ಹಳೇ ಸಂಸತ್ತಿನಲ್ಲಿ ಮೋದಿ ಕೊನೆಯ ಭಾಷಣ, ಪ್ರಮುಖರ ನೆನೆದು ವಿಪಕ್ಷಗಳಿಗೆ ಪ್ರಧಾನಿ ಟಾಂಗ್!

By Suvarna News  |  First Published Sep 18, 2023, 7:45 PM IST

ವಿಶೇಷ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಎಂಪಿಯಾಗಿ ಲೋಕಸಭೆ ಪ್ರವೇಶದಿಂದ ಹಿಡಿದು ಬದಲಾದ ಭಾರತ, ಸ್ವಾತಂತ್ರ ಭಾರತದ ಅಧಿವೇಶನ, ಪೂರ್ವ ಪ್ರಧಾನಿಗಳ ಕೊಡುಗೆ, ಹೊಸ ರಾಜ್ಯಗಳ ರಚನೆ, ಮಸೂದೆಗಳ ಮಂಡನೆ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿದ್ದಾರೆ. ಮೋದಿ ಭಾಷಣದ ಪ್ರಮುಖ 10 ಅಂಶಗಳ ವಿವರ ಇಲ್ಲಿದೆ.


ನವದೆಹಲಿ(ಸೆ.18) ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಇಂದು ಹಳೆ ಸಂಸತ್ ಭವನದಲ್ಲಿ ನಡೆದ ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಸ್ತೃತ ಭಾರತದ ಮೇಲೆ ಬೆಳಕು ಚೆಲಿದ್ದಾರೆ. ಇದೇ ವೇಳೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಅಭಿವೃದ್ಧಿ ಹಾಗೂ ನವ ಭಾರತ ನಿರ್ಮಾಣದಲ್ಲಿ ಸಂಸತ್ತಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯ, ಪೂರ್ವ ಪ್ರಧಾನಿಗಳ ಕೊಡುಗೆ, ಪ್ರಜಾಪ್ರಭುತ್ವದ ಸಾಮರ್ಥ್ಯ ಹಾಗೂ ವಿಶೇಷತೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಸಿಕ್ಕ ಅವಕಾಶದಲ್ಲಿ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಲ್ಲಾ ನಾಯಕರ ಕೊಡುಗೆಯನ್ನು ಸ್ಮರಿಸಿದ್ದಾರೆ. ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರಿಂದ ರಾಮನಾಥ್ ಕೋವಿಂದ್, ದ್ರೌಪದಿ ಮುರ್ಮು ವರೆಗೆ, ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂವಿನಿಂದ, ಲಾಲ್ ಬಹದ್ದೂರ್ ಶಾಸ್ತ್ರಿ, ಚಂದ್ರಶೇಖರ್, ಅಟಲ್, ಮನ್‌ಮೋಹನ್ ಸಿಂಗ್ ಕೊಡುಗೆಯನ್ನು ಸ್ಮರಿಸಿದ್ದಾರೆ. ಇದೇ ವೇಳೆ ಪ್ರಮುಖ ನಾಯಕರಾದ ಸರ್ದಾರ್ ವಲ್ಲಭಾಯಿ ಪಟೇಲ್, ಜೆಪಿ, ಲೋಹಿಯಾ, ಅಡ್ವಾಣಿಯಂತ ಹ ದಿಗ್ಗಜ ನಾಯಕರನ್ನು ಸ್ಮರಿಸಿದ್ದಾರೆ.

Tap to resize

Latest Videos

'ಮೋದಿ ಭಾರತದ ಡೆಂಗ್ ಕ್ಸಿಯಾಪಿಂಗ್' ಭಾರತದ ಪ್ರಧಾನಿಯನ್ನು ಚೀನಾದ ಪ್ರಖ್ಯಾತ ನಾಯಕನಿಗೆ ಹೋಲಿಸಿದ ರೇ ಡಾಲಿಯೊ !

