ದಾರೆ, ಅಜ್ಜಿ ಓಡೋಡಿ ಶಾಲೆಗೆ ಬಂದಿದ್ದಾರೆ. ಶಾಲೆಯ ಸಿಬ್ಬಂದಿಗಳ ವಿಚಾರಿಸಿದ್ದಾರೆ. ಫೋನ್ ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ಯಾವುದೇ ಸುಳಿವಿಲ್ಲ. ನೆರೆ ಮನೆಯವರು ಸೇರಿ ಇಡೀ ಗ್ರಾಮವನ್ನು ಹುಡುಕಿದ್ದಾರೆ. ಸಿಗಲಿಲ್ಲ. ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಚೆಕ್‌ಪೋಸ್ಟ್‌ಗಳಿಗೆ ಅಲರ್ಟ್ ಸೂಚನೆ ನೀಡಿದ್ದಾರೆ. ಆದರೆ ಮಧ್ಯ ರಾತ್ರಿಯಾದರೂ ಮಗಳ ಸುಳಿವಿಲ್ಲ. ಪೋಷಕರು ಕಂಗಾಲಾಗಿದ್ದಾರೆ. ನಿದ್ದೆ ಮಾಡದೆ ಕಾಡು, ಮೇಡು ಎಲ್ಲಾ ಹುಡುಕಿದ್ದಾರೆ. ಒಂದು ದಿನ ಉರುಳಿದೆ. ಆದರೂ ಮಗಳ ಪತ್ತೆ ಇಲ್ಲ. ಮರುದಿನ ಎಂದಿನಂತೆ ಶಾಲೆ ತೆರೆದೆ ಸಿಬ್ಬಂದಿಗಳಿಗೆ ತಮ್ಮ ತಪ್ಪಿನ ಅರಿವಾಗಿದೆ. ಕಾರಣ ಬಾಲಕಿ ತರಗತಿಯಲ್ಲಿರುವುದನ್ನು ನೋಡದೆ ನಿರ್ಲಕ್ಷ್ಯ ವಹಿಸಿ ತರಗತಿಯ ಬಾಗಿಲು ಹಾಕಿದ್ದಾರೆ. ಸರಿಸುಮಾರು 18 ಗಂಟೆ 1ನೇ ತರಗತಿ ಬಾಲಕಿ ಕೊಠಡಿಯೊಳಗೆ ಏಕಾಂಗಿಯಾಗಿ ಕಳೆದಿದ್ದಾಳೆ. ಈ ವಿಚಾರ ತಿಳಿದ ಪೋಷಕರು ತಕ್ಷಣವೇ ಶಾಲೆಗೆ ಆಗಮಿಸಿ ಮಗಳನ್ನು ಪಡೆದಿದ್ದಾರೆ. ಬಾಲಕಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಈ ಆಘಾತಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶದ ಸಂಭಾಲ್ ಜಿಲ್ಲಿಯಲ್ಲಿ.

ಮಂಗಳವಾರ ಸಂಜೆ ತರಗತಿ ಅಂತ್ಯಗೊಂಡು ವಿದ್ಯಾರ್ಥಿಗಳು(Students) ತೆರಳಿದ್ದಾರೆ. ಆದರೆ ಬಾಲಕಿ(Girl Child) ತರಗತಿಯಲ್ಲಿ ಪುಸ್ತಕದ ಹಿಡಿದು ಕೂತಿದ್ದಾಳೆ. ಇತ್ತ ಸಿಬ್ಬಂದಿಗಳು ಆಗಮಿಸಿ ಶಾಲೆಯ ಎಲ್ಲಾ ಕೊಠಡಿಗಳ(School Classroom) ಬಾಗಿಲು ಮುಚ್ಚಿ ಬೀಗ ಹಾಕಿದ್ದಾರೆ. ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ತರಗತಿಯೊಳಗಿದ್ದ ಬಾಲಕಿ ಕೊಣೆಯೊಳಗೆ ಬಂಧಿಯಾಗಿದ್ದಾಳೆ. 1ನೇ ತರಗತಿ(1st standerd) ಮಕ್ಕಳ ಕೊಠಡಿಯಲ್ಲಿ ತಲೆ ಎತ್ತಿ ನೋಡುವ ಸಾಹಸಕ್ಕೂ ಸಿಬ್ಬಂದಿಗಳು ಕೈಹಾಕಿಲ್ಲ. ವಿದ್ಯಾರ್ಥಿಗಳ ಕೊಠಡಿಯಲ್ಲಿ ಯಾರೂದರೂ ಇದ್ದಾರೆ ಎಂದು ನೋಡುವ ಗೋಜಿಗೂ ಹೋಗಿಲ್ಲ. ಇದರ ಪರಿಣಾಮ ಬಾಲಕಿಯನ್ನು ಗಮನಿಸಿದೇ ಬಾಗಿಲು ಹಾಕಿದ್ದಾರೆ.

