ಅಚ್ಚರಿ ಕಾಮಧೇನು, ಕರುವಿಗೆ ಜನ್ಮವೇ ನೀಡಿಲ್ಲ ಆದರೂ ಪ್ರತಿ ದಿನ ನೀಡುತ್ತೆ 4 ಲೀಟರ್ ಹಾಲು!

By Chethan Kumar  |  First Published Oct 28, 2024, 7:44 PM IST

ಇದೊಂದು ಅಚ್ಚರಿ ಕಾಮಧೇನು. ವಿಶೇಷ ಅಂದರೆ ಇದುವರೆಗೂ ಈ ಹಸು ಕರುವಿಗೆ ಜನ್ಮ ನೀಡಿಲ್ಲ. ಆದರೆ ಪ್ರತಿ ದಿನ 4 ಲೀಟರ್ ಹಾಲು ಕೊಡುತ್ತಿದೆ. 


ಲಖನೌ(ಅ.28) ಭಾರತದಲ್ಲಿ ಕಾಮಧೇನು ದೇವರ ಸ್ಥಾನ. ಪ್ರತಿ ಶುಭ ಸಂದರ್ಭದಲ್ಲಿ ಕಾಮಧೇನುವಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜ್ಯ ಭಾವನೆಯಿಂದ ಪೂಜಿಸಲಾಗುತ್ತದೆ. ಭಾರತದ ಹಲವು ಥಳಿಗಳಿಗೆ ಭಾರಿ ಬೇಡಿಕೆ ಇದೆ. ಇಷ್ಟೇ ಅಲ್ಲ ಈ ತಳಿಗಳ ಹಾಲಿಗೆ ದುಬಾರಿ ಬೆಲೆ. ಆದರೆ ಇಲ್ಲೊಂದು ಕಾಮಧೇನು ಇಡೀ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಈ ಹಸು ಇದುವರೆಗೂ ಕರುವಿಗೆ ಜನ್ಮ ನೀಡಿಲ್ಲ. ಆದರೆ ಪ್ರತಿ ದಿನ ನಾಲ್ಕು ಲೀಟರ್ ಹಾಲು ನೀಡುತ್ತಿದೆ. ಆ ಅಚ್ಚರಿ ಕಾಮಧೇನುವಿರುವುದು ಉತ್ತರ ಪ್ರದೇಶದ ಗಂಗಾ ತಿವಾರಿಪುರ ಗ್ರಾಮದಲ್ಲಿ. 

ನಿವೃತ್ತ ಪ್ರಾಧ್ಯಾಪಕ ಡಾ. ಒಂಕಾರನಾಥ್ ತ್ರಿಪಾಠಿ ವಿಶ್ರಾಂತಿ ಜೀವನದಲ್ಲಿ ಹಲವು ಹಸುಗಳನ್ನು ಸಾಕಿದ್ದಾರೆ. ಹೈನುಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಸಹಿವಾಲ್ ಅನ್ನೋ ತಳಿ ಇದೀಗ ಗ್ರಾಮದ ಅಚ್ಚರಿಗೆ ಕಾರಣವಾಗಿದೆ. ಇದು ಎರಡೂವರೆ ವರ್ಷದ ಈ ಹಸು ಕಳೆದ 6 ತಿಂಗಳಿನಿಂದ ಹಾಲು ನೀಡುತ್ತಿದೆ. ಆದರೆ ಇದುವರೆಗೆ ಈ ಹಸು ಕರುವಿಗೆ ಜನ್ಮ ನೀಡಿಲ್ಲ. ಆದರೆ ಹಾಲು ನೀಡುತ್ತಲೇ ಇದೆ.

Tap to resize

Latest Videos

ದೇಶದಲ್ಲಿ ಮೊದಲು, ಗೋವಿಗೆ ರಾಜ್ಯಮಾತೆ ಸ್ಥಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ!

