ಲೋಕಸಭೆಯಲ್ಲಿದ್ದ ಅತ್ಯಂತ ಹಿರಿಯ ವಯಸ್ಸಿನ ಸಂಸದ, ತಮ್ಮ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ 93 ವರ್ಷದ ಸಂಭಾಲ್ ಸಂಸದ ಶಫೀಕರ್ ರಹಮಾನ್ ಬರ್ಕ್ ಮಂಗಳವಾರ ನಿಧನರಾಗಿದ್ದಾರೆ.
ನವದೆಹಲಿ (ಫೆ.27): ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಶಫೀಕರ್ ರಹಮಾನ್ ಬರ್ಕ್ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲದಿಂದ ಅನಾರೋಗ್ಯದಲ್ಲಿದ್ದ ಅವರನ್ನು ಇತ್ತೀಚೆಗೆ ಮೊರಾದಾಬದ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಬರ್ಕ್ ತಮ್ಮ ವಿವಾದಿತ ಮಾತುಗಳ ಕಾರಣದಿಂದಾಗಿ ಸುದ್ದಿಯಾಗುತ್ತಿದ್ದರು. ತೀರಾ ಇತ್ತೀಚೆಗೆ ಅಂದರೆ, ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಮರಳಬೇಕು ಈ ನಿಟ್ಟಿನಲ್ಲಿ ನಾನು ಅಲ್ಲಾನಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದ್ದರು. 2019ರಲ್ಲಿ ಸಂಭಾಲ್‌ನಿಂದ ಐದನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಇವರ ನಿಧನಕ್ಕೆ ಸಮಾಜವಾದಿ ಪಕ್ಷ ಸಂತಾಪ ವ್ಯಕ್ತಪಡಿಸಿದೆ. "ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಶಫೀಕರ್ ರಹಮಾನ್ ಬರ್ಕ್ ಸಾಹೇಬ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅಗಲಿದ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿ ಸಿಗಲಿ. ಶ್ರದ್ಧಾಂಜಲಿ!" ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ತಮ್ಮ ವಿವಾದಿತ ಮಾತುಗಳ ಕಾರಣದಿಂದಾಗಿ ಇವರು ಸುದ್ದಿಯಲ್ಲಿದ್ದರು...
1. ಬಾಬ್ರಿ ಮಸೀದಿಗಾಗಿ ಅಲ್ಲಾನಲ್ಲಿ ಪ್ರಾರ್ಥಿಸುತ್ತೇನೆ..
ಕಳೆದ ತಿಂಗಳು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮುನ್ನಾ ದಿನ ಮಾತನಾಡಿದ್ದ ಬರ್ಕ್, ಬಾಬ್ರಿ ಮಸೀದಿ ಅಯೋಧ್ಯೆಯಲ್ಲಿ ಮರಳಬೇಕು ಈ ನಿಟ್ಟಿನಲ್ಲಿ ಅಲ್ಲಾನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದರು. ನಮ್ಮ ಮಸೀದಿಯನ್ನು ಬಲವಂತದಿಂದ ಕೆಡವಲಾಗಿದೆ, ಮಸೀದಿಯನ್ನು ಕೆಡವಿ ಅದರ ಜಾಗದಲ್ಲಿ ಮಂದಿರ ನಿರ್ಮಿಸುವುದು ಮಾನವೀಯತೆ ಮತ್ತು ಮನುಕುಲದ ಸಂಪ್ರದಾಯಕ್ಕೆ ವಿರುದ್ಧವಾಗಿದೆ, ಇದು ಧರ್ಮ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಬಲವಂತದಿಂದ ಮಸೀದಿ ಕೆಡವಲಾಗಿದೆ ಎಂದು ಹೇಳಿದ್ದರು. 'ಎಲ್ಲರೂ ಸೇರಿ ನನ್ನ ಮಸೀದಿಯನ್ನು ಕೆಡವಿದ್ದಾರೆ, ನಮ್ಮ ಮಸೀದಿಯನ್ನು ಬಲವಂತವಾಗಿ ಕೆಡವಿದ್ದಾರೆ. ಈಗ ನ್ಯಾಯಾಲಯದ ಆಶಯಕ್ಕೆ ವಿರುದ್ಧವಾಗಿ ಅದರ ಮೇಲೆ ದೇವಾಲಯವನ್ನು ನಿರ್ಮಿಸಲಾಗುತ್ತಿದೆ, ನಮ್ಮ ಬಾಬರಿ ಮಸೀದಿಯನ್ನು ಹಿಂದಿರುಗಿಸುವಂತೆ ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಮಾತನಾಡಿದ್ದರು.
2. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರಕ್ಕೆ ಬೆಂಬಲ
ಶಫೀಕರ್ ರಹಮಾನ್ ಬಾರ್ಕ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ್ದನ್ನು ಬೆಂಬಲಿಸಿದ್ದರು. ಅದನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಕೆ ಮಾಡಿದ್ದರು. 'ತಾಲಿಬಾನ್ ತಮ್ಮ ರಾಷ್ಟ್ರವನ್ನು ವಿಮೋಚನೆಗೊಳಿಸಲು ಪ್ರಯತ್ನಿಸುತ್ತಿದೆ, ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳನ್ನು ಗೌರವಿಸಬೇಕು' ಎಂದಿದ್ದರು.
3. ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಗೆ ವಿರೋಧ
2019ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಸದರಾಗಿ ಪ್ರಮಾಣ ವಚನ ಸ್ವೀಕಾರದ ವೇಳೆ ಬರ್ಕ್, ವಂದೇ ಮಾತರಂ ಹೇಳಲು ನಿರಾಕರಿಸಿದ್ದರು. ಇದು ಇಸ್ಲಾಂಗೆ ವಿರುದ್ಧ ಎಂದಿದ್ದರು. ವಂದೇ ಮಾತರಂ ಬಗ್ಗೆ ಹೇಳುವುದಾಗಿ ಇದು ಇಸ್ಲಾಂಗೆ ವಿರುದ್ಧ. ಹಾಗಾಗಿ ಇದನ್ನು ಹಾಡೋದಿಲ್ಲ ಎಂದಿದ್ದರು. ಇದರಿಂದಾಗಿ ಲೋಕಸಭೆಯಲ್ಲಿ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಬಿಜೆಪಿ ಸಂಸದರು ಬರ್ಕ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು.
4. ಹೊಸ ಸಂಸತ್ತಿನಲ್ಲಿ ನಮಾಜ್‌ಗೆ ಸ್ಥಳ ಬೇಕು
ಹೊಸ ಸಂಸತ್ತಿನಲ್ಲಿ ನಮಾಜ್ ಮಾಡಲು ಸೂಕ್ತ ಸ್ಥಳ ಬೇಕು ಎಂದು ಬರ್ಕ್ ಒತ್ತಾಯಿಸಿದ್ದರು. "ಹೊಸ ಸಂಸತ್ತಿನ ಕಟ್ಟಡದಲ್ಲಿಯೂ ಸಹ, ನಮಾಜ್ ಮಾಡಲು ಯಾವುದೇ ಅವಕಾಶವಿಲ್ಲ. ಹೊಸ ಕಟ್ಟಡದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ನಿಗದಿತ ಸ್ಥಳವಿರಬೇಕು. ಕನಿಷ್ಠ ನಮಾಜ್ ಸಮಯದಲ್ಲಿ 'ಅಲ್ಲಾ ಅಲ್ಲಾ' ಅನ್ನು ಹೇಳಿಕೊಳ್ಳಲು ಇದು ಸಾಧ್ಯವಾಗುತ್ತದೆ' ಎಂದಿದ್ದರು.
5. ಬುರ್ಕಾ ಧರಿಸದೇ ಇದ್ದಲ್ಲಿ ಅಶ್ಲೀಲತೆಗೆ ಕಾರಣವಾಗುತ್ತದೆ
ಮಹಿಳೆಯರು ಬುರ್ಖಾ ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶ ನೀಡುವುದರಿಂದ ಪುರುಷರಲ್ಲಿ ಅಶ್ಲೀಲತೆ ಹೆಚ್ಚಾಗುತ್ತದೆ ಎಂದು ಬರ್ಕ್ ಹೇಳಿದ್ದರು. ಸಾರ್ವಜನಿಕವಾಗಿ ಹಿಜಾಬ್ ಓಡಾಡುವುದು ಸಮಾಜಕ್ಕೆ ಹಾನಿಕರ ಎಂದಿದ್ದರು. ಈ ವಿಷಯವು ಸಂಪೂರ್ಣವಾಗಿ ಧಾರ್ಮಿಕವಾಗಿದೆ. ಇಸ್ಲಾಮಿಕ್ ಸಾರ್ವಜನಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹಿಜಾಬ್ ಮೂಲಭೂತ ಅವಶ್ಯಕತೆಯಾಗಿದೆ ಎಂದಿದ್ದರು.
'ಜ.22ಕ್ಕೆ ಬಾಬ್ರಿ ಮಸೀದಿ ವಾಪಾಸ್ ಬರಲಿ ಎಂದು ಅಲ್ಲಾನಿಗೆ ಪ್ರಾರ್ಥಿಸುವೆ..' I.N.D.I.A ಮೈತ್ರಿಯ ಸಂಸದನ ಹೇಳಿಕೆ!
6. ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ
ಹಮಾಸ್ ಎನ್ನುವುದು ಭಯೋತ್ಪಾದಕ ಸಂಘಟನೆಯಲ್ಲ. ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಇಸ್ರೇಲ್ ಹಮಾಸ್ ನಡುವಿನ ಯುದ್ಧದಲ್ಲಿ ಭಾರತ ಪ್ಯಾಲೆಸ್ತೇನ್ ಹಕ್ಕುಗಳಿಗೆ ಹೋರಾಟ ಮಾಡುವ ಹಮಾಸ್‌ನ ಬೆಂಬಲಕ್ಕೆ ನಿಲ್ಲಬೇಕು ಎಂದಿದ್ದರು.
ಬುಲ್ಡೋಜರ್ ಯೋಗಿ ಆದಿತ್ಯನಾಥ್ ಕಡೆ ತಿರುಗಲಿದೆ, SP ನಾಯಕ ಶಫೀಖುರ್ ಎಚ್ಚರಿಕೆ!
7. ಜ್ಞಾನವಾಪಿಯಲ್ಲಿ ಶಿವಲಿಂಗವಿಲ್ಲ
ವಾರಣಾಸಿಯ ಜ್ಞಾನವಾಪಿ ಮಸೀದಿಯ ಅವರಣದಲ್ಲಿ ಯಾವುದೇ ರೀತಿಯ ಶಿವಲಿಂಗವಿಲ್ಲ. ಅಲ್ಲಿ ಕಂಡಿರುವುದು ಕಾರಂಜಿ ಎಂದು ಸಂಭಾಲ್ ಸಂಸದ ಶಫೀಕುರ್ ರೆಹಮಾನ್ ಹೇಳಿದ್ದೂ ಕೂಡ ವಿವಾದಕ್ಕೆ ಕಾರಣವಾಗಿತ್ತು/