ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಜೊತೆ ಮತ್ತೊಂದು ಕೊಡುಗೆ ನೀಡಿದ ಕೇಂದ್ರ ಸರ್ಕಾರ!

Published : Oct 14, 2022, 09:07 PM ISTUpdated : Oct 14, 2022, 09:20 PM IST
ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಜೊತೆ ಮತ್ತೊಂದು ಕೊಡುಗೆ ನೀಡಿದ ಕೇಂದ್ರ ಸರ್ಕಾರ!

ಸಾರಾಂಶ

ರೈತರಿಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆ ಘೋಷಿಸಿದೆ. ಇದರಲ್ಲಿ ಪ್ರಮುಖವಾಗಿ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಹಲವು ಯೋಜನೆಗಳು ರೈತರ ಬದುಕು ಹಸನಾಗಿಸಿದೆ. ಇದೀಗ ರೈತರಿಗೆ ಮತ್ತೊಂದು ಕೊಡುಗೆಯನ್ನು ಕೇಂದ್ರ ಘೋಷಿಸಿದೆ.  

ನವದೆಹಲಿ(ಅ.14): ಕೇಂದ್ರ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಮೂಲಕ ವಾರ್ಷಿಕ 6,000 ರೂಪಾಯಿ ನೀಡುತ್ತಿದೆ. ಮಳೆ ಚಂಡಮಾರುತ ಸೇರಿದಂತೆ ಪಾಕೃತಿ ವಿಕೋಪದ ಹಾನಿಗೆ ಪರಿಹಾರ ನೀಡಲು ಫಸಲ್ ಭೀಮಾ ಯೋಜನೆ ನೀಡಿದೆ. ಇದರೊಂದಿಗೆ ಹತ್ತು ಹಲವು ಯೋಜನೆಗಳು ರೈತರ ಬೆಳೆ ಹಾಗೂ ಬದುಕನ್ನು ಹಸನು ಮಾಡಿದೆ. ಇದೀಗ ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ಕೂಡುಗೆ ನೀಡಿದೆ. ಈಗಾಗಲೇ ರೈತರಿಗಾಗಿ ಜಾರಿಗೆ ತಂದಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ ಸುಲಭವಾಗಿ ರೈತರಿಗೆ ಸಾಲ ನೀಡುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗೆ ಸೂಚಿಸಿದೆ. ರೈತರು ಯಾವುದೇ ಅಡೆ ತಡೆ ಇಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮ್ ಹೇಳಿದ್ದಾರೆ. ಇದಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಮುಖ್ಯಸ್ಥರು, ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದ ನಿರ್ಮಾಲಾ ಸೀತಾರಾಮನ್ ಈ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಬ್ಯಾಂಕ್ ತಂತ್ರಜ್ಞಾನ ನವೀಕರಿಸಲೂ ಸೂಚಿಸಿದ್ದಾರೆ.

ರೈತರ ಜೊತೆಗೆ ಮೀನುಗಾರಿ, ಹೈನುಗಾರಿಕೆ ಮಾಡುವವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಂಸ್ಥಿಕ ಸಾಲ ಸೌಲಭ್ಯ ನೀಡಲು ಸಭೆಯಲ್ಲಿ ರೂಪುರೇಶೆ ರೂಪಿಸಲಾಗಿದೆ. ಕೃಷಿ ಸಾಲದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಅತ್ಯಂತ ಸರಳ ಹಾಗೂ ಸುಲಭವಾಗಿ ಸಾಲ ಸೌಲಭ್ಯವನ್ನು ಒದಿಗಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ್ರೆ 10 ವರ್ಷಗಳಲ್ಲಿ ಡಬಲ್ ಆಗುತ್ತೆ ನಿಮ್ಮ ಹಣ!

ರೈತರಿಗಾಗಿ ಕೇಂದ್ರ ಸರ್ಕಾರ ಅತ್ಯವಶ್ಯಕ ಹಾಗೂ ಅತೀ ಮುಖ್ಯ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಲಾಭವನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆಗಳಾದ ಪಿಎಂಎಸ್‌ಬಿವೈ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 18ರಿಂದ 70 ವರ್ಷದೊಳಗಿನ ಬ್ಯಾಂಕ್‌ ಖಾತೆ ಹೊಂದಿದ ಹಾಗೂ ವಾರ್ಷಿಕ ಮೊತ್ತ 12ನ್ನು ಪಾವತಿಸಿ ವಿಮಾ ಸೌಲಭ್ಯವನ್ನು ಪಡೆಯಬಹುದು.  ಪ್ರದಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 1ರಿಂದ 50 ವರ್ಷದೊಳಗಿನ ಬ್ಯಾಂಕ ಖಾತೆ ಹೊಂದಿದ ಹಾಗೂ ವಾರ್ಷಿಕ ಮೊತ್ತ 330 ಪಾವತಿಸಿ ವಿಮೆ ಮಾಡಿಸಿದ ಪಾಲಸಿದಾರರು ಯಾವುದೇ ಕಾರಣದಿಂದ ಮರಣ ಹೊಂದಿದರೂ .2 ಲಕ್ಷ ಪರಿಹಾರ ಪಡೆಯಬಹುದಾಗಿದೆ.  

ಅಟಲ್‌ ಪೆನ್ಷನ್‌ ಯೋಜನೆಯಡಿ 18ರಿಂದ 40 ವರ್ಷದೊಳಗಿನ ಬ್ಯಾಂಕ್‌ ಖಾತೆ ಹೊಂದಿದ ಹಾಗೂ ವಯಸ್ಸಿನ ಅನುಸಾರ ವಾರ್ಷಿಕ ಮೊತ್ತ ಪಾವತಿಸಿ ನೋಂದಣಿ ಮಾಡಿಸಿದಲ್ಲಿ 60ನೇ ವಯಸ್ಸಿನಿಂದ ಯೋಜನೆ ಮಾರ್ಗಸೂಚಿಯಂತೆ ಕನಿಷ್ಠ 1000ರಿಂದ  5000 ರೂ ವರೆಗೆ ಪೆನ್ಷನ್‌ ಪಡೆಯಬಹುದಾಗಿದೆ.

Savings Tips: ಈ ಯೋಜನೆಗೆ ಸೇರ್ಪಡೆಯಾದ್ರೆ ರೈತರಿಗೆ ಸಿಗುತ್ತೆ ತಿಂಗಳಿಗೆ 3000ರೂ. ಪಿಂಚಣಿ

ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಲು ಸಿಎಂ ಸೂಚನೆ
ರಾಜ್ಯದಲ್ಲಿ ಮೀನುಗಾರರಿಗೆ ಆದ್ಯತೆಯ ಮೇರೆಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?