6 ತಿಂಗಳ ಹಿಂದೆ ಸಹಿವಾಲ್ ತಳಿ ಹಸು ಹಾಲು ನೀಡಲು ಆರಂಭಿಸಿದೆ. ಆರಂಭದಲ್ಲಿ 250 ಎಂಎಲ್ ಹಾಲು ನೀಡಲು ಆರಂಭಿಸಿದೆ. ದಿನ ಹೋದಂತೆ ಈ ಹಾಲಿನ ಪ್ರಮಾಣ 4 ಲೀಟರ್‌ಗೆ ಏರಿಕೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ಪ್ರತಿ ದಿನ 4 ಲೀಟರ್ ಹಾಲು ನೀಡುತ್ತಿದೆ. ಎಲ್ಲಾ ಹಸುಗಳಂತೆ ಈ ಸಹಿವಾಲ್ ಥಳಿಯ ಹಸುವನ್ನು ಆರೈಕೆ ಮಾಡಲಾಗುತ್ತದೆ. ಇತರ ಹಸುಗಳಿಗೆ ನೀಡುವ ಆಹಾರ, ಹುಲ್ಲು, ನೀರು ನೀಡಲಾಗುತ್ತಿದೆ ಎಂದು ಒಂಕಾನನಾಥ್ ತ್ರಿಪಾಠಿ ಹೇಳಿದ್ದಾರೆ.

ಈ ಹಸುವಿನ ಹಾಲನ್ನು ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ಇತರ ಹಸುಗಳ ಹಾಲಿಗಿಂತ ಫ್ಯಾಟ್ ಅಂಶಗಳು ಹೆಚ್ಚಾಗಿದೆ ಎಂದು ವೈದ್ಯರು ಹೇಳಿದ್ದಾರೆ.ಸದ್ಯ ಹಾಲು ನೀಡುತ್ತಿರುವ ಹಸು ಕರುವಾಗಿದ್ದರೆ ಇದರ ತಾಯಿ ಮೃತಪಟ್ಟಿತ್ತು. ಹೀಗಾಗಿ ಹೆಚ್ಚಿನ ಆರೈಕೆಯೊಂದಿಗೆ ನೋಡಿಕೊಳ್ಳಲಾಗಿದೆ ಎಂದ ಓಂಕಾರನಾಥ್ ತ್ರೀಪಾಠಿ ಹೇಳಿದ್ದಾರೆ.

ಕರುವಿಗೆ ಜನ್ಮ ನೀಡಿದೆ ಹಾಲು ನೀಡುತ್ತಿರುವ ಈ ಹಸು ಇದೀಗ ಗ್ರಾಮದ ತುಂಬಾ ಭಾರಿ ಸುದ್ದಿಯಾಗಿದೆ. ಹೀಗಾಗಿ ಪ್ರತಿ ದಿನ ಗ್ರಾಮಸ್ಥರು ಓಂಕಾರನಾಥ್ ಮನೆಗೆ ಆಗಮಿಸುತ್ತಿದ್ದಾರೆ. ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಹಲವರು ಇದು ಸಾಕ್ಷಾತ್ ಕಾಮಧೇನು ಎಂದು ಹೇಳುತ್ತಿದ್ದರೆ. ಇಷ್ಟೇ ಅಲ್ಲ ಭೇಟಿ ನೀಡುವ ಗ್ರಾಮಸ್ಥರು, ಹಣ್ಣುಗಳನ್ನು ಹಸುವಿಗೆ ನೀಡುತ್ತಿದ್ದಾರೆ.

ಕರುವಿಗೆ ಜನ್ಮ ನೀಡದೆ ಹಾಲು ನೀಡುವುದು ಹಸುವಿನಲ್ಲಿನ ಕೆಲ ಹಾರ್ಮೋನ್ ಸಮಸ್ಯೆಗಳಿಂದ ಆಗಲಿದೆ ಎಂದು ಪಶು ವೈದ್ಯರು ಹೇಳಿದ್ದಾರೆ. 

ಬೆಳಗ್ಗೆ ತಿಂಡಿಗೆ ಓಟ್ಸ್ ಜೊತೆ ಹಾಲು ಕುಡಿದ್ರೆ ಆರೋಗ್ಯಕ್ಕೆ ಓಕೇನಾ?
 

click me!