ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ವಿಶೇಷ ರೈಲು, ಅ.17 ರಿಂದ ನ.7ವರೆಗೆ ಸೇವೆ!

By Chethan Kumar  |  First Published Oct 13, 2024, 6:30 PM IST

ದಸರಾ ಹಬ್ಬ ಮುಗಿದ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ. ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ನೆರವಾಗುವಂತೆ ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಕೆಲ ವಿಶೇಷ ರೈಲು ಘೋಷಿಸಿದೆ.
 


ಬೆಂಗಳೂರು(ಅ.13) ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೇ ಕೆಲ ವಿಶೇಷ ರೈಲು  ಸೇವೆ ನೀಡುತ್ತಿದೆ. ಸಂಚಾರ ದಟ್ಟಣೆ, ಪ್ರಯಾಣಿಕರಿಗೆ ಆಗುವ ಸಮಸ್ಯೆ ತಪ್ಪಿಸಲು ಭಾರತೀಯ ರೈಲ್ವೇ ಪ್ರತಿ ವಿಭಾಗದಲ್ಲಿ ಹೆಚ್ಚುವರಿ ವಿಶೇಷ ರೈಲು ಸೇವೆ ನೀಡುತ್ತಿದೆ. ಇದೀಗ ಸೌತ್ ವೆಸ್ಟರ್ನ್ ರೈಲ್ವೇ ದೀಪಾವಳಿ ಹಬ್ಬಕ್ಕೆ ವಿಶೇಷ ರೈಲು ಸೇವೆ ನೀಡುತ್ತಿದೆ. ಅಕ್ಟೋಬರ್ 17 ರಿಂದ ನವೆಂಬರ್ 7ರ ವರೆಗೆ ಈ ವಿಶೇಷ ರೈಲುಗಳು ಸೇವೆ ನೀಡಲಿದೆ. ಪ್ರಮುಖವಾಗಿ ಬೆಂಗಳೂರು ರೈಲು ನಿಲ್ದಾಣ ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡುವ ವಿಶೇಷ ರೈಲು ಸೇವೆ ಪಟ್ಟಿ ಬಿಡುಗಡೆಯಾಗಿದೆ.

ಬೆಂಗಳೂರಿನಿಂದ ಜೋಧಪುರದ ಭಗತ್ ರೈಲ್ವೇ ನಿಲ್ದಾಣಕ್ಕೆ, ಹುಬ್ಬಳ್ಳಿಯಿಂದ ಉತ್ತರಖಂಡದ ರಿಷಿಕೇಷ್‌ಗೂ ವಿಶೇಷ ರೈಲು ಸೇವೆ ನೀಡಲಿದೆ. ಇಷ್ಟೇ ಅಲ್ಲ ಶೀಘ್ರದಲ್ಲೇ  ಬೆಂಗಳೂರಿನಿಂದ ಕರ್ನಾಟಕದ ವಿವಿಧ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ವಿಶೇಷ ರೈಲು ವೇಳಾಪಟ್ಟಿ ಬಿಡುಗಡೆಯಾಗಲಿದೆ.

Tap to resize

Latest Videos

ರೈಲ್ವೆ ಹಳಿಯ ಮೇಲೆ ಸಿಲಿಂಡರ್‌ ಪತ್ತೆ, ಉತ್ತರಾಖಂಡದಲ್ಲಿ ದುಷ್ಕೃತ್ಯಕ್ಕೆ ಯತ್ನ!

ಟ್ರೈನ್ ಸಂಖ್ಯೆ 07363/07364
ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಾರಿ ರಿಷಿಕೇಷ್ ಮಾರ್ಗದಲ್ಲಿ ವಾರದಲ್ಲಿ ವಿಶೇಷ ನಾಲ್ಕು ಟ್ರಿಪ್ ಸೇವೆ ನೀಡಲಿದೆ. 07363 ರೈಲು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾತ್ರಿ 8.30ಕ್ಕೆ ಹೊರಡಲಿದೆ. ಅಕ್ಟೋಬರ್ 14 ರಿಂದ ನವೆಂಬರ್ 4ರ ವರೆಗೆ  ಈ ವಿಶೇಷ ರೈಲು ಸೇವೆ ನೀಡಲಿದೆ. ಇನ್ನು ಇದೇ ರಿಷಿಕೇಶ್‌ದಿಂದ ಮರಳಿ ಹುಬ್ಬಳ್ಳಿಗೆ ಬರುವ ರೈಲು ಸಂಖ್ಯೆ 07364, ರಿಷಿಕೇಶ್‌ದಿಂದ ಬೆಳಗ್ಗೆ 6.15ಕ್ಕೆ ಹೊರಡಲಿದೆ. ಇದು ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಸೇವೆ ನೀಡಲಿದೆ.  

ಹುಬ್ಬಳ್ಳಿಯಿಂದ ಹೊರಡುವ ಈ ರೈಲು ಧಾರವಾಡ, ಲೊಂಡಾ, ಬೆಳಗಾವಿ, ಪುಣೆ, ಗ್ವಾಲಿಯರ್, ಮಥುರಾ, ಹಜ್ರತ್, ನಿಜಾಮುದ್ದೀನ್ ಹಾಗೂ ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆಯಾಗಲಿದೆ. ಬಳಿಕ ರಿಷಿಕೇಶ್ ತಲುಪಲಿದೆ. ರಿಷಿಕೇಶ್‌ದಿಂದ ಮರಳಿ ಬರುವ ರೈಲು ಕೂಡ ಇದೇ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಟ್ರೈನ್ ಸಂಖ್ಯೆ 06587/06588
ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಜೋಧಪುರದ ಭಗತ್ ಕೊಥಿ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಈ ರೈಲು ಬೆಂಗಳೂರಿನಿಂದ ಸಂಜೆ 5.45ಕ್ಕೆ ಹೊರಡಲಿದೆ. ಇನ್ನು ಭಗತ್ ಕೊಥಿ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗ ಈ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಈ ರೈಲು ಬೆಂಗಳೂರಿನ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಟು ಬಾಣಸವಾಡಿ, ತುಮಕೂರು, ದಾವಣಗೆರೆ, ಪುಣೆ, ಸೂರತ್, ವಡೋದರ, ಹಾಗೂ ಅಬು ರೋಡ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ  
 

click me!