
ಇತ್ತೀಚೆಗೆ ಯುವ ಸಮುದಾಯ ಫೇಮಸ್ ಆಗುವುದಕ್ಕೋಸ್ಕರ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ವೈರಲ್ ಆಗುವುದಕ್ಕೋಸ್ಕರ ಅನೇಕರು ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವ ಮೂಲಕ ತಾವು ಅಪಾಯಕ್ಕೊಳಗಾಗುವುದಲ್ಲದೇ ಇತರರನ್ನು ತೊಂದರೆಗೀಡು ಮಾಡುತ್ತಿದ್ದಾರೆ. ಹಾಗೆಯೇ ಇಲ್ಲೊಬ್ಬ ಸ್ಪೈಡರ್ ಮ್ಯಾನ್ ವೇಷ ಧರಿಸಿದ ಬೈಕರ್ ಒಬ್ಬ ನಡುರಸ್ತೆಯಲ್ಲಿ ಬೈಕ್‌ನಲ್ಲಿ ಸ್ಟಂಟ್ ಮಾಡಿದ್ದು, ಈ ವೀಡಿಯೋ ವೈರಲ್ ಆಗ್ತಿದ್ದಂತೆ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಆತನಿಗೆ ಭಾರಿ ದಂಡ ವಿಧಿಸಿದ್ದಾರೆ. ಒಡಿಶಾದ ರೂರ್ಕೆಲಾದಲ್ಲಿ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಸ್ಟಂಟ್ ಮಾಡಿದ ಸ್ಪೈಡರ್‌ಮ್ಯಾನ್‌ಗಳನ್ನು ಠಾಣೆಗೆ ಕರೆಸಿದ ಪೊಲೀಸರು ಬರೋಬ್ಬರಿ 15 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ.
ಹೆಲ್ಮೆಟ್ ಇಲ್ಲದೆ ಜನನಿಬಿಡ ನಗರದ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸೇರಿದಂತೆ ಹಲವಾರು ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಪೊಲೀಸರು ಅವರಿಗೆ 15,000 ರೂ. ದಂಡ ವಿಧಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಈ ಸ್ಪೈಡರ್ ಮ್ಯಾನ್ ವೇಷ ಧರಿಸಿದ ಬೈಕ್ ಸವಾರ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದಿದ್ದಲ್ಲದೇ, ಅದರ ಸೈಲೆನ್ಸರ್ ಅನ್ನು ಮಾರ್ಪಡಿಸಿ ಕಿವಿ ಕುರುಡಾಗುವಂತಹ ಅತ್ಯಂತ ಕರ್ಕಶವಾಗಿ ಸದ್ದು ಬರುವಂತೆ ಮಾಡಿದ. ಜೊತೆಗೆ ಆತ ಬೈಕನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಈ ಎಲ್ಲಾ ಸಂಚಾರಿ ಉಲ್ಲಂಘನೆಗಳನ್ನು ಗಮನಿಸಿದ ಪೊಲೀಸರು ಆತನಿಗೆ 15 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ.
ದೆಹಲಿಯಲ್ಲಿ ಸ್ಪೈಡರ್‌ಮ್ಯಾನ್ ಜೋಡಿ ಅರೆಸ್ಟ್:
ಹಾಗೆಯೇ ರಾಷ್ಟ್ರರಾಜಧಾನಿಯಲ್ಲಿ ಬೈಕ್ ಚಲಾಯಿಸುತ್ತಿದ್ದ ಸ್ಪೈಡರ್‌ಮ್ಯಾನ್ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಲ್ಮೆಟ್ ಹಾಕದ ಈ ಸ್ಪೈಡರ್‌ಮ್ಯಾನ್ ಜೋಡಿ ನಂಬರ್ ಪ್ಲೇಟ್ ಹಾಗೂ ಕನ್ನಡಿ ಇಲ್ಲದ ಬೈಕನ್ನು ನಡುರಸ್ತೆಯಲ್ಲಿ ಓಡಿಸುತ್ತಿದ್ದವರು ಇವರ ಬಳಿ ಚಾಲನ ಪರವಾನಗಿಯೂ ಇರಲಿಲ್ಲ. ಈ ಜೋಡಿಯ ವೀಡಿಯೋ ವೈರಲ್ ಆದ ನಂತರ ದೆಹಲಿಯ ನಜಾಫ್‌ಗಢದಲ್ಲಿ ಮಹಿಳೆ ಸೇರಿದಂತೆ ಇಬ್ಬರನ್ನು ಮೋಟಾರ್ ವಾಹನ ಕಾಯ್ದೆಯಡಿ ಬಂಧಿಸಲಾಗಿದೆ.