Tap to resize

Latest Videos

Admission Denied ಆಧಾರ್ ಕಾರ್ಡ್‌ನಲ್ಲಿ ವಿಚಿತ್ರ ಹೆಸರು, ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ!

ರಾತ್ರಿಯಾಗುತ್ತಿದ್ದಂತೆ ಬಾಲಕಿಗೆ ಭಯವಾಗಿದೆ. ಬಾಗಿಲು ತೆರೆಯಲು ಕೂಗಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅತ್ತು ಅತ್ತು ಅಸ್ವಸ್ಥಗೊಂಡ ಬಾಲಕಿಗೆ ನಿದ್ದೆ ಬಂದಿದೆ. ತರಗತಿಯ ಡೆಸ್ಕ್‌ನಲ್ಲೇ ಮಲಗಿದ್ದಾಳೆ. ಮರುದಿನ ಬೆಳಗ್ಗೆ ಶಾಲಾ ಸಿಬ್ಬಂದಿಗಳು ಕೊಠಡಿಗಳ ಬಾಗಿಲು ತೆರೆಯುವ ಮೊದಲು ಎಚ್ಚರಗೊಂಡ ಬಾಲಕಿ ಹೊರಬರಲು ಯತ್ನಿಸಿದ್ದಾಳೆ. ಆದರೂ ಸಾಧ್ಯವಾಗಿಲ್ಲ. ಕೊನೆಗೆ ಸಿಬ್ಬಂದಿಗಳು ಬಾಗಿಲು ತೆಗೆದಾಗ ಬಾಲಕಿ 18 ಗಂಟೆ ಶಾಲೆಯಲ್ಲಿ ಬಂಧಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಶಾಲಾ ಸಿಬ್ಬಂದಿಗಳ ವಿರುದ್ದ ಇದೀಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಿರ್ಲಕ್ಷ್ಯ ವಹಿಸುವ ಶಾಲೆಗೆ ನಮ್ಮ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ತರಗತಿಯಲ್ಲಿ ಬಾಲಿಕಿಯನ್ನು ಕೂಡಿ ಹಾಕಿದ, ನಿರ್ಲಕ್ಷ್ಯ ತೋರಿದ ಸಿಬ್ಬಂಧಿಗಳು ಹಾಗೂ ಶಾಲಾ ಶಿಕ್ಷಕರ ವಿರುದ್ದ ಪ್ರಕರಣ ದಾಖಲಾಗಿದೆ. ಇದು ಗಂಭೀರ ವಿಚಾರ. ಸುರಕ್ಷತೆಗೆ ಮೊದಲ ಆದ್ಯತೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣಾಧಿಕಾರಿ ಹೇಳಿದ್ದಾರೆ.

Religious Rights : ಮಗಳ ಕೂದಲು ಕತ್ತರಿಸಂತೆ ತಾಯಿಗೆ ಆದೇಶ ನೀಡಿದ ಹೈಕೋರ್ಟ್
 

click me!