ಬಾಬಾ ಸಾಹೇಬ್ ಅಂಬೇಡ್ಕರ್, ಶ್ಯಾಮ ಪ್ರಸಾದ್ ಮುಖರ್ಜಿ ಸೇರಿದಂತೆ ಭವ್ಯ ಭಾರತ ಕಟ್ಟಿಕೊಟ್ಟ ನಾಯಕರನ್ನು ಮೋದಿ ನೆನೆದಿದ್ದಾರೆ.   ಇದೇ ವೇಳೆ ನವ ಭಾರತದಲ್ಲಿ ಭಾರತದ ಅಭಿವೃದ್ಧಿ ವೇಗ, ಬದಲಾಗುತ್ತಿರುವ ಭಾರತದ ಕುರಿತು ಮಾತನಾಡಿದ್ದಾರೆ.  ವಿಶ್ವದ 10 ವರ್ಷದ ಬೆಳವಣಿಗೆ ದರಕ್ಕೆ ಹೋಲಿಸಿದರೆ ಭಾರತ ಅತ್ಯಧಿಕ ಸಂಭಾವ್ಯ ಬೆಳವಣಿಗೆ ದರ ಹೊಂದಿದೆ. ಯುಎಸ್ ಮತ್ತು ಚೀನಾ ಮತ್ತು ಅದರ ಮಿತ್ರರಾಷ್ಟ್ರಗಳಾದ ರಷ್ಯಾ ಮತ್ತು ಮುಂತಾದವುಗಳ ನಡುವಿನ ಸಂಘರ್ಷವನ್ನು ಹೊಂದಿರುವುದರಿಂದ, ಭಾರತದಂತಹ ಮಧ್ಯದಲ್ಲಿರುವ ದೇಶಗಳು ಅದರ ಫಲಾನುಭವಿಗಳಾಗಲಿವೆ.  

ಹಲವು ರಾಜ್ಯಗಳ ರಚನೆಯಾದಾಗ ಸಂಭ್ರಮವಿತ್ತು.  ಜಾರ್ಖಂಡ್ ರಚನೆಯಾದಾಗ ಜಾರ್ಖಂಡ್ ಹಾಗೂ ಬಿಹಾರ್ ಸಂಭ್ರಮಿಸಿತ್ತು.  ಉತ್ತರಖಂಡ ರಚನೆಯಾದಾಗ ಉತ್ತರಖಂಡ ಹಾಗೂ ಉತ್ತರ ಪ್ರದೇಶ ಸಂಭ್ರಮ ಆಚರಿಸಿತ್ತು. ಆದರೆ ತೆಲಂಗಾಣ ರಚನೆಯಾದಾಗ ಅತ್ತ ತೆಲಂಗಾಣದಲ್ಲೂ ಸಂಭ್ರಮ ಇರಲಿಲ್ಲ. ಇತ್ತ ಆಂಧ್ರ ಪ್ರದೇಶದಲ್ಲೂ ಸಂಭ್ರಮ ಇರಲಿಲ್ಲ ಎಂದು ಮೋದಿ ಯುಪಿಎ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.

ಜಿ20 ಯಶಸ್ಸು ಭಾರತದದ್ದು, ವ್ಯಕ್ತಿ ಅಥವಾ ಪಕ್ಷಗಳದ್ದಲ್ಲ; ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಟಾಪ್‌ 10 ಮಾತುಗಳು!

ರೈಲ್ವೇ ಪ್ಲಾಟ್‌ಫಾರ್ಮ್‌ನಿಂದ ನಾನು ಲೋಕಸಭಾ ಸದಸ್ಯನಾಗಿ ಪ್ರವೇಶ ಪಡೆದ ನಾನು ಪ್ರಜಾಪ್ರಭುತ್ವದ ಹಿರಿಮೆಯನ್ನು ಹೇಳುತ್ತದೆ. ನಾನು ಕಲ್ಪನೆ ಮಾಡಿರಲಿಲ್ಲ. ದೇಶ ನನಗೆ ಇಷ್ಟು ಪ್ರೀತಿ, ಸನ್ಮಾನ ಮಾಡುತ್ತದೆ ಎಂದು ನಾನು ಊಹಿಸಿರಲಿಲ್ಲ. 

click me!