ಚಲಿಸುವ ಬೈಕ್‌ನಲ್ಲಿ ರೋಮ್ಯಾನ್ಸ್:
ಸಂಚಾರ ನಿಯಮ ಉಲ್ಲಂಘಿಸುವುದರ ಜೊತೆಗೆ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳಿದ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ. ಈ ಘಟನೆಯ ದೃಶ್ಯಾವಳಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಯುವಕ ಯುವತಿ ಚಲಿಸುವ ಬೈಕ್‌ನಲ್ಲೇ ರೋಮ್ಯಾನ್ಸ್ ಮಾಡಿದ್ದಾರೆ. ಉತ್ತರ ಪ್ರದೇಶ ಗೋರಕ್‌ಪುರದಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಹಿಮ್ಮುಖ ಮಾಡಿ ಯುವಕ ಕೂರಿಸಿದ್ದು, ಬಳಿಕ ಬೈಕ್ ಚಲಾಯಿಸುತ್ತಲೇ ಈ ಜೋಡಿ ರೋಮ್ಯಾನ್ಸ್ ಮಾಡಿದ್ದಾರೆ. ಇವರ ಕೃತ್ಯವನ್ನು ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ವೈರಲ್ ಮಾಡಿದ್ದಾರೆ.
ಗೋರಕ್‌ಪುರದ ರಾಮ್‌ಗ್ರಹ್ತಲ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರುವ ನೌಕಾ ವಿಹಾರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ವೈರಲ್ ಆಗ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಬೈಕನ್ನು ಪತ್ತೆ ಮಾಡಿದ್ದು ಚಾಲಕನಿಗೆ 2,500 ರೂಪಾಯಿ ದಂಡ ವಿಧಿಸಿದ್ದಾರೆ.
ಚಲಿಸುವ ಸ್ಕಾರ್ಪಿಯೋದ ಬಾನೆಟ್ ಮೇಲೆ ಕುಳಿತು ಯುವಕನ ಸ್ಟಂಟ್
ಹಾಗೆಯೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಮತ್ತೊಂದು ಪ್ರಕರಣ ಉತ್ತರ ಪ್ರದೇಶದ ಹಾಪುರದಿಂದ ವರದಿಯಾಗಿದೆ. ಯುವಕನೊಬ್ಬ ಸೋಶಿಯಲ್ ಮೀಡಿಯಾ ವೀಡಿಯೋಗಾಗಿ ಬಾಬುಗಢ ಬಳಿಯ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಸ್ಕಾರ್ಪಿಯೋದ ಕಾರು ಚಾಲನೆಯಲ್ಲಿರುವಾಗಲೇ ಚಾಲಕನ ಸೀಟಿನಲ್ಲಿ ಯಾರು ಇಲ್ಲದಿರುವಾಗಲೇ ಆತ ಬಾನೆಟ್ ಮೇಲೇರಿ ಸರ್ಕಸ್ ಮಾಡಿದ್ದಾನೆ. ಈ ಅಪಾಯಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಸಂಚಾರಿ ಪೊಲೀಸರು 28,500 ರೂಪಾಯಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಗಣೇಶನ ತೋಳಲ್ಲಿ ಸುಖ ನಿದ್ದೆಗೆ ಜಾರಿದ ಬೆಕ್ಕು: ಮಾಲೀಕನ ಮುದ್ದಾಡಲು ಮಗುವಿನೊಂದಿಗೆ ಶ್ವಾನದ ಸ್ಪರ್ಧೆ
ಇದನ್ನೂ ಓದಿ: ಸಿಟಿಸ್ಕ್ಯಾನ್ ವೇಳೆ ಬಳಸುವ ಕಂಟ್ರಾಸ್ಟ್ ಏಜೆಂಟ್ ರಿಯಾಕ್ಷನ್‌ನಿಂದ 21ರ ಯುವತಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